2024ರಲ್ಲಿ ಅತ್ಯಂತ ಕುತೂಹಲ ಮೂಡಿಸಿರುವ ಸಿನಿಮಾ ಪುಷ್ಪ 2 (Pushpa 2). ಅಲ್ಲು ಅರ್ಜುನ್ (Allu Arjun) ಹಾಗೂ ರಶ್ಮಿಕಾ (Rashmika Mandanna) ಅಭಿನಯದ ಈ ಸಿನಿಮಾ ಸಿಕ್ಕಾಪಟ್ಟೆ ಕುತೂಹಲವನ್ನು ಸೃಷ್ಟಿಸಿದೆ. ಸಿನಿಮಾ ಭಾರೀ ಕುತೂಹಲ ಮೂಡಿಸಿರುವ ಸಂದರ್ಭದಲ್ಲಿಯೇ ಈ ಕುರಿತು ಹೊಸ ಅಪ್ಡೇಟ್ಸ್ (Updates) ಬಂದಾಗ ತಟ್ಟನೆ ವೈರಲ್ ಆಗುತ್ತಿದೆ. ಸಿನಿಮಾ ಕುರಿತ ಸಣ್ಣ-ಪುಟ್ಟ ವಿಚಾರಗಳು ದೊಡ್ಡಮಟ್ಟದಲ್ಲಿ ಸದ್ದು ಮಾಡುತ್ತಿವೆ. ಇದೀಗ ಪುಷ್ಪ 2 ಸಿನಿಮಾದಲ್ಲಿ ರಶ್ಮಿಕಾ ಅವರ ರೇರ್ ಲುಕ್ ಒಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಪುಷ್ಪ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರ ಅಭಿನಯವು ಅವರನ್ನು ರಾತ್ರೋರಾತ್ರಿ ಸ್ಟಾರ್‌ಡಮ್‌ಗೆ ತಂದುಕೊಟ್ಟಿತು. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೀರೋಯಿನ್ ಕ್ರೇಜ್ ಡಬಲ್ ಮಾಡಿತ್ತು. ಅಂದಿನಿಂದ, ಅವರ ಜನಪ್ರಿಯತೆಯು ಗಗನಕ್ಕೇರಿದೆ. ಶ್ರೀವಲ್ಲಿಯ ಪಾತ್ರವು ಅವರ ಹೆಸರಿನೊಂದಿಗೆ ಜೋಡಿಸಲ್ಪಟ್ಟಿದೆ.
ಸೀರೆ, ಮೈತುಂಬಾ ಒಡವೆ, ಕನಕಾಂಬರ ಹೂ ರಶ್ಮಿಕಾ ಮಂದಣ್ಣ
No Ads
Log in to write reviews