ಕೇವಲ ಎರಡು ತಿಂಗಳಲ್ಲಿ 120ನೇ ಹುಟ್ಟುಹಬ್ಬ ಆಚರಿಸಿಕೊಳ್ಳುವ ಸಿದ್ಧತೆಯಲ್ಲಿರುವ ಬ್ರೆಜಿಲ್ ನ ಡಿಯೊಲಿರಾ ಗ್ಲಿಸೇರಿಯಾ ಪೆಡ್ರೊ ಡಸಲ್ವಾ ಎಂಬ ಮುತ್ತಜ್ಜಿ, ವಿಶ್ವದಲ್ಲಿ ಜೀವಂತವಿರುವ ಅತ್ಯಂತ ಹಿರಿಯ ಮಹಿಳೆ ಎಂಬ ಪಟ್ಟ ಗಿಟ್ಟಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎಂದು ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಪ್ರಕಟಿಸಿದೆ.
ಮತ್ತೊಬ್ಬ ಬ್ರೆಜಿಲಿಯನ್ ಇನ್ಹಾ ಕೆನಬರ್ರೊ ಲೂಕಸ್ ಎಂಬ 116
ವರ್ಷದ ಮಹಿಳೆ ಅಧಿಕೃತವಾಗಿ ಸದ್ಯ ವಿಶ್ವದ ಹಿರಿಯಜ್ಜಿ ಎನಿಸಿಕೊಂಡಿದ್ದಾರೆ. ಆದರೆ ಡಿಯೊಲಿರಾ ಈ ಪಟ್ಟವನ್ನು ಸದ್ಯದಲ್ಲೇ ಅಲಂಕರಿಸಲಿದ್ದಾರೆ ಎಂಬ ವಿಶ್ವಾಸವನ್ನು ಅವರ ಮನೆಯವರು ಮತ್ತು ವೈದ್ಯರು ಹೊಂದಿದ್ದಾರೆ.
ಇವರ ಹೆಸರು ಇನ್ನೂ ಪುಸ್ತಕದಲ್ಲಿ ದಾಖಲಾಗಿಲ್ಲ. ಆದರೆ ಅವರ ಬಗ್ಗೆ ಇರುವ ದಾಖಲೆಗಳ ಪ್ರಕಾರ ಇವರು ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂದು ಡಿಯೊಲಿರಾ ಅವರ ವಯಸ್ಸಿನ ಅರ್ಧದಷ್ಟು ವಯಸ್ಸಾಗಿರುವ ಮೊಮ್ಮಗಳು ಡೊರೋಟಿಯಾ ಫೆರೇರಾ ಡ ಸಿಲ್ವಾ ಹೇಳಿದ್ದಾರೆ.
ದಾಖಲೆಗಳ ಪ್ರಕಾರ ಪೆಡ್ರೊ ಡಸಲ್ವಾ 1905ರ ಮಾರ್ಚ್ 10ರಂದು ರಿಯೊ ರಾಜ್ಯದ ಪೊರ್ಸಿನ್ ಕುಲ ಎಂಬ ಗ್ರಾಮದಲ್ಲಿ ಜನಿಸಿದ್ದಾರೆ. ಪ್ರಸ್ತುತ ಇಟಪೆರುನಾ ಎಂಬಲ್ಲಿರುವ ವರ್ಣರಂಜಿತವಾಗಿ ಅಲಂಕೃತವಾಗಿರುವ ಮನೆಯಲ್ಲಿ ವಾಸವಿದ್ದು, ಮೊಮ್ಮಕ್ಕಳಾದ ಡೊರೋಟಿಯಾ 60 ಮತ್ತು ಲಿಡಿಯಾ ಫೆರೇರಾ ಡ ಸಿಲ್ವಾ 64 ಎಂಬವರ ಆರೈಕೆಯಲ್ಲಿದ್ದಾರೆ.
Log in to write reviews