ನರಗುಂದ: ಬಾಗಲಕೋಟೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್ ಅವರು ಗದಗ ಜಿಲ್ಲೆಯ ನರಗುಂದ ತಾಲೂಕಿನ ಹುಯಿಲಗೋಳ ಹಾಗೂ ಹೊಂಬಳ ಗ್ರಾಮದಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿ, ಮತಯಾಚಿಸಿದರು. ಕೇಂದ್ರದ ಬಿಜೆಪಿ ಸರ್ಕಾರ ಬೆಲೆ ಇಳಿಕೆ ಮಾಡುವಲ್ಲಿ ವಿಫಲವಾಗಿದೆ. ಆದ್ದರಿಂದ ಹಳ್ಳಿ ಜನರ ಬದುಕು ಕಷ್ಟವಾಗಿದೆ. ಆದರೆ ನಮ್ಮ ಕಾಂಹ್ರೆಸ್ ಸರ್ಕಾರ ಬಡವರಿಗೆ ಗ್ಯಾರಂಟಿ ನೀಡಿ ಬದುಕಲು ನೆರವಾಗಿದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿ. ನಿಮಗಾಗಿ ಕೆಲಸ ಮಾಡುತ್ತೇನೆ ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕರಾದ ಶ್ರೀ ಬಿ ಆರ್ ಯಾವಗಲ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ರಮೇಶ ಬೆಳಗಟ್ಟಿ, ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಶ್ರೀ ಎಂ ಎಸ್ ಪಾಟೀಲ್ ಹಾಗೂ ಇತರೆ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ನರಗುಂದ ತಾಲೂಕಿನ ಹುಯಿಲಗೋಳ, ಹೊಂಬಳದಲ್ಲಿ ಸಂಯುಕ್ತ ಪಾಟೀಲ್ ಮತಯಾಚನೆ
No Ads
Log in to write reviews