No Ads

ಹೊಂದಾಣಿಕೆ ಗುಣವೇ ಇಲ್ಲದ ರಾಶಿಯವರಿವರು; ಮದುವೆ ಆದಮೇಲೆ ಸಂಕಷ್ಟವೇ ಜಾಸ್ತಿ!

ಕರ್ನಾಟಕ 2025-01-13 13:18:30 175
post

ಯಾರ ಜೀವನದಲ್ಲಿ ಪ್ರೀತಿ ಇರುತ್ತೋ ಅವರ ಜೀವನ ಎಷ್ಟೇ ಕಷ್ಟ ಇದ್ರೂ ಕೂಡ ಸುಖಮಯವಾಗಿ ಸಾಗುತ್ತೆ. ಏಕೆಂದರೆ ಕಷ್ಟವನ್ನು ಹಂಚಿಕೊಳ್ಳುವಂತಹ ಜೀವನ ಸಂಗಾತಿ ಅವರ ಜೊತೆಗೆ ಇರುತ್ತಾರೆ ಎನ್ನುವಂತಹ ಭಾವನೆ ಇರುತ್ತೆ. ಆದರೆ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮದುವೆಯ ನಂತರದ ವಿಚಾರಕ್ಕೆ ಬಂದ್ರೆ ದ್ವಾದಶ ರಾಶಿಗಳಲ್ಲಿ ಈ ರಾಶಿಯವರು ದುರದೃಷ್ಟವಂತರಾಗಿರುತ್ತಾರೆ. ಹಾಗಿದ್ರೆ ಆ ರಾಶಿಯವರು ಯಾರು ..?

ತುಲಾ ರಾಶಿ

ತುಲಾ ರಾಶಿಯವರ ಮನೋಭಾವನೆ ಅತ್ಯಂತ ಸೂಕ್ಷ್ಮವಾಗಿರುತ್ತದೆ. ಇದರ ಜೊತೆಗೆ ಇವರಿಗಿರುವ ಸಂಶಯದ ಗುಣದಿಂದ ಯಾರನ್ನೂ ಸುಲಭವಾಗಿ ನಂಬಲ್ಲ. ಇದೇ ಸಂಶಯದ ಗುಣದಿಂದಾಗಿ ಇವರ ಸಂಬಂಧ ದೀರ್ಘಕಾಲ ಉಳಿಯಲ್ಲ. ಅವಶ್ಯಕತೆಗಾಗಿ ಬೇರೆಯವರ ಜೊತೆ ಬೆರೆಯುವ ಇವರು ಅವಶ್ಯಕತೆ ಮುಗಿದ ಮೇಲೆ ಸಂಬಂಧ ಮುರಿದುಕೊಳ್ಳುತ್ತಾರೆ. ಹೀಗಾಗಿ ಇಂತಹ ರಿಲೇಷನ್ಶಿಪ್ ತುಲಾ ರಾಶಿಯವರಿಗೆ ಸಾಕಷ್ಟು ಟಾಕ್ಸಿಕ್ ಆಗುವಂತಹ ಸಾಧ್ಯತೆ ಹೆಚ್ಚಾಗಿರುತ್ತದೆ.

ಅವರ ಭಾವನಾತ್ಮಕತೆಯ ಆಳ ಎನ್ನುವುದು ರಿಲೇಶನ್ ಶಿಪ್ ನಲ್ಲಿ ಸಂಗಾತಿಯ ವಿಚಾರಕ್ಕೆ ಬಂದರೆ ಪ್ರತಿ ಬಾರಿ ಬೇಸರ ನೀಡುತ್ತದೆ. ಅದರಲ್ಲೂ ವಿಶೇಷವಾಗಿ ರಿಲೇಶನ್ ಶಿಪ್ ನಲ್ಲಿ ತುಲಾ ರಾಶಿಯವರು ಬಯಸುವಂತಹ ಅಸಹಜವಾಗಿರುವಂತಹ ನಿರೀಕ್ಷೆಗಳನ್ನು ಅವರ ಜೀವನ ಸಂಗಾತಿ ಅಂದರೆ ರಿಲೇಷನ್ಶಿಪ್ ನಲ್ಲಿ ಇರುವಂತಹ ಸಂಗಾತಿ ಪೂರೈಸುವುದು ಕಷ್ಟವಾಗಬಹುದು.

ಸಿಂಹ ರಾಶಿ

ಸಿಂಹ ರಾಶಿಯವರು ಮದುವೆ ಜೀವನದಲ್ಲಿ ತಮ್ಮ ಪಾರ್ಟ್ನರ್ ಬಯಸುವಂತಹ ಭಾವನೆಗಳನ್ನು ಅವರು ಅರ್ಥ ಮಾಡಿಕೊಳ್ಳುವುದರಲ್ಲಿ ಹಾಗೂ ಅದನ್ನು ಪೂರೈಸುವುದರಲ್ಲಿ ವಿಫಲರಾಗುವ ಸಾಧ್ಯತೆ ಹೆಚ್ಚಾಗಿದೆ. ಇನ್ನು ಮತ್ತೊಂದು ವಿಚಾರದಲ್ಲಿ ಮಕರ ರಾಶಿಯ ಜಾತಕದವರು ಬಯಸುವಂತಹ ಹಾಗೂ ಅಂತಹ ಪರ್ಫೆಕ್ಟ್ ವ್ಯಕ್ತಿತ್ವವನ್ನು ಹೊಂದಿರುವಂತಹ ಜೀವನ ಸಂಗಾತಿ ಅವರಿಗೆ ಸಿಗುವುದು ಕೂಡ ಅನುಮಾನವೇ ಸರಿ ಎಂದು ಹೇಳಬಹುದಾಗಿದೆ.

ಇನ್ನು ತಮ್ಮ ಜೀವನದಲ್ಲಿ ಸಾಕಷ್ಟು ಆಕಾಂಕ್ಷಿಗಳಾಗಿರುತ್ತಾರೆ. ಇವರು ಸ್ವಾರ್ಥಿಗಳು ಕೂಡ. ಹಾಗೂ ತಮ್ಮ ಕೆಲಸದ ಬಗ್ಗೆ ಸಂಪೂರ್ಣವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುತ್ತಾರೆ. ಆದರೆ ಸಾಕಷ್ಟು ಸಮಯದಲ್ಲಿ ರೋಮ್ಯಾಂಟಿಕ್ ರಿಲೇಷನ್ಶಿಪ್ ನಲ್ಲಿ ಸಿಂಹ ರಾಶಿಯವರು ಆದಷ್ಟು ದೂರವನ್ನು ಕಾಯ್ದುಕೊಳ್ಳುತ್ತಾರೆ.

ಕಟಕ ರಾಶಿ

ಕಟಕ ರಾಶಿಯವರ ಮನೋಭಾವನೆಯಲ್ಲಿ ಕಂಡುಬರುವಂತಹ ವಿಪರೀತ ಬದಲಾವಣೆಗಳು ಕೂಡ ದೀರ್ಘಕಾಲದ ರಿಲೇಷನ್ಶಿಪ್ ನಲ್ಲಿ ಇವರು ಇರೋದಕ್ಕೆ ಸಾಧ್ಯ ಆಗುವುದಿಲ್ಲ ಅನ್ನುವಂತಹ ಪ್ರಮುಖ ಕಾರಣವನ್ನು ಕೂಡ ನೀಡುತ್ತದೆ. ಈ ಎಲ್ಲಾ ಅಂಶಗಳು ಕೂಡ ಕರ್ಕ ರಾಶಿಯವರು ರಿಲೇಷನ್ಶಿಪ್ ವಿಚಾರಕ್ಕೆ ಬಂದರೆ ಸಾಕಷ್ಟು ಅನ್ ಲಕ್ಕಿ ಯಾಗಿರುತ್ತಾರೆ.

ಕುಂಭ ರಾಶಿ

ಕುಂಭ ರಾಶಿಯ ಜಾತಕದವರು ಪ್ರೀತಿಯ ಚೌಕಟ್ಟಿಗಿಂತ ತಮ್ಮ ಸ್ವಾತಂತ್ರ್ಯವನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಈ ಕಾರಣಕ್ಕಾಗಿ ರಿಲೇಶನ್ ಶಿಪ್ ನಲ್ಲಿ ಇದ್ದರೂ ಕೂಡ ಅವರು ತಮ್ಮನ್ನು ಅಷ್ಟಾಗಿ ರಿಲೇಶನ್ ಶಿಪ್ ನಲ್ಲಿ ಇರಿಸಿಕೊಳ್ಳುವುದಕ್ಕೆ ಇಷ್ಟಪಡುವುದಿಲ್ಲ. ತಮ್ಮ ವೈಯಕ್ತಿಕ ವಿಚಾರಗಳನ್ನು ಹಾಗೂ ಸ್ಪೇಸ್ ಅನ್ನು ಗೌರವಿಸುವಂತಹ ಜೀವನ ಸಂಗಾತಿ ಕುಂಭ ರಾಶಿಯವರಿಗೆ ಸಿಗೋದು ರಿಲೇಷನ್ಶಿಪ್ ನಲ್ಲಿ ತುಂಬಾನೇ ವಿರಳ ಎಂದು ಹೇಳಬಹುದಾಗಿದೆ.

ವೃಶ್ಚಿಕ ರಾಶಿ:

ಇವರ ನಡೆ ಸಂಗಾತಿಯ ನಡುವೆ ಭಿನ್ನಾಭಿಪ್ರಾಯಗಳು ಮೂಡುವ ಹಾಗೆ ಮಾಡುತ್ತದೆ. ಇನ್ನು ಸಾಕಷ್ಟು ರಹಸ್ಯಗಳನ್ನು ಕೂಡ ಮುಚ್ಚಿಕೊಂಡಿರುವ ಅಂಶಗಳು ಕೂಡ ರಿಲೇಷನ್ಶಿಪ್ ವಿಚಾರಕ್ಕೆ ಬಂದರೆ ವೃಶ್ಚಿಕ ರಾಶಿ ಯಾವುದು ಸ್ವಲ್ಪಮಟ್ಟಿಗೆ ಕಳೆದುಕೊಂಡಿರುವ ಹಾಗೆ ಇರುತ್ತಾರೆ ಅನ್ನೋದನ್ನ ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

No Ads
No Reviews
No Ads

Popular News

No Post Categories
Sidebar Banner
Sidebar Banner