No Ads

ಸೋನು ಗೌಡ ಸೇರಿದಂತೆ 100 ಕ್ಕೂ ಅಧಿಕ ಇನ್ಫ್ಲುಯೆನ್ಸರ್ಸ್ಗೆ ಪೊಲೀಸ್ ಖಡಕ್ ಎಚ್ಚರಿಕೆ!

ಮನರಂಜನೆ 2025-04-09 14:45:12 183
post

ಬೆಟ್ಟಿಂಗ್‌ ಕುರಿತು ಪ್ರಚಾರಪಡಿಸಿದರೆ ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಸುಮಾರು 100ಕ್ಕೂ ಹೆಚ್ಚು ಮಂದಿಗೆ ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಕಳೆದ ತಿಂಗಳು ಐಪಿಎಲ್‌ ಆರಂಭವಾಗಿದ್ದು ಬೆಟ್ಟಿಂಗ್‌ ದಂಧೆಯೂ ಹೆಚ್ಚಿದೆ. ನಗರ ಹಾಗೂ ಗ್ರಾಮಗಳಲ್ಲೂ ಯುವಜನರು ಬೆಟ್ಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಪೊಲೀಸರ ಕಾರ್ಯಾಚರಣೆ ನಡುವೆಯೂ ಬೆಟ್ಟಿಂಗ್‌ ಅವ್ಯಾಹತವಾಗಿದೆ.

ಕೆಲದಿನಗಳ ಹಿಂದೆ ಆಂಧ್ರಪ್ರದೇಶ ಪೊಲೀಸರು ಅನಧಿಕೃತ ಬೆಟ್ಟಿಂಗ್‌ ಅ್ಯಪ್‌ಗಳ ಕುರಿತು ಪ್ರಚಾರ ಮಾಡುತ್ತಿದ್ದ ಕಿರುತೆರೆ ನಟಿಯರು ಹಾಗೂ ನಟರ ವಿರುದ್ಧ ಕೇಸ್‌ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಈ ಬೆನ್ನಲ್ಲೇ ರಾಜ್ಯ ಪೊಲೀಸರು ಬೆಟ್ಟಿಂಗ್‌ ಪ್ರಚಾರ ಮಾಡುವವರ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.

ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಟ್ಟ ನಿಗಾ ಘಟಕಗಳು

ಬೆಂಗಳೂರು ಸೇರಿದಂತೆ ಆಯಾ ಜಿಲ್ಲೆಗಳಲ್ಲಿನ ಸಾಮಾಜಿಕ ಜಾಲತಾಣಗಳ ನಿಗಾ ಘಟಕಗಳು ಸಾಮಾಜಿಕ ಜಾಲತಾಣಗಳ ಮೇಲೆ ಕಣ್ಣಿಟ್ಟಿವೆ. ಲಕ್ಷಾಂತರ ಹಿಂಬಾಲಕರನ್ನು ಹೊಂದಿರುವ ಇನ್‌ಫ್ಲುಯೆನ್ಸರ್ಸ್‌ಗಳ ಖಾತೆಗಳನ್ನು ಪರಿಶೀಲನೆ ನಡೆಸಿದ್ದು ಹಣಕ್ಕಾಗಿ ಆನ್‌ಲೈನ್‌ ಬೆಟ್ಟಿಂಗ್‌ ಆ್ಯಪ್‌ಗಳ ಕುರಿತು ರೀಲ್ಸ್‌ ಮೂಲಕ ಪ್ರಚಾರ ನಡೆಸುವ ಇನ್‌ಫ್ಲುಯೆನ್ಸರ್‌ಗಳ ನಿಯಮ ಬಾಹಿರ ಕ್ರಮಗಳನ್ನು ಉತ್ತೇಜಿಸಬೇಡಿ ಎಂದು ತಾಕೀತು ಮಾಡುತ್ತಿದ್ದಾರೆ.

ಪ್ರಮುಖವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಸೋನು ಶ್ರೀನಿವಾಸಗೌಡ, ದೀಪಕ್‌ಗೌಡ, ದಚ್ಚು ಸೇರಿದಂತೆ ಸುಮಾರು 100ಕ್ಕೂ ಹೆಚ್ಚು ಮಂದಿಯನ್ನು ಪಟ್ಟಿ ಮಾಡಿದ್ದ ಪೊಲೀಸರು, ಅನಧಿಕೃತ ಬೆಟ್ಟಿಂಗ್‌ ಆ್ಯಪ್‌ಗಳನ್ನು ಪ್ರಚುರಪಡಿಸಬೇಡಿ ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ಹಣಕ್ಕೆ ಪ್ರಚಾರ

ಫೇಸ್‌ಬುಕ್‌, ಇನ್‌ಸ್ಟಾಗ್ರಾಂಗಳಲ್ಲಿ ಮನರಂಜನಾ ರೀಲ್ಸ್‌ಗಳ ಮುಖಾಂತರ ಹಲವು ಮಂದಿ ರಿಯಾಲಿಟಿ ಶೋ ಸ್ಪರ್ಧಿಗಳು ಸೇರಿದಂತೆ ಕೆಲವರು ಲಕ್ಷಾಂತರ ಫಾಲೋವರ್ಸ್‌ ಹೊಂದಿದ್ದಾರೆ. ಐಪಿಎಲ್‌ ಹಿನ್ನೆಲೆಯಲ್ಲಿಅನಧಿಕೃತ ಬೆಟ್ಟಿಂಗ್‌ ಆ್ಯಪ್‌ ಕಂಪೆನಿಗಳು ಸೋಶಿಯಲ್‌ ಮೀಡಿಯಾ ಸ್ಟಾರ್‌ಗಳನ್ನು ಬಳಸಿಕೊಂಡು ಬೆಟ್ಟಿಂಗ್‌ ಪ್ರಚಾರ ಮಾಡಲು ಬಳಸಿಕೊಳ್ಳುತ್ತಿರುವುದು ಕಂಡು ಬಂದಿದೆ. ಆ್ಯಪ್‌ ಕುರಿತಾಗಿ ಒಂದು ವಿಡಿಯೋ / ರೀಲ್ಸ್‌ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದರೆ ಇಂತಿಷ್ಟು ಹಣ ನೀಡುವ ಒಪ್ಪಂದ ಮಾಡಿಕೊಳ್ಳುತ್ತಿವೆ. ಈ ನಿಟ್ಟಿನಲ್ಲಿ ಬೆಟ್ಟಿಂಗ್‌ ಪ್ರಚಾರ ಮಾಡಬೇಡಿ ಎಂದು ತಾಕೀತು ಮಾಡಲಾಗಿದೆ ಎಂದು ಪೊಲೀಸ್‌ ಮೂಲಗಳು ಹೇಳಿವೆ.

No Ads
No Reviews
No Ads

Popular News

No Post Categories
Sidebar Banner
Sidebar Banner