ಮಾಜಿ ಗರ್ಲ್ಫ್ರೆಂಡ್ಗಳ ಖಾಸಗಿ ಫೋಟೊಗಳ ಅಪ್ಲೋಡ್: ಹಣ ಕೊಟ್ಟರೆ ಫೊಟೊ ಡಿಲೀಟ್ ಮಾಡುವುದಾಗಿ ಬ್ಲಾಕ್ಮೇಲ್
ಫಿನಾಲೆ ವಾರ ಹತ್ತಿರ ಬರುತ್ತಿದ್ದಂತೆ ರಜತ್ ಕುಟುಂಬಕ್ಕೆ ತಲೆನೋವೊಂದು ಶುರುವಾಗಿದೆ. ಕೆಲ ಟ್ರೋಲ್ ಪೇಜ್ಗಳು ರಜತ್ ಅವರ ಹಳೆಯ ಚಿತ್ರಗಳನ್ನು ಹೆಕ್ಕಿ ತೆಗೆದಿದ್ದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ರಜತ್ರ ಮಾನ ಹಾನಿಗೆ ಯತ್ನ ನಡೆಸಿವೆ. ರಜತ್ರ ಮಾಜಿ ಗರ್ಲ್ಫ್ರೆಂಡ್ ಜೊತೆಗಿನ ಚಿತ್ರಗಳನ್ನು ಕೆಲ ಟ್ರೋಲ್ ಪೇಜ್ಗಳು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದವು. ಇದು ರಜತ್ರ ಪತ್ನಿಯ ಗಮನಕ್ಕೆ ಬಂದು, ಕೂಡಲೇ ಚಿತ್ರಗಳನ್ನು ತೆಗೆಯುವಂತೆ ಮನವಿ ಮಾಡಿದ್ದಾರೆ.
ಆಗ ಟ್ರೋಲ್ ಪೇಜ್ನವರು, ಹಣ ಕೊಟ್ಟರೆ ಫೊಟೊ ಡಿಲೀಟ್ ಮಾಡುವುದಾಗಿ ಹೇಳಿದ್ದರೆ ಅದರಂತೆ ರಜತ್ ಪತ್ನಿ ಅಕ್ಷಿತಾ ಅವರು 6500 ರೂಪಾಯಿ ಹಣ ಹಾಕಿದ್ದಾರೆ. ಅದಾದ ಬಳಿಕ ಫೋಟೊ ಡಿಲೀಟ್ ಮಾಡಿದ್ದ ಟ್ರೋಲ್ ಪೇಜ್ಗಳು ಅದಾದ ಬಳಿಕ ಮತ್ತೊಂದು ಸಾಮಾಜಿಕ ಜಾಲತಾಣ ಖಾತೆಯಿಂದ ಮತ್ತೆ ಅದೇ ಫೋಟೊಗಳನ್ನು ಅಪ್ಲೋಡ್ ಮಾಡಿದ್ದು, ಡಿಲೀಟ್ ಮಾಡುವಂತೆ ಕೇಳಿದರೆ ಮತ್ತೆ ಹಣ ಕೇಳಿದ್ದಾರೆ.
ಇದರಿಂದ ಬೇಸತ್ತಿರುವ ರಜತ್ರ ಪತ್ನಿ ಅಕ್ಷಿತಾ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ. ರಜತ್ ಅವರ ಪತ್ನಿ ಅವರಿಂದ ಹಣ ಕೇಳಿದ ಮತ್ತು ರಜತ್ ಹಾಗೂ ಅವರ ಮಾಜಿ ಗರ್ಲ್ಫ್ರೆಂಡ್ ಅವರುಗಳ ಖಾಸಗಿ ಫೋಟೊಗಳನ್ನು ಅಪ್ಲೋಡ್ ಮಾಡಿದ್ದ ಖಾತೆಗಳ ಮಾಹಿತಿ, ತಾವು ಹಣ ಹಾಕಿದ ಖಾತೆಗಳ ಮಾಹಿತಿಯನ್ನು ಪೊಲೀಸರಿಗೆ ನೀಡಿದ್ದಾರೆ. ಪೊಲೀಸರಿಗೆ ದೂರು ನೀಡುತ್ತಿದ್ದಂತೆ ರಜತ್ರ ಫೋಟೊಗಳನ್ನು ಡಿಲೀಟ್ ಮಾಡಲಾಗಿದೆ.
Log in to write reviews