ಆಧ್ಮಾತಿಕ ಗುರು, ಈಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ್ ಅವರಿಗೆ ತುರ್ತು ಮೆದುಳಿನ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಸದ್ಗುರು ಜಗ್ಗಿ ವಾಸುದೇವ್ ಅವರ ಜೀವಕ್ಕೆ ಅಪಾಯ ಎದುರಾಗಿದ್ದು, ಅವರು ಬದುಕಿದ್ದೇ ಒಂದು ಪವಾಡ ಅನ್ನೋ ಮಾತು ಕೇಳಿ ಬರುತ್ತಿದೆ. ಸದ್ಗುರುವಿಗೆ ಚಿಕಿತ್ಸೆ ನೀಡಿದ ಅಪೋಲೋ ಆಸ್ಪತ್ರೆಯ ನ್ಯೂರಾಲಿಜಿಸ್ಟ್ ಡಾ. ವಿನಿತ್ ಸೂರಿ ಅವರು ಆಧ್ಯಾತ್ಮಿಕ ಗುರುವಿಗೆ ಏನಾಯ್ತು ಅನ್ನೋ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ದೆಹಲಿಯ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸದ್ಗುರು ಜಗ್ಗಿ ವಾಸುದೇವ್ ಅವರು ಸದ್ಯ ಆರೋಗ್ಯವಾಗಿದ್ದು, ಯಾವುದೇ ತೊಂದರೆ ಇಲ್ಲ. ಅವರು ಜೀವದ ಅಪಾಯವನ್ನು ದಾಟಿ ಬಂದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.ಡಾ. ವಿನಿತ್ ಸೂರಿ ನೀಡಿರುವ ಮಾಹಿತಿ ಪ್ರಕಾರ ಸದ್ಗುರು ಜಗ್ಗಿ ವಾಸುದೇವ್ ಅವರಿಗೆ ಕಳೆದ 4 ವಾರಗಳ ಹಿಂದೆಯೇ ತಲೆನೋವು ಬಂದಿತ್ತು. ತುಂಬಾ ತಲೆನೋವು ಇದ್ರೂ ಅದನ್ನ ಅವರು ನಿರ್ಲಕ್ಷ್ಯ ಮಾಡಿದ್ದರು. ಎಂದಿನಂತೆ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು. ಕಳೆದ ಮಾರ್ಚ್ 8ರಂದು ಮಹಾಶಿವರಾತ್ರಿ ಹಬ್ಬದ ಆಚರಣೆಯಲ್ಲೂ ಸದ್ಗುರು ಜಗ್ಗಿ ವಾಸುದೇವ್ ಅವರಿಗೆ ಆರೋಗ್ಯದ ಸಮಸ್ಯೆ ಎದುರಾಗಿತ್ತು. ಆದರೆ ತಮ್ಮ ಸಮಸ್ಯೆಯನ್ನ ಅವರು ಯಾರಿಗೂ ಹೇಳಿರಲಿಲ್ಲ.ಕಳೆದ ಮಾರ್ಚ್ 15ರಂದು ಸದ್ಗುರು ಅವರಿಗೆ ತಲೆನೋವು ತುಂಬಾ ಹೆಚ್ಚಾಗಿದೆ. ಅಂದು ಸಂಜೆ 4ಗಂಟೆಗೆ MRI ಸ್ಕ್ಯಾನ್ ಮಾಡಲು ವೈದ್ಯರು ಹೇಳಿದ್ದಾರೆ. ಆಗ ಸದ್ಗುರು ಜಗ್ಗಿ ವಾಸುದೇವ್ ಅವರು ನನಗೆ ಸಂಜೆ 6 ಗಂಟೆಗೆ ಬಹಳ ಮುಖ್ಯವಾದ ಮೀಟಿಂಗ್ ಇದೆ. ಅದಕ್ಕೆ ನಾನು ಅಟೆಂಟ್ ಮಾಡಲೇಬೇಕು. ಕಳೆದ 40 ವರ್ಷದಲ್ಲೇ ಈ 6 ಗಂಟೆಯ ಮೀಟಿಂಗ್ ಅನ್ನು ನಾನು ತಪ್ಪಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.ಕೂಡಲೇ ಆಸ್ಪತ್ರೆ ವೈದ್ಯರು MRI ಮಾಡಿಸಿದಾಗ ಮೆದುಳಿನಲ್ಲಿ ರಕ್ತಸ್ರಾವ ಆಗುತ್ತಿರೋದು ಪತ್ತೆಯಾಯಿತು. ಕಳೆದ 3 ವಾರದಿಂದಲೇ ಸದ್ಗುರು ಜಗ್ಗಿ ವಾಸುದೇವ್ ಅವರಿಗೆ ಈ ಸಮಸ್ಯೆ ಇರೋದು ಪತ್ತೆಯಾಗಿತ್ತು. MRI ಸ್ಕ್ಯಾನ್ ಮಾಡಿದ ಮೇಲೂ ಸದ್ಗುರು ಅವರು ಸಂಜೆ 6 ಗಂಟೆಯ ಮೀಟಿಂಗ್ ಅಟೆಂಟ್ ಮಾಡಲು ಹೋಗಿದ್ದಾರೆ. ಅಲ್ಲಿ ಕೂಡ ಯಾರಿಗೂ ಅವರಿಗೆ ಅನಾರೋಗ್ಯ ಇದೆ ಅನ್ನೋದನ್ನ ಹೇಳಲಿಲ್ಲ.ಇದಾದ ಮರು ದಿನ ಸದ್ಗುರು ಅವರು ಇಂಡಿಯಾ ಟುಡೇ ನಡೆಸಿಕೊಟ್ಟ ಕಾನ್‌ಕ್ಲೇವ್‌ಗೆ ಹೋಗಿದ್ದಾರೆ. ಬಹಳಷ್ಟು ನೋವಿನಲ್ಲಿ ಕಾನ್‌ಕ್ಲೇವ್ ಅಟೆಂಡ್ ಮಾಡಿದ ಸದ್ಗುರು ಅವರು ಪೇನ್ ಕಿಲ್ಲರ್ ಔಷಧಿ ತೆಗೆದುಕೊಂಡಿದ್ದರು. ಅಷ್ಟು ನೋಡವಿನಲ್ಲೂ ಇಂಡಿಯಾ ಟುಡೇ ಕಾನ್‌ಕ್ಲೇವ್‌ನಲ್ಲಿ ಅದ್ಭುತ ಸಂದರ್ಶನ ನೀಡಿದ್ದಾರೆ.
ಸದ್ಗುರು ಬದುಕಿದ್ದೇ ಪವಾಡ.. ಮೆದುಳಿನ ರಕ್ತಸ್ರಾವ ಗೊತ್ತಾದ ಮೇಲೂ ಕರ್ತವ್ಯ ಮರೆಯಲಿಲ್ಲ
No Ads
Log in to write reviews