ಜನರ ಸಂಕಷ್ಟಕ್ಕೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳು ಆಧಾರವಾಗಿವೆ. ಅವರ ಬದುಕನ್ನು ಸರಳ ಮತ್ತು ಸುಲಭ ಮಾಡಿವೆ. ಇಂತಹ ಜನೋಪಯೋಗಿ ಕಾರ್ಯಗಳನ್ನು ಮಾಡುತ್ತಾ ಬರುತ್ತಿರುವುದು ನಮ್ಮ ಕಾಂಗ್ರೆಸ್ ಎಂದು ಬಾಗಲಕೋಟ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತ ಪಾಟೀಲ್ ಅವರು ಹೇಳಿದರು. ಹೆಣ್ಣು ಮಕ್ಕಳಿಗೆ ಸಂಸಾರ ನಡೆಸಲು, ಮಕ್ಕಳ ವಿದ್ಯಾಭ್ಯಾಸಕ್ಕೆ ಹೀಗೆ ಹಲವು ರೀತಿಯಲ್ಲಿ ಗ್ಯಾರಂಟಿ ಸಹಾಯಕ್ಕೆ ಬಂದಿವೆ. ಸಿದ್ದರಾಮಯ್ಯ ಅವರ ಸರ್ಕಾರ ಜಾರಿ ಮಾಡಿದ ಹಲವು ಯೋಜನೆಗಳು ಸಾಕಷ್ಟು ಉಪಯೋಗವಾಗುತ್ತಿವೆ. ಯುವಕರ, ರೈತರ, ಮಹಿಳೆಯ ಪರ ನಿಲ್ಲದ ಬಿಜೆಪಿ ಸರ್ಕಾರವನ್ನು ತಿರಸ್ಕರಿಸಿ ಎಂದು ಅವರು ಕರೆ ನೀಡಿದರು. ಅತಿ ಹೆಚ್ಚು ಜಿಎಸ್‌ಟಿ ನೀಡುವ ರಾಜ್ಯಗಳಲ್ಲಿ ನಮ್ಮ ಕರ್ನಾಟಕವೂ ಒಂದು. ಇದರಲ್ಲಿ ಜನಸಾಮಾನ್ಯರ ಪಾಲೂ ಇದೆ. ಆದರೆ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಏನು ನೀಡಿದೆ ಎಂದು ಸಂಯುಕ್ತ ಅವರು ಪ್ರಶ್ನಿಸಿದರು. ನಿಮ್ಮ ಕಷ್ಟದ ಪರಿಸ್ಥಿತಿಯಲ್ಲಿ ನಿಮ್ಮ ಜೊತೆ ನಿಂತು ನಿಮಗೆ ಶಕ್ತಿ ತುಂಬುವುದು ಪ್ರತಿ ಸರ್ಕಾರದ ಜವಾಬ್ದಾರಿ. ಕಳೆದ ಹತ್ತು ವರ್ಷಗಳಲ್ಲಿ ದೇಶದ ಸಾಲ ಸಾಕಷ್ಟು ಹೆಚ್ಚಿದೆ. ಜನರಿಗೆ ಏನೂ ನೀಡದ ಸರ್ಕಾರ ಸಾಲವನ್ನು ಮಾತ್ರ ಹೆಚ್ಚಳ ಮಾಡಿದೆ. ಇದು ಹೇಗೆ ಎಂದರು. ಸಾರಿಗೆ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ಮಾತನಾಡಿ, ರಾಜ್ಯದ ಬರಪರಿಹಾರಕ್ಕೆ ಕೇಂದ್ರ ಸರ್ಕಾರಕ್ಕೆ ಸಾಕಷ್ಟು ಮೊದಲೇ ಅರ್ಜಿ ಸಲ್ಲಿಸಿದರೂ ನಮಗೆ ಹಣ ಬಿಡುಗಡೆ ಮಾಡಲಿಲ್ಲ. ರೈತರ ಬಗ್ಗೆ ಕಾಳಜಿ ಇಲ್ಲದ ಸರ್ಕಾರವನ್ನು ತಿರಸ್ಕರಿಸಿ. ನಮ್ಮ ಸಂಸದರೂ ರೈತರಿಗೆ ಬರಬೇಕಾದ ಪರಿಹಾರದ ಬಗ್ಗೆ ಮಾತನಾಡಲಿಲ್ಲ. ಆದ್ದರಿಂದ ಈ ಬಾರಿ ಕಾಂಗ್ರೆಸ್ ಗೆಲ್ಲಿಸಿ ಎಂದು ಮನವಿ ಮಾಡಿದರು. ಸಭೆಯಲ್ಲಿ ಶಾಸಕರಾದ ಎಚ್ ವೈ ಮೇಟಿ, ಮುಖಂಡರಾದ ಬಾಯಕ್ಕಾ ಮೇಟಿ, ಮಲ್ಲಿಕಾರ್ಜುನ ಚರಂತಿಮಠ, ಸಂತೋಷ್ ಹೊಕ್ರಾಣಿ ಇತರೆ ಮುಖಂಡರು ಉಪಸ್ಥಿತರಿದ್ದರು.
ಯುವಕರ, ರೈತರ, ಮಹಿಳೆಯ ಪರ ನಿಲ್ಲದ ಬಿಜೆಪಿ ಸರ್ಕಾರವನ್ನು ತಿರಸ್ಕರಿಸಿ: ಸಂಯುಕ್ತ ಪಾಟೀಲ್
No Ads
Log in to write reviews