No Ads

ಈ ಕಾರಣಕ್ಕೆ ಅಮಾನುಷವಾಗಿ ಕೊಲೆ ಆದ್ರ ಓಂ ಪ್ರಕಾಶ್; ತಪ್ಪೊಪ್ಪಿಕೊಂಡ ಪತ್ನಿ ಪಲ್ಲವಿ

ಕರ್ನಾಟಕ 2025-04-22 13:25:59 665
post

ಬೆಂಗಳೂರಿನಲ್ಲಿ ಅಮಾನುಷವಾಗಿ ಹತ್ಯೆಯಾಗಿರುವ ನಿವೃತ್ತ DG & IGP ಓಂ ಪ್ರಕಾಶ್ ಕೇಸ್‌ಗೆ ಸಂಬಂಧಿಸಿದಂತೆ ಹಲವು ಮಹತ್ವದ ವಿಷಯಗಳು ಬಹಿರಂಗವಾಗಿವೆ. ಹಲವು ರಹಸ್ಯಗಳು ಈಗ ಹೊರ ಬರುತ್ತಿದ್ದು. ಈ ಕೇಸ್‌ನಲ್ಲಿ ಅವರ ಪತ್ನಿ ಪಲ್ಲವಿ ಓಂ ಪ್ರಕಾಶ್‌ ಅವರು ವಾಟ್ಸಪ್‌ನಲ್ಲಿ ಮಾಡಿರುವ ಮೆಸೇಜ್‌ಗಳು ವೈರಲ್ ಆಗುತ್ತಿವೆ. ಓಂ ಪ್ರಕಾಶ್‌ ಅವರನ್ನು ಅವರ ಪತ್ನಿಯೇ ಯಾವ ಕಾರಣಕ್ಕೆ ಕೊಲೆ ಮಾಡಿದರು, ಈ ಕೊಲೆಗೆ ಕಾರಣವೇನು ಹಾಗೂ ಯಾವ ರೀತಿ ವಿಕೃತವಾಗಿ ಕೊಲೆ ಮಾಡಿರುವ ಹಿನ್ನೆಲೆ ಏನು ಎನ್ನುವ ವಿವರ ಇಲ್ಲಿದೆ.

ಓಂ ಪ್ರಕಾಶ್ ಅವರ ಕೇಸ್‌ಗೆ ಸಂಬಂಧಿಸಿದಂತೆ ಕೆಲವೊಂದು ವಾಟ್ಸಪ್‌ ಚಾಟ್‌ಗಳು ಇದೀಗ ಕರ್ನಾಟಕ ಪೊಲೀಸರಿಗೆ ಸಿಕ್ಕಿದೆ. ಈ ಕೊಲೆಯು ಕೌಟುಂಬಿಕ ಕಲಹದಿಂದ ಇಲ್ಲವೇ ಇನ್ನ್ಯಾವುದೋ ಕಾರಣಕ್ಕೆ ನಡೆದಿದೆಯೋ ಎನ್ನುವ ಬಗ್ಗೆ ಭಾರೀ ಚರ್ಚೆಗಳು ನಡೆದಿದ್ದವು. ಓಂ ಪ್ರಕಾಶ್ ಅವರನ್ನು ತೀರ ಬರ್ಬರವಾಗಿ ಕೊಲೆ ಮಾಡಲಾಗಿದೆ. ಇದರಲ್ಲಿ ಅವರ ಪತ್ನಿ ಹಾಗೂ ಕುಟುಂಬದವರ ಕೈವಾಡವೇ ಇದೆ ಎನ್ನುವುದು ಅನುಮಾನಗಳಿಗೆ ಕಾರಣವಾಗಿತ್ತು. ಇದೀಗ ಎಲ್ಲದ್ದಕ್ಕೂ ಕಾರಣ ಸಿಕ್ಕಿದೆ.

ಇನ್ನು ಓಂ ಪ್ರಕಾಶ್‌ ಅವರನ್ನು ಕೊಲೆ ಮಾಡಿದ್ದು ನಾನೇ ಎಂದು ಅವರ ಪತ್ನಿ ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. ಅವರು ಊಟ ಮಾಡವಾಗಲೇ ಜಗಳ ತೆಗೆದು ಕಣ್ಣಿಗೆ ಏಕಾಏಕಿ ಕಾರದ ಪುಡಿ ಎರಚಲಾಗಿದೆ. ಕಾರದ ಪುಡಿಯ ಉರಿ ತಾಳಲಾಗದೆ ಕಿರುಚಾಡುವಾಗಲೇ ಪಲ್ಲವಿ ಅವರು ಪ್ರಕಾಶ್‌ ಮೇಲೆ ಕೊತ ಕೊತ ಕುದಿಯುವ ಅಡುಗೆ ಎಣ್ಣೆ ಎರಚಿದ್ದಾರೆ. ಇದಾದ ಮೇಲೆ ತಲೆಗೆ ಬಾಟಲಿಯಿಂದ ಹೊಡೆದಿದ್ದು, ಚಾಕುವಿನಿಂದ ಮನೋಇಚ್ಛೆ ಇರಿಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮನೆಯಲ್ಲಿ ಮೊದಲಿನಿಂದಲೂ ಜಗಳವಾಗುತ್ತಿತ್ತು. ಜಗಳವಾದಾಗೆಲ್ಲವೂ ಗನ್ ತೋರಿಸಿ ಕೊಲೆ ಮಾಡುವುದಾಗಿ ನನಗೆ ಮತ್ತು ಮಗಳಿಗೆ ಬೆದರಿಕೆ ಹಾಕುತ್ತಿದ್ದರು. ಶೂಟ್‌ ಮಾಡ್ತೀನಿ ಅಂತ ಹೇಳುತ್ತಿದ್ದರು. ಭಾನುವಾರವೂ ಯಾವುದೋ ಕಾರಣಕ್ಕೆ ಜಗಳವಾಗಿ ಪರಿಸ್ಥಿತಿ ವಿಕೋಪಕ್ಕೆ ಹೋಯ್ತು ನಮ್ಮನ್ನು ಕೊಲೆ ಮಾಡುವುದಕ್ಕೆ ಪ್ರಯತ್ನಿಸಿದ್ದರು. ಹೀಗಾಗಿ, ಆತ್ಮ ರಕ್ಷಣೆಗಾಗಿ ಜೀವ ಉಳಿಸಿಕೊಳ್ಳಲು ಹೋರಾಟ ಮಾಡಿದೆವು. ಆಗ ಕೊಲೆ ಆಗಿದೆ ಎಂದು ಹೇಳಿಕೆ ಕೊಟ್ಟಿರುವುದು ವರದಿಯಾಗಿದೆ.

ಓಂ ಪ್ರಕಾಶ್‌ ಅವರ ಕೊಲೆ ಆಗುವುದಕ್ಕೂ ಕೆಲವು ದಿನಗಳ ಮುಂಚೆ ಅವರ ಪತ್ನಿ ಪಲ್ಲವಿ ಅವರು ಅಧಿಕಾರಿಗಳ ಪತ್ನಿಯರೇ ಇರುವ ವಾಟ್ಸಪ್‌ ಗ್ರೂಪ್‌ನಲ್ಲಿ ಕೆಲವೊಂದು ಮೆಸೇಜ್‌ಗಳನ್ನು ಮಾಡಿದ್ದು, ಇದೀಗ ಒಂದೊಂದೇ ಹೊರ ಬರುತ್ತಿವೆ. ಓಂ ಪ್ರಕಾಶ್‌ಗೆ ಭಯೋತ್ಪಾದಕರೊಂದಿಗೆ ನಂಟಿದೆ. ಅಲ್ಲದೇ ಪಿಎಫ್‌ಐ ಸಂಘಟನೆ ಸದಸ್ಯ ಸಹ. ಅಷ್ಟೇ ಅಲ್ಲ ಅತ್ಯಾಧುನಿಕ ಹಾಗೂ ಸುಧಾರಿತ ರಿವಾಲ್ವರ್‌ ಸೇರಿದಂತೆ ಹಲವು ಶಸ್ತ್ರಾಸ್ತ್ರಗಳು ಇವೆ ಎನ್ನುವುದು ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ.

ನಾನು ಮತ್ತು ನನ್ನ ಪುತ್ರಿ ಇಬ್ಬರೂ ಓಂಪ್ರಕಾಶ್ ಅವರಿಂದ ತೀವ್ರ ಕೌಟುಂಬಿಕ ಹಿಂಸಾಚಾರಕ್ಕೆ ತುತ್ತಾಗಿದ್ದೇವೆ. ನಾವಿಬ್ಬರೂ ತಿನ್ನುವ ಆಹಾರದಲ್ಲಿ ಅವರು ಇನ್ಸುಲಿನ್, ಸ್ಯಾನಿಟೈಸರ್, ಹಿಟ್ ಸೇರಿದಂತೆ ಕೆಲವೊಂದು ಕೆಮಿಕಲ್‌ಗಳನ್ನು ಮಿಕ್ಸ್‌ ಮಾಡುತ್ತಿದ್ದರು. ನನ್ನ ಮಗಳ ಮೆದುಳಿಗೆ ಗುರಿಯಾಗಿಸಿಕೊಂಡು ಡ್ರಗ್ಸ್‌ ನೀಡುವುದಕ್ಕೆ ಶುರು ಮಾಡಿಕೊಂಡಿದ್ದರು ಎನ್ನುವ ಮೆಸೇಜ್‌ಗಳನ್ನು ಮಾಡಿದ್ದಾರೆ.

ಭಯೋತ್ಪಾದಕರೊಂದಿಗೆ ಜತೆಗೆ ಸಂಪರ್ಕವಿತ್ತು. ನನ್ನ ಮಗಳ ಫೋನ್ ಹಾಗೂ ಲ್ಯಾಪ್‌ಟಾಪ್ ಹ್ಯಾಕ್ ಮಾಡಲಾಗಿದೆ. ಮಗನ ಬಳಿ ರಿವಾಲ್ವರ್, ರೈಫಲ್ ಇದೆ ಎಂದೂ ಹೇಳಿದ್ದಾರೆ. ಪ್ರಕಾಶ್ ಅವರು ಆಸ್ತಿಗಾಗಿ ದುರಾಸೆ, ಅಸೂಯೆಯಿಂದ ನನ್ನ ಮೇಲೆ ಹಾಗೂ ಮಗಳ ಮೇಲೆ ದೌರ್ಜನ್ಯ ಮಾಡಿದ್ದಾರೆ ಎಂದು ವಾಟ್ಸಪ್‌ ಮಾಡಿದ್ದಾರೆ.

 

No Ads
No Reviews
No Ads

Popular News

No Post Categories
Sidebar Banner
Sidebar Banner