ಪುಣೆ ಪ್ರವಾಸಿ ತಾಣಗಳು, ಹೋಟೆಲ್ಗಳಲ್ಲಿ, ಪಬ್, ಬಾರ್ಗಳಲ್ಲಿ ಹೊಸ ವರ್ಷಾಚರಣೆಗೆ ಜನ ಸಜ್ಜಾಗಿದ್ದಾರೆ. ಇದೆಲ್ಲದರ ನಡುವೆ ಶಾಕಿಂಗ್ ಸುದ್ದಿಯೊಂದು ಬಂದಿದೆ. ಮಹಾರಾಷ್ಟ್ರದ ಪುಣೆಯ ಪಬ್ ಒಂದು ಹೊಸ ವರ್ಷಾಚರಣೆಗೆ ಆಹ್ವಾನಿತರಿಗೆ ಆಹ್ವಾನ ಪತ್ರಿಕೆ ಜೊತೆಗೆ ಕಾಂಡೋಮ್ ನೀಡಿದ್ದು ಬೆಳಕಿಗೆ ಬಂದಿದೆ. ಪುಣೆಯ ಮುಂಧ್ವಾದಲ್ಲಿರುವ ಹೈ-ಸ್ಪಿರಿಟ್ ಪಬ್, ಕಾಂಡೋಮ್ ಮತ್ತು ಓಆರ್ಎಸ್ಪ್ಯಾಕೆಟ್ ವಿತರಿಸಿದೆ. ಹಳೆಯ ವರ್ಷಕ್ಕೆ ವಿದಾಯ ಹೇಳಲು, ಹೊಸವರ್ಷ ಸ್ವಾಗತಿಸಲು ಪುಣೆ, ಸುತ್ತಲಿನ ಯುವಕರು ಪಬ್ಗಳಿಗೆ ಹೋಗುತ್ತಾರೆ. ಪುಣೆಯ ಹೈ-ಸ್ಪಿರಿಟ್ ಪಬ್ ಅಡ್ವಾನ್ಸ್ ಬುಕಿಂಗ್ ಮಾಡಿದವರಿಗೆ ಕೆಲವು ಪಾಕೆಟ್ಗಳನ್ನು ಕಳಿಸಿದೆ. ಅದರಲ್ಲಿ ಕಾಂಡೋಮ್ ಇರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಪಬ್ ಕಾಂಡೋಮ್ ವಿತರಿಸಿದ ವಿಡಿಯೋ ವೈರಲ್ ಬಳಿಕ ಮಹಾರಾಷ್ಟ್ರ ಕಾಂಗ್ರೆಸ್ ಯುವ ಘಟಕ ಪೊಲೀಸರಿಗೆ ದೂರು ನೀಡಿ, ಪಬ್ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯಿಸಿದೆ. ಪಬ್, ನೈಟ್ ಲೈಫ್ ವಿರೋಧಿಗಳು ನಾವಲ್ಲ. ಆದರೆ ಯುವ ಸಮುದಾಯವನ್ನು ಸೆಳೆಯಲು ದಾರಿ ತಪ್ಪಿಸುವ ಮಾರ್ಕೆಟಿಂಗ್ ತಂತ್ರ ಮಾಡುತ್ತಿರುವ ಪಬ್ ನಿಂದ ಪುಣೆ ಸಂಸ್ಕೃತಿ ಹಾಳಾಗುತ್ತದೆ ಅಂತ ಕಾಂಗ್ರೆಸ್ ಮುಖಂಡರು ಕಿಡಿಕಾರಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಹೈ-ಸ್ಪಿರಿಟ್ ಪಬ್, ಯುವಕರಲ್ಲಿ ಜಾಗೃತಿ ಮೂಡಿಸಲು ಈ ನಿರ್ಧಾರ ಮಾಡಿದ್ದೇವೆ. ಕಾಂಡೋಮ್ ಹಂಚುವುದು ಅಪರಾಧವಲ್ಲ ಅಂತ ಸ್ಪಷ್ಟನೆ ನೀಡಿದೆ.
Log in to write reviews