No Ads

ನವಗ್ರಹ ಸಿನಿಮಾ , ಶೆಟ್ಟಿ ಖ್ಯಾತಿಯ ನಟ ಗಿರಿ ದಿನೇಶ್ ನಿಧನ

ಜಿಲ್ಲೆ 2025-02-08 11:32:57 989
post

ಚಾಲೆಂಜಿಂಗ್​ ಸ್ಟಾರ್ ದರ್ಶನ್​ ಅಭಿನಯದ ನವಗ್ರಹ (Navagraha) ಸಿನಿಮಾ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದ ಗಿರಿದಿನೇಶ್ (45) ಹೃದಯಾಘಾತದಿಂದ ನಿಧನರಾಗಿದ್ದಾರೆ. ಖ್ಯಾತ ಪೋಷಕ ನಟ ದಿನೇಶ್ ಪುತ್ರ ಗಿರಿ..
ಗಿರಿ ದಿನೇಶ್​ ನವಗ್ರಹ ಸಿನಿಮಾದ ಮೂಲಕ ಖ್ಯಾತಿಯನ್ನು ಗಳಿಸಿದ್ದರು. ಶುಕ್ರವಾರ ಸಂಜೆ ಮನೆಯಲ್ಲಿ ಪೂಜೆ ಮಾಡುವ ವೇಳೆ ಗಿರಿ ದಿನೇಶ್​ ಅವರು ಹೃದಯಾಘಾತದಿಂದ ಕುಸಿದು ಬಿದ್ದಿದ್ದರು. ತಕ್ಷಣ ಗಿರಿ ದಿನೇಶ್​ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆಯೇ ನಿಧನರಾಗಿದ್ದಾರೆ.

ಗಿರಿ ದಿನೇಶ್ ಅವರಿಗೆ 45 ವರ್ಷ ವಯಸ್ಸಾಗಿತ್ತು. ಮದುವೆ ಆಗದೇ ಇದ್ದ ಅವರು
ಚಮ್ಕಾಯ್ಸಿ ಚಿಂದಿ ಉಡಾಯ್ಸಿ, ವಜ್ರ ಸೇರಿ ಕೆಲ ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದರು. ಆದರೆ 'ನವಗ್ರಹ' ಚಿತ್ರದ ಶೆಟ್ಟಿ ಪಾತ್ರ ಹೆಚ್ಚಿನ ಹೆಸರು ತಂದುಕೊಟ್ಟಿತ್ತು. ದಿನಕರ್ ನಿರ್ದೇಶನದ ಆ ಚಿತ್ರವನ್ನು ಮೀನಾ ತೂಗುದೀಪ ನಿರ್ಮಾಣ ಮಾಡಿದ್ದರು.

ಕಳೆದ ವರ್ಷ ನವೆಂಬರ್ 8ಕ್ಕೆ 'ನವಗ್ರಹ' ಸಿನಿಮಾ ಮರುಬಿಡುಗಡೆ ಆಗಿತ್ತು. ಆಗ ಚಿತ್ರತಂಡ ಪ್ರಚಾರ ಕಾರ್ಯದಲ್ಲಿ ತೊಡಗಿತ್ತು. ಆದರೆ ಗಿರಿ ಮಾತ್ರ ಭಾಗಿ ಆಗಿರಲಿಲ್ಲ. ಚಿತ್ರದಲ್ಲಿ ನಾಗೇಂಧ್ರ ಅರಸ್ ಹಾಗೂ ಗಿರಿ ಕಾಂಬಿನೇಷನ್ ಹಿಟ್

ಆಗಿತ್ತು. ನಾಗಿ- ಶೆಟ್ಟಿ ಪಾತ್ರಗಳಲ್ಲಿ ಡ್ಯೂಪ್ಲಿಕೇಟ್ ವಸ್ತುಗಳನ್ನು ಮಾಡುವುದು, ಜಗ್ಗು ಅಂಡ್ ಗ್ಯಾಂಗ್ ಜೊತೆ ಸೇರಿ ಕೊನೆಗೆ ಡಮ್ಮಿ ಅಂಬಾರಿಯನ್ನು ಮಾಡಿಟ್ಟು ಮೈಸೂರು ದಸರಾ ಅಂಬರಿ ಕದಿಯುವ ಕಥೆ ಚಿತ್ರದಲ್ಲಿತ್ತು.

ಗಿರಿ ದಿನೇಶ್ ನಿಧನಕ್ಕೆ ಆಪ್ತರು, ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ದಿನಕರ್ 'ನವಗ್ರಹ' ಚಿತ್ರ ಮಾಡಲು ಮುಂದಾದಾಗ ಕನ್ನಡ ಚಿತ್ರರಂಗದ ಖ್ಯಾತ ಖಳನಟರ ಮಕ್ಕಳನ್ನು ಪಾತ್ರಗಳಿಗೆ ಆಯ್ಕೆ ಮಾಡಿಕೊಂಡಿದ್ದರು. ಅದರಂತೆ ದಿನೇಶ್ ಪುತ್ರ ಗಿರಿ ತಂಡ ಸೇರಿದ್ದರು. ಶೆಟ್ಟಿ ಪಾತ್ರ ಅವರಿಗೆ ಚೆನ್ನಾಗಿ ಸೂಟ್ ಆಗಿತ್ತು. ಒಳ್ಳೆ ಕಾಮಿಡಿ ಟೈಮಿಂಗ್ ಇರುವ ನಟ ಆಗಿದ್ದರೂ ಗಿರಿ ಅವರಿಗೆ ಹೆಚ್ಚು ಅವಕಾಶಗಳು ಸಿಕ್ಕಿರಲಿಲ್ಲ.

 

No Ads
No Reviews
No Ads

Popular News

No Post Categories
Sidebar Banner
Sidebar Banner