ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಭಾರತೀಯ ಸೇನೆಯಿಂದ ಬ್ಲೂ ಪ್ರಿಂಟ್ ರೆಡಿ ಆಗಿದೆ. ಆಪರೇಷನ್ ‘ಆಕ್ರಮಣ್’ ಹೆಸರಲ್ಲಿ ಕಾರ್ಯಾಚರಣೆ ನಡೆಯಲಿದ್ದು, POKಯ ಉಗ್ರರ ನೆಲೆಯೇ ಸೇನೆಯ ಮೊದಲ ಟಾರ್ಗೆಟ್ ಆಗಿದೆ.
ಮೊದಲು POKಯಿಂದಲೇ ಶತ್ರಗಳು ಸಂಹಾರಕ್ಕೆ ಸಿದ್ಧ ನಡೆಸಲಾಗುತ್ತಿದ್ದು, ಪಾಕ್ ಆಕ್ರಮಿತ ಪ್ರದೇಶದ ಒಳ ನುಗ್ಗಿ ದಾಳಿ ಸಾಧ್ಯತೆ ಇದೆ. ಈ ಸಂಬಂಧ ವಾಯು ಸೇನೆ ಮತ್ತು ಭೂಸೇನೆ ಅಧಿಕಾರಿಗಳಿಂದ ತಯಾರಿ ನಡೆಯುತ್ತಿದೆ. ಉಗ್ರರ ನೆಲೆ ಸಂಪೂರ್ಣ ಧ್ವಂಸ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇಲ್ಲಿಯವರಿಗೆ 46 ಉಗ್ರರ ನೆಲಗಳನ್ನು ಭಾರತೀಯ ಸೇನೆ ಗುರುತಿಸಿದೆ. ಇನ್ನು, ಭಾರತದ ಟಾರ್ಗೆಟ್ ಗೊತ್ತಾಗುತ್ತಿದ್ದಂತೆಯೇ ಪಾಕ್ ಸೇನೆ ಉಗ್ರರ ನೆಲೆಯಿಂದ ಅವರನ್ನು ಬೇರೆಡೆಗೆ ಶಿಫ್ಟ್ ಮಾಡಿದೆ. ಹೀಗಾಗಿ ಪಾಕ್ ಬಚ್ಚಿಟ್ಟಿರುವ ಉಗ್ರರ ಸ್ಥಳಗಳ ಮೇಲೆ ದಾಳಿ ಸಾಧ್ಯತೆ ಇದೆ. ಎಲ್ಲಾ ಉಗ್ರರ ನೆಲೆ ಪತ್ತೆ ಹಚ್ಚುವ ಕೆಲಸವನ್ನು ಸೇನೆ ಮಾಡ್ತಿದೆ. ಮುಂದಿನ 24 ರಿಂದ 36 ಗಂಟೆಯಲ್ಲಿ ಸೇನೆ ದಾಳಿ ಸಾಧ್ಯತೆ ಇದೆ. ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ಈ ಸಭೆ ಬಳಿಕ ತೀರ್ಮಾನ ಆಗಲಿದೆ.
Log in to write reviews