ಜೈಲಲ್ಲೇ ರಾಕೇಶ್ ಅಡಿಗ ಮುಂದೆ ಗಳಗಳನೆ ಕಣ್ಣೀರಿಟ್ಟ ಸೋನು ಗೌಡ ಬೆಂಗಳೂರು: ಅಕ್ರಮವಾಗಿ ಮಗು ದತ್ತು ಪಡೆದ ಆರೋಪದಲ್ಲಿ ರೀಲ್ಸ್ ಸ್ಟಾರ್, ಬಿಗ್‌ಬಾಸ್ ಸ್ಪರ್ಧಿ ಸೋನು ಗೌಡ ಅವರು ಜೈಲುವಾಸ ಅನುಭವಿಸುತ್ತಿದ್ದಾರೆ. ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ಸೋನುಗೌಡ ಅವರ ಜಾಮೀನ ಬಗ್ಗೆ ನಾಳೆ ನಿರ್ಧಾರವಾಗಲಿದೆ. ಇದರ ಮಧ್ಯೆ ಬಿಗ್‌ಬಾಸ್ OTT ಸ್ಪರ್ಧಿ ರಾಕೇಶ್ ಅಡಿಗ ಅವರು ಸೋನು ಗೌಡ ಬೆಂಬಲಕ್ಕೆ ನಿಂತಿದ್ದಾರೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಸೋನುಗೌಡನ್ನನು ಮಾತನಾಡಲು ಮಾಡಲು ಆಪ್ತ ಸ್ನೇಹಿತ ರಾಕೇಶ್ ಅಡಿಗ ಭೇಟಿ ಮಾಡಿದ್ದಾರೆ. ಈ ವೇಳೆ ಸೋನು ಗೌಡ ಯಾವ ತಪ್ಪು ಮಾಡದೆ ಇರೋ ನನಗೆ ಏಕೆ ಈ ಶಿಕ್ಷೆ. ನಾನು ಒಳ್ಳೆಯದನ್ನು ಬಯಸಿ ಮಗುವನ ಕೇರ್ ಮಾಡಿದ್ದೆ. ಬೇರೆ ಏನೂ ತಪ್ಪು ಮಾಡಿಲ್ಲ? ನಾನು ಒಳ್ಳೆಯದು ಮಾಡಿದ್ರು ಜನಗಳ ಹತ್ತಿರ ಅನಿಸಿಕೊಳ್ಳಬೇಕಾ ಎಂದು ರಾಕೇಶ್ ಅವರ ಮುಂದೆ ಅಳಲು ತೋಡಿಕೊಂಡಿದ್ದರಂತೆ. ಇನ್ನು ಈ ಬಗ್ಗೆ ನ್ಯೂಸ್ ಫಸ್ಟ್ನೊಂದಿಗೆ ಮಾತಾಡಿದ ರಾಕೇಶ್ ಅಡಿಗ, ಈ ಕೇಸ್ನಲ್ಲಿ ಸೋನು ಗೌಡ ತಪ್ಪಿಲ್ಲ. ಸೋನುಗೆ ಈ ಕಾನೂನಿನ ಗಂಭೀರತೆ ತಿಳಿಸಿ ಬಿಡಬಹುದಿತ್ತು. ಈ ಪ್ರಕರಣದಲ್ಲಿ ದತ್ತು ಪ್ರಕ್ರಿಯೆ ಕಾನೂನಿನ ಪ್ರಕಾರ ನಡೆದಿಲ್ಲ. ಹಾಗಾದ್ರೆ, ಇಲ್ಲಿ ದತ್ತು ಪಡೆದುಕೊಂಡಿಲ್ಲ ಅಂತ ಅರ್ಥ. ಹಾಗಾಗಿ ಈ ಪ್ರಕರಣದಲ್ಲಿ ಸೋನು ಆರೋಪಿಯಾಗಲ್ಲ. ಈ ಕೇಸ್ನಲ್ಲಿ ಎಲ್ಲರ ಕಾರ್ಯವೈಖರಿ ಗೊತ್ತಿದೆ? ಸಿಡಬ್ಲ್ಯೂಸಿ ಅಧಿಕಾರಿಗಳ ನಡೆ ಏನು ಅಂತ ಗೊತ್ತಿದೆ? ಸೋನು ವಿರುದ್ಧ ಕೆಲಸ ಆಗುತ್ತಿರಬಹುದು. ಈ ಕೇಸ್ನಲ್ಲಿ ಸಮಾನತೆ ಕಾಣುತ್ತಿಲ್ಲ. ಎಲ್ಲರ ವಿಷ್ಯದಲ್ಲೂ ಇಷ್ಟೇ ಗಂಭೀರವಾಗಿ ಕ್ರಮ ತೆಗೆದುಕೊಳ್ತಿದ್ದಾರಾ? ಬರೀ ಸೋನು ಗೌಡನೇ ಯಾಕೆ? ಮಗುವಿನ ಪೋಷಕರಿಂದ ಹೈಕೋರ್ಟ್ನಲ್ಲಿ ಎಫ್ಐಆರ್ ರದ್ದು ಕೋರಿ ಅರ್ಜಿ ಹಾಕಲಾಗಿದೆ. ಸೆಷನ್ಸ್ ಕೋರ್ಟ್ನಲ್ಲಿ ಜಾಮೀನು ಅರ್ಜಿ ವಿಚಾರಣೆ ಆಗುತ್ತಿದೆ. ನಾಳೆ ಜಾಮೀನು ಸಿಗುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.ಬೆಂಗಳೂರು: ಅಕ್ರಮವಾಗಿ ಮಗು ದತ್ತು ಪಡೆದ ಆರೋಪದಲ್ಲಿ ರೀಲ್ಸ್ ಸ್ಟಾರ್, ಬಿಗ್‌ಬಾಸ್ ಸ್ಪರ್ಧಿ ಸೋನು ಗೌಡ ಅವರು ಜೈಲುವಾಸ ಅನುಭವಿಸುತ್ತಿದ್ದಾರೆ. ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ಸೋನುಗೌಡ ಅವರ ಜಾಮೀನ ಬಗ್ಗೆ ನಾಳೆ ನಿರ್ಧಾರವಾಗಲಿದೆ. ಇದರ ಮಧ್ಯೆ ಬಿಗ್‌ಬಾಸ್ OTT ಸ್ಪರ್ಧಿ ರಾಕೇಶ್ ಅಡಿಗ ಅವರು ಸೋನು ಗೌಡ ಬೆಂಬಲಕ್ಕೆ ನಿಂತಿದ್ದಾರೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಸೋನುಗೌಡನ್ನನು ಮಾತನಾಡಲು ಮಾಡಲು ಆಪ್ತ ಸ್ನೇಹಿತ ರಾಕೇಶ್ ಅಡಿಗ ಭೇಟಿ ಮಾಡಿದ್ದಾರೆ. ಈ ವೇಳೆ ಸೋನು ಗೌಡ ಯಾವ ತಪ್ಪು ಮಾಡದೆ ಇರೋ ನನಗೆ ಏಕೆ ಈ ಶಿಕ್ಷೆ. ನಾನು ಒಳ್ಳೆಯದನ್ನು ಬಯಸಿ ಮಗುವನ ಕೇರ್ ಮಾಡಿದ್ದೆ. ಬೇರೆ ಏನೂ ತಪ್ಪು ಮಾಡಿಲ್ಲ? ನಾನು ಒಳ್ಳೆಯದು ಮಾಡಿದ್ರು ಜನಗಳ ಹತ್ತಿರ ಅನಿಸಿಕೊಳ್ಳಬೇಕಾ ಎಂದು ರಾಕೇಶ್ ಅವರ ಮುಂದೆ ಅಳಲು ತೋಡಿಕೊಂಡಿದ್ದರಂತೆ. ಇನ್ನು ಈ ಬಗ್ಗೆ ನ್ಯೂಸ್ ಫಸ್ಟ್ನೊಂದಿಗೆ ಮಾತಾಡಿದ ರಾಕೇಶ್ ಅಡಿಗ, ಈ ಕೇಸ್ನಲ್ಲಿ ಸೋನು ಗೌಡ ತಪ್ಪಿಲ್ಲ. ಸೋನುಗೆ ಈ ಕಾನೂನಿನ ಗಂಭೀರತೆ ತಿಳಿಸಿ ಬಿಡಬಹುದಿತ್ತು. ಈ ಪ್ರಕರಣದಲ್ಲಿ ದತ್ತು ಪ್ರಕ್ರಿಯೆ ಕಾನೂನಿನ ಪ್ರಕಾರ ನಡೆದಿಲ್ಲ. ಹಾಗಾದ್ರೆ, ಇಲ್ಲಿ ದತ್ತು ಪಡೆದುಕೊಂಡಿಲ್ಲ ಅಂತ ಅರ್ಥ. ಹಾಗಾಗಿ ಈ ಪ್ರಕರಣದಲ್ಲಿ ಸೋನು ಆರೋಪಿಯಾಗಲ್ಲ. ಈ ಕೇಸ್ನಲ್ಲಿ ಎಲ್ಲರ ಕಾರ್ಯವೈಖರಿ ಗೊತ್ತಿದೆ? ಸಿಡಬ್ಲ್ಯೂಸಿ ಅಧಿಕಾರಿಗಳ ನಡೆ ಏನು ಅಂತ ಗೊತ್ತಿದೆ? ಸೋನು ವಿರುದ್ಧ ಕೆಲಸ ಆಗುತ್ತಿರಬಹುದು. ಈ ಕೇಸ್ನಲ್ಲಿ ಸಮಾನತೆ ಕಾಣುತ್ತಿಲ್ಲ. ಎಲ್ಲರ ವಿಷ್ಯದಲ್ಲೂ ಇಷ್ಟೇ ಗಂಭೀರವಾಗಿ ಕ್ರಮ ತೆಗೆದುಕೊಳ್ತಿದ್ದಾರಾ? ಬರೀ ಸೋನು ಗೌಡನೇ ಯಾಕೆ? ಮಗುವಿನ ಪೋಷಕರಿಂದ ಹೈಕೋರ್ಟ್ನಲ್ಲಿ ಎಫ್ಐಆರ್ ರದ್ದು ಕೋರಿ ಅರ್ಜಿ ಹಾಕಲಾಗಿದೆ. ಸೆಷನ್ಸ್ ಕೋರ್ಟ್ನಲ್ಲಿ ಜಾಮೀನು ಅರ್ಜಿ ವಿಚಾರಣೆ ಆಗುತ್ತಿದೆ. ನಾಳೆ ಜಾಮೀನು ಸಿಗುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.
ಜೈಲಲ್ಲೇ ರಾಕೇಶ್ ಅಡಿಗ ಮುಂದೆ ಗಳಗಳನೆ ಕಣ್ಣೀರಿಟ್ಟ ಸೋನು ಗೌಡ
No Ads
Log in to write reviews