No Ads

ಹುಲಿ ಮೂತ್ರಕ್ಕೆ ಹೆಚ್ಚಿದ ಡಿಮ್ಯಾಂಡು! 50 ಎಂಎಲ್ ಹುಲಿ ಸೂಸುಗೆ ಈಪಾಟಿ ದುಡ್ಡಾ..!

ವಿದೇಶ 2025-01-30 11:08:26 58
post

ನವಜಾತ ಶಿಶುಗಳಿಗೆ ಕತ್ತೆ ಹಾಲು ಕುಡಿಸಿದರೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂಬುದು ಪ್ರತೀತಿ.  ಹುಲಿ ಹಾಲನ್ನು ನವಜಾತ ಶಿಶುಗಳಿಗೆ ಕುಡಿಸುತ್ತಿದ್ದರು ಎಂಬ ಪ್ರತೀತಿಯಿದೆ. 2016ರಲ್ಲಿ ಐರೋಪ್ಯ ದೇಶಗಳಲ್ಲಿ ಬಾಣಂತಿಯರ ಹಾಲು, ಬಾಡಿ ಬಿಲ್ಡರ್ ಗಳಿಗೆ ಉತ್ತಮ ಎಂದೇಳಿ ಅದಕ್ಕೆ ಡಿಮ್ಯಾಂಡ್ ಸೃಷ್ಟಿಯಾಗಿತ್ತು. ಈಗ ಹುಲಿ ಮೂತ್ರಕ್ಕೆ ಭಾರೀ ಬೆಲೆ ಬಂದಿದೆ ಎಂಬ ಸುದ್ದಿಯೊಂದು ಬಂದಿದೆ. ಈ ಡಿಮ್ಯಾಂಡ್ ಸೃಷ್ಟಿಯಾಗಿರುವುದು ನಮ್ಮಲ್ಲಲ್ಲ… ನೆರೆಯ ಚೀನಾದಲ್ಲಿ. ಅಲ್ಲಿ ಯಾರೋ ಸಂಧಿವಾತ ಸಮಸ್ಯೆಗೆ ಹುಲಿಯ ಮೂತ್ರವೇ ಸೂಕ್ತ ಪರಿಹಾರ ಎಂಬ ಪುಕಾರು ಹಬ್ಬಿಸಿದ್ದಾರೆ. ಸಂಧಿವಾತ ಮಾತ್ರವಲ್ಲದೆ ಸ್ನಾಯುಸೆಳೆತ ಹಾಗೂ ಉಳುಕುಗಳ ನಿವಾರಣೆಯಾಗುತ್ತದೆ ಎಂದು ಹೇಳಲಾಗಿದೆ. ಅದರಿಂದಾಗಿ ಅಲ್ಲಿನ ಜನರು ಹುಲಿ ಮೂತ್ರಕ್ಕೆ ಮುಗಿಬೀಳುತ್ತಿದ್ದಾರಂತೆ.

ಇದನ್ನು ಗಮನಿಸಿರುವ ಚೀನಾ ಸರ್ಕಾರ, ತನ್ನ ಪ್ರಾಣಿ ಸಂಗ್ರಹಾಲಯಗಳಲ್ಲಿರುವ ಹುಲಿಗಳ ಮೂತ್ರವನ್ನು ಸಂಗ್ರಹಿಸಿ ಅವುಗಳನ್ನು ಬಾಟಲಿಗಳಲ್ಲಿ ತುಂಬಿಸಿ ಮಿಲಿಲೀಟರ್ ಲೆಕ್ಕದಲ್ಲಿ ಮಾರಾಟ ಮಾಡುತ್ತಿದೆ. ಸುಮಾರು 50 ಎಂಎಲ್ ಇರುವ ಒಂದು ಬಾಟಲಿಗೆ 596 ರೂ.ಗಳಿಗೆ ಮಾರಾಟ ಮಾಡಲಾಗುತ್ತಿದೆ ಎಂದು ಚೀನಾ ಸೌತ್ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.

ಚೀನಾದ ಸಿಚೌನ್ ಪ್ರದೇಶದ ಯಾನ್ ಬಿಫಿಂಗ್ಸಿಜಾ ವನ್ಯಜೀವಿಗಳ ಧಾಮದಲ್ಲಿ ಹುಲಿ ಮೂತ್ರವನ್ನು ಸಂಗ್ರಹಿಸಿ ಅದನ್ನು ದೊಡ್ಡಮಟ್ಟದಲ್ಲಿ ಮಾರಾಟ ಮಾಡಲಾಗುತ್ತಿದೆಯಂತೆ. ಸೋಷಿಯಲ್ ಮೀಡಿಯಾಗಳ ಮೂಲಕವೂ ಹುಲಿ ಮೂತ್ರದ ಬಾಟಲಿಗಳನ್ನು ಮಾರಾಟ ಮಾಡಲಾಗುತ್ತಿದೆ.

ಇಷ್ಟು ಓದಿದ ಮೇಲೆ, ಸಂಧಿವಾತ, ಸ್ನಾಯು ಸೆಳೆತ ಅಥವಾ ಉಳುಕು ನಿವಾರಣೆಗೆ ಹುಲಿ ಮೂತ್ರವನ್ನು ಸೇವಿಸಬೇಕೇ ಎಂಬ ಪ್ರಶ್ನೆ ಎಲ್ಲರಲ್ಲೂ ಎದ್ದಿರಬಹುದು. ಆದರೆ, ಇದು ಸೇವಿಸುವ ಪದಾರ್ಥವಲ್ಲ. ಹುಲಿ ಮೂತ್ರವನ್ನು ತೈಲದಂತೆ ಸಂಧಿವಾತ, ಸ್ನಾಯು ಸೆಳೆತ ಅಥವಾ ಉಳುಕು ಇರುವ ಜಾಗಗಳಲ್ಲಿ ತಿಕ್ಕಬೇಕು ಹಾಗೂ ಮಾಲಿಶ್ ಮಾಡಬೇಕು ಎಂದು ಹೇಳಲಾಗಿದೆ.

ಚೀನಾದಲ್ಲಿ ಎದ್ದಿರುವ ಹುಲಿ ಸೂಸು ಟ್ರೆಂಡ್ ಬಗ್ಗೆ ಅಲ್ಲಿನ ತಜ್ಞರು ಸಿಟ್ಟಿಗೆದ್ದಿದ್ದಾರೆ. ಹುಲಿ ಮೂತ್ರದಿಂದ ಯಾವುದೇ ನೋವು ಗುಣವಾಗುವುದು ವೈಜ್ಞಾನಿಕವಾಗಿ ದೃಢಪಟ್ಟಿಲ್ಲ. ಹಾಗಾಗಿ,ಯಾರೂ ಇಂಥ ವದಂತಿಗಳನ್ನು ನಂಬಬಾರದು ಎಂದು ಹೇಳಿದ್ದಾರೆ.

No Ads
No Reviews
No Ads

Popular News

No Post Categories
Sidebar Banner
Sidebar Banner