ಕೇರಳದ ವಯನಾಡು ಲೋಕಸಭೆ ಕ್ಷೇತ್ರದಿಂದ ಕಣಕ್ಕೆ ಇಳಿದಿರುವ ಕಾಂಗ್ರೆಸ್ ಅಭ್ಯರ್ಥಿ ರಾಹುಲ್ ಗಾಂಧಿ ಅವರು ನಿನ್ನೆ ಉಮೇದುವಾರಿಕೆ ಸಲ್ಲಿಕೆ ಮಾಡಿದ್ದು, ಅವರ ಆಸ್ತಿ ವಿವರ ಬಹಿರಂಗಗೊಂಡಿದೆ.ಚುನಾವಣಾ ಅಧಿಕಾರಿಗಳಿಗೆ ಸಲ್ಲಿಸಿರುವ ಅಫಿಡವಿಟ್ ಪ್ರಕಾರ, ರಾಹುಲ್, ಸ್ಟಾಕ್ ಮಾರ್ಕೆಟ್ನಲ್ಲಿ 4.3 ಕೋಟಿ ಹಣವನ್ನು ಹೂಡಿದ್ದಾರೆ. 3.81 Mutual fund ಇದೆ. ಇನ್ನು, 26.25 ಲಕ್ಷ ರೂಪಾಯಿ ಬ್ಯಾಂಕ್ ಬ್ಯಾಲೆನ್ಸ್ ಇದೆ. ಜೊತೆಗೆ 55 ಸಾವಿರ ರೂಪಾಯಿ ನಗದು ಕೈಯಲ್ಲಿದೆ. 2022-23 ಹಣಕಾಸು ವರ್ಷದಲ್ಲಿ ಬಂದಿರುವ ಒಟ್ಟು ಆದಾಯ 1,02,78,680 (1.02) crore) ರೂಪಾಯಿ ಎಂದು ತಿಳಿಸಿದ್ದಾರೆ.ಜೊತೆಗೆ 15.2 ಲಕ್ಷ ರೂಪಾಯಿ ಗೋಲ್ಡ್ ಬಾಂಡ್ಸ್ ಇದೆ. ಇವರು ನ್ಯಾಷನಲ್ ಸೇವಿಂಗ್ ಸ್ಕೀಮ್ಸ್, ಪೋಸ್ಟಲ್ ಸೇವಿಂಗ್ಸ್ ಮತ್ತು ಇನ್ಶ್ಯೂರನ್ಸ್ ಪಾಲಿಯಲ್ಲಿ ಹಣ ಹೂಡಿದ್ದಾರೆ. ಅದರ ಒಟ್ಟು ಮೌಲ್ಯ 61.52 ಲಕ್ಷ ರೂಪಾಯಿ ಆಗಿದೆ. ಇನ್ನು 4.2 ಲಕ್ಷ ಮೌಲ್ಯದ ಆಭರಣ ಕೂಡ ಇದೆ ಎಂದು 53 ವರ್ಷದ ರಾಹುಲ್ ಗಾಂಧಿ ತಿಳಿಸಿದ್ದಾರೆ. ಇನ್ನು 9.24 ಕೋಟಿ ಮೌಲ್ಯದ ಚರಾಸ್ತಿ ಹೊಂದಿದ್ದರೆ, 11.14 ಕೋಟಿ ಸ್ಥಿರಾಸ್ತಿ ಇದೆ. ಒಟ್ಟು ಆಸ್ತಿಯ ಮೌಲ್ಯ 20 ಕೋಟಿ ಎಂದು ನಮೂದಿಸಿದ್ದಾರೆ. ಜೊತೆಗೆ 49.7 ಲಕ್ಷ ರೂಪಾಯಿ ಲಿಯಾಬಿಲಿಟಿ ಹೊಂದಿದ್ದಾರೆ.
ರಾಹುಲ್ ಗಾಂಧಿ ಎಷ್ಟು ಕೋಟಿ ಒಡೆಯ?

No Ads
Log in to write reviews