No Ads

ಆನ್ ಲೈನ್ ಬೆಟ್ಟಿಂಗ್; ಒಂದೇ ಕುಟುಂಬದ ಮೂವರು ಬಲಿ

ಕರ್ನಾಟಕ 2025-02-18 13:56:21 1043
post

ಆನ್ ಲೈನ್ ಬೆಟ್ಟಿಂಗ್ ಗೆ ಒಂದೇ ಕುಟುಂಬದ ಮೂವರು ಬಲಿಯಾಗಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಅಣ್ಣ ಜೋಶಿ ಆಂಟೋನಿ, ಸಹೋದರ ಜೋಬಿ ಆಂಟೋನಿ, ಈತನ ಪತ್ನಿ ಸ್ವಾತಿ ಅಲಿಯಾಸ್ ಶರ್ಮಿಳಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸಂಬಂಧ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಾಗೂ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ನೆನ್ನೆ ಅಣ್ಣ , ಇಂದು ತಮ್ಮ ಹಾಗೂ ತಮ್ಮನ ಹೆಂಡತಿ ಆತ್ಮಹತ್ಯೆಗೆ ಶರಣಾಗಿದ್ದು ಆನ್ ಲೈನ್ ಗೇಮ್, ಹಣ ಡಬಲ್ ಆಗುವ ಆಸೆಗೆ ಇಡೀ ಕುಟುಂಬವೇ ಸರ್ವನಾಶವಾಗಿದೆ.

ಮೇರಿಷಿಲಿನ್ ಗೆ ಇಬ್ಬರು ಅಣ್ಣಂದಿರು. ಓರ್ವ ಜೋಷಿ ಆಂಟೋನಿ ಹಾಗೂ ಮತ್ತೊಬ್ಬ ಜೋಬಿ ಆಂಟೋನಿ.ಜೋಬಿ ಆಂಟೋನಿ ತನ್ನ ತಂಗಿ ಮೇರಿಷಿಯಸ್ ಗೆ ಲಕ್ಷಾಂತರ ರೂ ಸಾಲ ಮಾಡಿಸಿದ್ದಾನೆ.ಐಪಿಎಲ್ ನಲ್ಲಿ ಬೆಟ್ಟಿಂಗ್ ಆಡುತ್ತಿದ್ದ ಜೋಬಿ ಆಂಟೋನಿ ತಂಗಿ ಹೆಸರಲ್ಲಿ ಹಣ ಕಳೆದಿದ್ದಾನೆ. ಇದಕ್ಕೆ ಜೋಬಿ ಆಂಟೋನಿ ಪತ್ನಿ ಶರ್ಮಿಳಾ.ಆ.ಸ್ವಾತಿ ಕುಮ್ಮಕ್ಕು ಇದೆ. ಲಕ್ಷಾಂತರ ಸಾಲ ನೀಡಿದ ಜನ ಮೇರಿಷಿಯಸ್ ಗೆ ದುಂಬಾಲು ಬಿದ್ದಿದ್ದಾರೆ. ಸಾಲ ತೀರಿಸಲಾಗದೆ ಮೇರಿಷಿಯಸ್ ಒತ್ತಡಕ್ಕೆ ಬಿದ್ದಿದ್ದಾರೆ. ತಂಗಿಗೆ ಸಾಲಗಾರರ ಕಿರುಕುಳ ಹೆಚ್ಚಾಗುತ್ತಿದ್ದಂತೆಯೇ ಬೇಸತ್ತ ಮತ್ತೊಬ್ಬ ಅಣ್ಣ ಜೋಷಿ ಆಂಟೋನಿ ನೊಂದಿದ್ದಾರೆ.


ತಂಗಿಗೆ ಬಂದ ಸ್ಥಿತಿಗೆ ಮರುಗಿದ ಜೋಷಿ ಆಂಟೋನಿ ಫೆ.17 ರಂದು ರಮ್ಮನಹಳ್ಳಿ ಸ್ಮಶಾನದ ಬಳಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಸೆಲ್ಫೀ ವಿಡಿಯೋ ಮಾಡಿ ತನ್ನ ತಂಗಿಯ ಪರಿಸ್ಥಿತಿಗೆ ನನ್ನ ತಮ್ಮ ಜೋಬಿ ಆಂಟೋನಿ ಹಾಗೂ ಆತ್ಮ ಪತ್ನಿ ಶರ್ಮಿಳಾ.ಆ.ಸ್ವಾತಿ ಕಾರಣ ಇವರನ್ನ ಸುಮ್ಮನೆ ಬಿಡಬೇಡಿ ಎಂದು ಕಣ್ಣೀರಿಡುತ್ತಾ ಸೆಲ್ಫೀ ಮಾಡಿ ವಿಡಿಯೋವನ್ನ ತಂಗಿ ಮಗಳ ಮೊಬೈಲ್ ಗೆ ಸೆಂಡ್ ಮಾಡಿ ನೇಣಿಗೆ ಶರಣಾಗಿದ್ದಾರೆ. ತಂದೆ ತಾಯಿಯನ್ನ ದಫನ್ ಮಾಡಿದ ಸ್ಥಳದಲ್ಲೇ ಜೋಷಿ ಆಂಟೋನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಮೇರಿಷಿಯಸ್ ರವರು ಮತ್ತೊಬ್ಬ ಅಣ್ಣ ಜೋಬಿ ಆಂಟೋನಿ ಮತ್ತು ಅತ್ತಿಗೆ ಶರ್ಮಿಳಾ.ಆ.ಸ್ವಾತಿ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಈ ಮಾಹಿತಿ ಅರಿತ ಅಣ್ಣ ಜೋಬಿ ಆಂಟೋನಿ ಹಾಗೂ ಪತ್ನಿ ಶರ್ಮಿಳಾ.ಆ.ಸ್ವಾತಿ ವಿಜಯನಗರ ವಾಟರ್ ಟ್ಯಾಂಕ್ ಮೆಟ್ಟಿಲುಗಳಿಗೆ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಐಪಿಎಲ್ ಬೆಟ್ಟಿಂಗ್ ದಂಧೆ ಹಿನ್ನಲೆ ಮಾಡಿದ ಸಾಲ ಇಂದು ಒಂದೇ ಕುಟುಂಬದ ಮೂವರ ಆತ್ಮಹತ್ಯೆಗೆ ಕಾರಣವಾಗಿದೆ.

No Ads
No Reviews
No Ads

Popular News

No Post Categories
Sidebar Banner
Sidebar Banner