ಬೆಂಗಳೂರು: ಕೊಲೆ ಪ್ರಕರಣ ಸಂಬಂಧ ಸ್ಥಳ ಮಹಜರು ಮಾಡಲು ಹೋಗಿದ್ದ ಪೊಲೀಸರ ಮೇಲೆಯೇ ಆರೋಪಿ ಹಲ್ಲೆ ನಡೆಸಿ ಎಸ್ಕೇಪ್ ಆಗಲು ಯತ್ನಿಸಿದ ವೇಳೆ ಆರೋಪಿ ಕಾಲಿಗೆ ಫೈರಿಂಗ್ ಮಾಡಿ ಬಂಧಿಸಿದ ಘಟನೆ ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬನ್ನೆರುಘಟ್ಟ ರಸ್ತೆಯ ಗುಳುಕಮಲೆ ಬಳಿ ನಡೆದಿದೆ. ಸೋಮೇಶ್ ಬಂಧಿತ ಆರೋಪಿ. ನಾಲ್ಕೈದು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಪಾತಕಿ ಸೋಮೇಶ್. ನಿನ್ನೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದ ಪೊಲೀಸರು. ಕೊಲೆ ನಡೆದ ಸ್ಥಳದ ಮಹಜರು ನಡೆಸಲು ಆರೋಪಿಯೊಂದಿಗೆ ಬಂದಿದ್ದ ಪೊಲೀಸರು. ಸ್ಥಳ ಪರಿಶೀಲನೆ ವೇಳೆ ಏಕಾಏಕಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿರುವ ಆರೋಪಿ. ಈ ವೇಳೆ ಆತ್ಮರಕ್ಷಣೆಗಾಗಿ ಕಗ್ಗಲೀಪುರ ಇನ್ಸ್‌ಪೆಕ್ಟರ್ ಸುಂದರ್ ರಿಂದ ಆರೋಪಿ ಕಾಲಿಗೆ ಗುಂಡು ಹೊಡೆದು ಬಂಧಿಸಿದ ಪೊಲೀಸರು. ಸ್ಥಳಕ್ಕೆ ರಾಮನಗರ ಡಿವೈಎಸ್‌ಪಿ ದಿನಕರ್ ಶೆಟ್ಟಿ ಬೇಟಿ ನೀಡಿ ಪರಿಶೀಲನೆ ನಡೆಸಿದರು.
ಪೊಲೀಸರ ಮೇಲೆ ಹಲ್ಲೆ ಮಾಡಿ ಎಸ್ಕೇಪ್ ಯತ್ನ; ಆರೋಪಿ ಕಾಲಿಗೆ ಫೈರಿಂಗ್
No Ads
Log in to write reviews