ಬೆಂಗಳೂರು, ಡಿ.26 : 2 ವರ್ಷದ ಪುಟ್ಟ ಕಂದಮ್ಮನ ಮೇಲೆ ಪಿಟ್ ಬುಲ್ ಜಾತಿಯ ನಾಯಿ ಭೀಕರ ದಾಳಿ ಮಾಡಿರುವ ಘಟನೆ ಬೆಂಗಳೂರಿನ ಬಾಣಸವಾಡಿ ಪೊಲೀಸ್ ಠಾಣೆ ವ್ಯಾಪ್ತಿಯ ಸುಬ್ಬನ ಪಾಳ್ಯದಲ್ಲಿ ನಡೆದಿದೆ. ತನ್ನ ತಾಯಿಯ ತೋಳಿನಲ್ಲಿರುವಾಗಲೇ ಮಗುವಿನ ಮೇಲೆ ಎಗರಿರುವ ನಾಯಿ ಡೆಡ್ಲಿ ಅಟ್ಯಾಕ್ ಮಾಡಿದೆ. ನಾಯಿ ದಾಳಿಗೆ ತುತ್ತಾದ ಮಗುವಿನ ಪರಿಸ್ಥಿತಿ ನಿಜಕ್ಕೂ ಭಯಾನಕವಾಗಿದೆ. ಯಾಕಂದ್ರೆ, ಪಿಟ್ ಬುಲ್ ದಾಳಿಗೆ ಮಗುವಿನ ಭುಜ ಭಾಗದ ಮಾಂಸವೇ ಕಿತ್ತು ಬಂದಿದೆ. ದಾಳಿ ವೇಳೆ ತನ್ನ ಮಗುವನ್ನ ನಾಯಿಯಿಂದ ರಕ್ಷಿಸಲು ತಾಯಿ ಪರದಾಡಿದಾರೆ. ಇದೀಗ ಮಗುವಿನ ಚಿಕಿತ್ಸೆಗೂ ಕಾಸಿಲ್ಲದೆ ನೇಪಾಳ ಮೂಲದ ಕುಟುಂಬದ ಪರದಾಟ ನಡೆಸ್ತಿದೆ. ಘಟನೆ ಹಿನ್ನೆಲೆ ನಾಯಿ ಮಾಲೀಕರ ವಿರುದ್ಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್ ದಾಖಲಾಗಿದೆ. ಡಿ. 23ರ ಸಂಜೆ 5.30ರ ವೇಳೆ ಮಗುವನ್ನ ತಾಯಿ ಅನುಷ್ಕಾ ಎತ್ತಿಕೊಂಡಿದ್ದರು, ಆಗ ಏಕಾಏಕಿ ಪಕ್ಕದ ಮನೆಯಲ್ಲಿ ಸಾಕಿದ್ದ ಪಿಟ್ ಬುಲ್ ನಾಯಿ ದಾಳಿ ಮಾಡಿದೆ. ತಪ್ಪಿಸಿಕೊಳ್ಳಲು ಯತ್ನಿಸಿದ್ರು ಮಗುವಿನ ಭುಜಕ್ಕೆ ಪಿಟ್ ಬುಲ್ ಕಚ್ಚಿದೆ. ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ, ಟ್ರಿಟ್ಮೆಂಟ್ ಗೂ ಹಣ ಹೊಂದಿಸಲಾಗದ ಸ್ಥಿತಿಯಲ್ಲಿ ಕುಟುಂಬ ಪರದಾಡ್ತಿದೆ. ಕಳೆದ ಎರಡು ತಿಂಗಳ ಹಿಂದೆ ಜೀಬನೋಪಾಯಕ್ಕೆಂದು ಅನುಷ್ಕಾ ದಂಪತಿ ಬಂದಿದ್ದರು. ಪತಿ ನಬ್ರಾಜ್ ಖಾಸಗಿ ಹೊಟೇಲ್‌ನಲ್ಲಿ ಕೆಲಸ ಮಾಡ್ತಿದ.್ದ ದಂಪತಿ ಬಾಣಸವಾಡಿಯ ವೆಂಕಟಸ್ವಾಮಿ ಪಾಳ್ಯದ ಸುಬ್ಬನಪಾಳ್ಯದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಪಕ್ಕದ ಮನೆಯಲ್ಲಿ ಅನಾಧಿಕೃತವಾಗಿ ಲೈಸೆನ್ಸ್ ಪಡೆಯದೇ ವ್ಯಕ್ತಿಯೋರ್ವ ನಾಯಿ ಸಾಕಿದ್ದ. ಪಿಟ್ಬುಲ್, ರಾಟ್ವಿಲರ್ ಸ್ಭೆರಿದಂತೆ ನಾಲ್ಕು ನಾಯಿಗಳನ್ನ ಸಾಕಿದ್ದ. ಆದರೆ ಡಿಸೆಂಬರ್ 23ರಂದು ಏಕಾಏಕಿ ಪಕ್ಕದ ಮನೆಯ ಮಗು ಮೇಲೆ ದಾಳಿ ಹಿನ್ನೆಲೆ ನಾಯಿ ಮಾಲೀಕನ ನಿರ್ಲಕ್ಷ್ಯ ಆರೋಪಿಸಿ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2 ವರ್ಷದ ಕಂದಮ್ಮನ ಮೇಲೆ ಪಿಟ್ ಬುಲ್ ಡಾಗ್ ಡೆಡ್ಲಿ ಅಟ್ಯಾಕ್..! ನಾಯಿ ದಾಳಿಗೆ ತುತ್ತಾದ ಮಗುನಿನ ಪರಿಸ್ಥಿತಿ ನಿಜಕ್ಕೂ ಭಯಾನಕ
No Ads
Log in to write reviews