No Ads

ದಡ್ಡರನ್ನ ಬುದ್ಧಿವಂತರಾಗಿ, ಬುದ್ಧಿವಂತರನ್ನ ಪ್ರಜ್ಞಾವಂತರನ್ನಾಗಿ ಮಾಡುವ ನಮ್ಮ ನಿಮ್ಮ ಸಿನಿಮಾ - UI Review

ಮನರಂಜನೆ 2024-12-20 16:21:22 537
post

ದಡ್ಡರನ್ನ ಬುದ್ಧಿವಂತರಾಗಿ, ಬುದ್ಧಿವಂತರನ್ನ ಪ್ರಜ್ಞಾವಂತರನ್ನಾಗಿ ಮಾಡುವ ನಮ್ಮ ನಿಮ್ಮ ಸಿನಿಮಾ - UI Review ಉಪೇಂದ್ರ ಅವರ UI ಸಿನಿಮಾ ರಿಲೀಸ್ ಆಗಿದೆ, ಅದೇ  ನಿಮ್ಮ ನಮ್ಮ ಸಿನಿಮಾ ರಿಲೀಸ್ ಆಗಿದೆ. ಈ ಸಿನಿಮಾ ಚೆನ್ನಾಗಿದೆಯಾ, ಚೆನ್ನಾಗಿಲ್ವ ಅಂತ ರಿವ್ಯೂ ಕೊಡೋಕೆ ಆಗಲ್ಲ, ಇಲ್ಲಿ ಪ್ರಶ್ನೆ ಇರೋದು ಈ ಸಿನಿಮಾ ಅರ್ಥ ಆಯಿತಾ ಅಥವಾ ಅರ್ಥ ಆಗಲ್ವಾ ಅನ್ನೋದು, ನಿಮಗೆ ಅರ್ಥ ಆಗಬೇಕಿರೋದನ್ನ ಸಿನ್ಮಾ ನೋಡಿ ನೀವು ಅರ್ಥ ಮಾಡಿಕೊಳ್ಳಿ. ಸ್ನೇಹಿತರೇ, ಉಪೇಂದ್ರ ಅವರ A, upendra, ಸೂಪರ್ ಮತ್ತು ಉಪ್ಪಿ 2 ಸಿನಿಮಾಗಳಲ್ಲಿ ಕಥೆ ಜೊತೆಗೆ ವಿಷಯ ಇರ್ತಾಯಿತ್ತು. ಸಿನಿಮಾ ಕಥೆ ಜೊತೆಗೆ undercurrent ಅಲ್ಲಿ ಪ್ರೇಕ್ಷಕ decode ಮಾಡಿಕೊಳ್ಳಬೇಕಾಗಿದ್ದ phylosophy ಇರ್ತಾ ಇತ್ತು. ಹಾಗಾಗಿ ಅವೆಲ್ಲವೂ entertainingly interactive ಸಿನಿಮಾಗಳಾಗಿದ್ದವು. ಆದ್ರೆ UI ನಲ್ಲಿ ಡೈರೆಕ್ಟ್ ವಿಷಯವನ್ನೇ ತೋರಿಸಿದ್ದಾರೆ, ಇಲ್ಲೂ ಎಂಟರ್ಟೈನ್ಮೆಂಟ್ ಇದೆ ಅದು ನೀವು ಸಿನಿಮಾ ನೋಡ್ತಾ ನೋಡ್ತಾ ನಿಮ್ಮನ್ನ ನೀವು ಎಷ್ಟರ ಮಟ್ಟಿಗೆ interact ಮಾಡಿಕೊಳ್ತೀರ ಅನ್ನೋದರ ಮೇಲೆ ಡಿಪೆಂಡ್ ಆಗಿರತ್ತೆ. ಅದಕ್ಕೆ ಇದು U and I ಸಿನಿಮಾ. ಅಂಡ್ ಹಾಗೇನೇ ಈ ಸಿನಿಮಾದಲ್ಲಿ ತೋರಿಸಿರೋದು ನಿಮ್ಮ ನಮ್ಮ ವಿಷಯ, ಮನುಕುಲ ಸೃಷ್ಟಿಯಾಗಿ ಇಲ್ಲಿಯತನಕ ನಡೆದುಬಂದ ವಿಷಯ, ನಮಗೆ, ನಿಮಗೆ ಎಲ್ಲಾ ಕೊಟ್ಟಿರುವ ಪ್ರಕೃತಿಯ ಶ್ರೇಷ್ಠತನ ಅರ್ಥ ಮಾಡಿಕೊಳ್ಳದೆ ಆಸೆ ಆಮಿಷಗಳಿಗೆ ಬುದ್ಧಿ ಕೊಟ್ಟು ಪ್ರಕೃತಿಯನ್ನ ಅತ್ಯಾಚಾರ ಮಾಡಿದ ವಿಷಯ,  ದೇವರು, ಧರ್ಮ, ಜಾತಿ, ಮೇಲು ಕೀಳು ಎಂಬ ಸಂಕೋಲೆಯಲ್ಲಿ ನಮ್ಮನ್ನ ನಾವೇ ಬಂಧಿಸಿಕೊಂಡು ಮನುಷ್ಯತ್ವವನ್ನೇ ಮರೆತ ವಿಷಯ,ಮನುಷ್ಯತ್ವವನ್ನು ಅರಿತು ಮಾನವತೆಯನ್ನು, ಜೀವನದ ಸತ್ಯವನ್ನ ಸಾರಿದ ಬುದ್ಧ, ಬಸವಣ್ಣ, ಜೀಸಸ್ ರ ತತ್ವಗಳನ್ನು ನಮಗೆ ಬೇಕಾದ ಹಾಗೆ misinterprit ಮಾಡಿಕೊಂಡು ನಾವು ನೀವು ಬದುಕುತ್ತಿರುವ ವಿಷಯ, ನಮ್ಮದು ದೊಡ್ಡದು, ಅವರದು ಚಿಕ್ಕದು ಅನ್ನೋ ತಾರತಮ್ಯ ನೀತಿಯನ್ನು ನಮ್ಮ ತಲೆಯಲ್ಲಿ ತುಂಬಿ ನಮ್ಮನ್ನೇ divide ಮಾಡಿ ನಮ್ಮನ್ನೇ ಆಳುಗಳನ್ನಾಗಿ ಮಾಡಿಕೊಂಡು ಆಳುತ್ತಿರುವ ನಾವೇ ಆಯ್ಕೆ ಮಾಡಿದ ರಾಜಕೀಯ ಪುಂಡರ ವಿಷಯ, ಮಾಡಬೇಕಾಗಿರೋ ಬಹುಮುಖ್ಯ ಕೆಲಸಗಳು ತುಂಬಾ ಇದ್ರೂ ಅದೆಲ್ಲವನ್ನ ಪಕ್ಕಕ್ಕಿಟ್ಟು ಕ್ರಿಕೆಟ್, ಸ್ಕ್ಯಾಂಡಲ್, ಸ್ಕ್ಯಾಮ್, ಬಿಗ್ ಬಾಸ್, ಸಿನಿಮಾ, ಸ್ತಾರ್ಸ್ ಅನ್ನೋದರಲ್ಲೇ ಮುಳುಗಿರುವ ನಮ್ಮ ನಿಮ್ಮೆಲ್ಲರ ವಿಷಯ. ಇದೆಲ್ಲದರ ಜೊತೆಗೆ ನಮ್ಮ ಮನಸ್ಸು ಹೃದಯ ಏನು ಹೇಳುತ್ತೋ ಅದನ್ನ ಫೋಕಸ್ ಮಾಡದೇ ಸಮಾಜದ ಕಟ್ಟುಪಾಡುಗಳಿಗೆ ಹೆದರಿ ನಮ್ಮತನವನ್ನೇ ಮರೆತು ನಾವು ನೀವು ಬದುಕುತ್ತಿರುವ ವಿಷಯ, ಒಬ್ಬ ಮನುಷ್ಯನಾಗಿ ನಮ್ಮ ತಲೆಗೆ ಬಿಟ್ಟುಕೊಂಡಿರುವ ಹುಳಗಳನ್ನೆಲ್ಲ ತಲೆಯಿಂದ ಕಿತ್ತು ಹಾಕಿ ಥಿಯೇಟರಿಂದ ಹೊರಗೆ ಬರುವಾಗ  ಜ್ಞಾನೋದಯ ಮಾಡಿಸುವ ವಿಷಯ. ಈ ರೀತಿ ಒಂದೇ ಸಿನಿಮಾದಲ್ಲಿ ಇಷ್ಟೊಂದು ಲೇಯರ್ ನ ಇಷ್ಟು ಬೋಲ್ಡ್ ಆಗಿ attempt ಮಾಡೋಕೆ ಸಾಧ್ಯ ಇರೋದು ಕೇವಲ ಉಪೇಂದ್ರ ಅವರಿಗೆ ಮಾತ್ರ, ಅವರ ವಿಷನ್ ಮತ್ತು ಎಕ್ಸಿಕುಷನ್ ಸ್ಕಿಲ್ಸ್ ಗೆ ಒಂದು ಅಪ್ರಿಶಿಯೇಷನ್ ಬರಲೇಬೇಕು. ಇಷ್ಟೊಂದು ಲೇಯರ್ಸ್ ಇರೋ ಸಿನಿಮಾನ ಹೇಳೋಕೆ UI world ಕ್ರಿಯೇಟ್ ಮಾಡಿದ್ದಾರೆ, ಅಂದ್ರೆ ಅದೇ ನಮ್ಮ ನಿಮ್ಮ ವರ್ಡ್ ಅನ್ನ ಕ್ರಿಯೇಟ್ ಮಾಡಿದ್ದಾರೆ. ಇಲ್ಲಿ ನಡೆಯುವ, ನೋಡುವ ಪ್ರತಿ ವಿಷಯ ಕೂಡ ನಮ್ಮ ಮೆದುಳಿನಲ್ಲೇ ನಡಿತಾ ಇರತ್ತೆ, ಹಾಗಾಗಿ ನಮ್ಮ ನಮ್ಮ ತಿಳುವಳಿಕೆಯ ಮಟ್ಟದ ಮೇಲೆ ಈ ಸಿನಿಮಾ entertaining ಅನಿಸುತ್ತ ಹೋಗತ್ತೆ. ಇನ್ನು ಈ UI world ನಲ್ಲಿ  ಸತ್ಯಯುಗ ರೆಪ್ರೆಸೆಂಟ್ ಮಾಡುವ ಸತ್ಯನು ಇದ್ದಾನೆ ಕಲಿಯುಗದ ಅಂತ್ಯಕ್ಕೆ ಕಾರಣವಾಗುವ ಕಲ್ಕಿನೂ ಇದ್ದಾನೆ.  ಹಾಗೇನೇ ಉಪ್ಪಿ ಡೈರೆಕ್ಷನ್ ಸಿನಿಮಾದಲ್ಲಿ ನಾವು ನೀವು expect ಮಾಡುವ ವಿಡಂಬನಾತ್ಮಕ ಸಂಭಾಷೆಗಳು, ಸೀಕ್ವೆನ್ಸ್ ಗಳು ಚೆನ್ನಾಗಿವೆ, ಇವ್ನು ಹೋಗ್ತಾ ಇರೋ ಸ್ಪೀಡ್ ನೋಡ್ತಾ ಇದ್ರೆ ಒಸಾಮಾ ಬಿನ್ ಲಾಡೆನ್ ಆಗ್ತಾನೆ ಅನ್ನೋದಾಗಿರಬಹುದು, ನೀನು ನನ್ ಥರ ಆಗ್ಬೇಡ, ಮಾಸ್ ಕಮರ್ಷಿಯಲ್ ಹೀರೋ ಆಗಿ ಅದೇ ಜನಕ್ಕೆ ಇಷ್ಟ ಆಗೋದು ಅನ್ನೋದಾಗಿರಬಹುದು, ಒಳ್ಳೆತನ ಕಂಡ್ರೆ ನನಗಾಗಲ್ಲ ಅಣ್ಣೋದಾಗಿರಬಹುದು. ಪ್ರಾಣಿಗಳು seasonally  ಸೆಕ್ಸ್ ಮಾಡ್ತವೆ, ಆದ್ರೆ ಮನುಷ್ಯ ಎಲ್ಲ ಸೀಸನ್ ಅಲ್ಲೂ ಸೆಕ್ಸ್ ಮಾಡ್ತಾನೆ ಅನ್ನೋದಾಗಿರಬಹುದು, ನೀವೆಲ್ಲರೂ ಈ ಸಿನಿಮಾ ನೋಡೋಕೆ ಬಂದಿರೋದು ಇವನು ಯಾವಾಗ ಕೊಚ್ಚುತಾನೆ, ಕೊಲ್ತಾನೆ ಅನ್ನೋದನ್ನ ನೋಡೋಕೆ ಹೊರತು ನಾನು ಹೇಳ್ತಾ ಇರೋ ವಿಷ್ಯ ಅರ್ಥ ಮಾಡಿಕೊಳ್ಳೋಕೆ ಅಲ್ಲ ಅನ್ನೋದಾಗಿರಬಹುದು ಇದೆಲ್ಲವೂ ಸಿನಿಮಾದಲ್ಲಿ ಇದೆ. ಉಪ್ಪಿ as usual ಯಾವುದೇ ಸಿದ್ದಸೂತ್ರಗಳಿಗೆ ಜೊತು ಬೀಳದೆ ಒಂದು multilayered interactive commercial ಸಿನಿಮಾ ಅನ್ನೋ ಹೊಸ ಜಾನರ್ ಅನ್ನ ಈ ಸಿನಿಮಾ ಮೂಲಕ introduce ಮಾಡಿದ್ದಾರೆ. ಅವರ ಆಕ್ಟಿಂಗ್ ಬಗ್ಗೆ ಹೇಳೋಕೆ ಏನಿದೆ ನಿಮಗೆ ಎಲ್ಲಾ ಗೊತ್ತಿರತ್ತೆ, ಅವರೇ ಬರೆದಿರುವ ಕಥೆ ಮತ್ತು ಪಾತ್ರವನ್ನ ಅವರೇ ಸರಿಯಾಗಿ ನಿಭಾಯಿಸೋಕೆ ಸಾಧ್ಯ ಅಷ್ಟೇ ಹೇಳಬಹುದು. ಅವರನ್ನ ಹೊರತುಪಡಿಸಿದರೆ ರವಿಶಂಕರ್, ಗುರುಪ್ರಸಾದ್, ಸಾಧುಕೋಕಿಲ ಎಲ್ಲರೂ ಕೊಟ್ಟ ಪಾತ್ರವನ್ನ ಚೆನ್ನಾಗಿ ಮಾಡಿದ್ದಾರೆ. ಒಂದೊಂದು ಪಾತ್ರವೂ system ನ ಒಂದು ವರ್ಗವನ್ನು symbolise ಮಾಡತ್ತೆ. ಇಂಟರ್ವಲ್ ಬ್ಲಾಕ್ ಅಲ್ಲಿ ನಮ್ಮ ಬಗ್ಗೆ ನಮಗೇನೆ ಒಂದು ಸೀಕ್ರೆಟ್ ರಿವೀಲ್ ಆಗತ್ತೆ. ಇಂಟರ್ವಲ್ ಆದಮೇಲೆ ಸಿನಿಮಾ ನಮ್ ಜೊತೆಗೆ interact ಮಾಡೋಕೆ ಶುರು ಮಾಡುತ್ತೆ. ಈ ರೀತಿಯ ಐಡಿಯಾನ ಉಪೇಂದ್ರ ಪೇಪರ್ ಮೇಲೆ visualise ಮಾಡಿರೋ ಉಪ್ಪಿ ರೈಟಿಂಗ್ ಗೆ ಒಂದು ಹ್ಯಾಟ್ಸ್ ಆಫ್. ಚಿತ್ರದ ಮೊದಲ ಫ್ರೇಮ್ ನಿಂದ ಕೊನೆ ಫ್ರೇಮ್ ತನಕ ಉಪ್ಪಿ ಸಿಗ್ನೇಚರ್ ಇದೆ. ಆದ್ರೆ ಅದನ್ನ ಟೆಕ್ನಿಕಲಿ execute ಮಾಡಿರುವ ರೀತಿ is ಬ್ರಿಲಿಯಂಟ್. ಸಿನಿಮಾದ ಮೇಕಿಂಗ್, VFX, visual representation ಅದ್ಭುತವಾಗಿದೆ, ಇಂಟರ್ವಲ್ ನಂತರ ಬರುವ ಫೈಟ್ ನ ಬಹಳ ಕ್ರಿಯೇಟಿವ್ ಆಗಿ ಕನ್ವಿಂಸಿಂಗ್ ಆಗಿ ತೋರಿಸಿದ್ದಾರೆ, ಅಜನೀಶ್ ಲೋಕನಾಥ್ ಅವರ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಈ ಸಿನಿಮಾದ ಬಿಗ್ಗೆಸ್ಟ್ ಹೈಲೈಟ್ ಅಲ್ಲ ಬಿಗ್ಗೆಸ್ಟ್ interaction ಅಂತಾನೇ ಹೇಳಬಹುದು, ನಮ್ಮನ್ನ ನಾವು ಸಿನ್ಮಾ ಜೊತೆ ಇಂಟರಾಕ್ಟ್ ಮಾಡಿಕೊಳ್ಳುವುದರಲ್ಲಿ ಅವರ ಪಾತ್ರ ತುಂಬಾ ದೊಡ್ಡದು. ಇನ್ನು ಹೀರೋಯಿನ್ reeshma  ಪಾತ್ರದ ಬಗ್ಗೆ ಕೆಲವರಿಗೆ ಕನ್ಫ್ಯೂಷನ್ ಇದೆ. ಈ ಪಾತ್ರ ದೇಶದಲ್ಲಿ ಸತ್ಯವನ್ನ ಡೆಮಕ್ರಸಿಯನ್ನ ಇಷ್ಟ ಪಡುವ ಪಾತ್ರ, ಎಲ್ಲ ಸರಿಯಾಗಿರಬೇಕು, Ella ನ್ಯಾಯಯುತವಾಗಿ ನಡೆಯಬೇಕು ಅಂತ ಈ ಪಾತ್ರ ಅಂದುಕೊಳ್ಳತ್ತೆ, ಆದ್ರೆ ಸತ್ಯವನ್ನ  ಫೇಸ್ ಮಾಡುವ ಧೈರ್ಯ ಇಲ್ಲ, ಎಲ್ಲ ಕೈಮೀರಿ ಹೋಗಿ ಸತ್ಯವನ್ನ ಕಾಪಾಡಿಕೊಳ್ಳಬೇಕು ಅನ್ನೋ ಸ್ಥಿತಿ ಬಂದಾಗ ಸತ್ಯ ಸತ್ತುಹೋಗತ್ತೆ, ತಾನೂ ಜಾಗ ಖಾಲಿ ಮಾಡಬೇಕಾಗತ್ತೆ. ಒಟ್ನಲ್ಲಿ ನಮ್ಮ ನಿಮ್ಮ ಬುದ್ಧಿಗೆ, ಯೋಚನಾ ಶಕ್ತಿಗೆ, ನಿಮ್ಮ ಮುಂದಿನ ಭವಿಷ್ಯಕ್ಕೆ ಕಿಚ್ಚು ಹಚ್ಚುವ ದಡ್ದರಿಗೆ ಮಾತ್ರ ಮಾಡಿರುವ ಈ ಸಿನಿಮಾನ ಮತ್ತೆ ಮತ್ತೆ ನೋಡಿ, ಬುದ್ಧಿವಂತರಾಗಿ. ಇಲ್ಲಾಂದ್ರೆ ಬೆಳಿಗ್ಗೆ ನಿನ್ನೆ ಬಿಗ್ ಬಾಸ್ ಎಪಿಸೋಡ್ ನ ಅಪ್ಡೇಟ್ ವಿಡಿಯೋ ಮಾಡಿದ್ದೀನಿ ಅದನ್ನ ನೋಡ್ಕೊಂಡು ಎಂಜಾಯ್ ಮಾಡಿ. ನಮಸ್ತೆ. ಬರಹ ಸುಜಯ್ ರಾಜ್ ಆರ್ ಎಸ್

No Ads
No Reviews
No Ads

Popular News

No Post Categories
Sidebar Banner
Sidebar Banner