ಪತಿಯ ವಿಕೃತದಿಂದ ನವವಿವಾಹಿತೆ ದುರಂತ ಸಾವು, ಹೊಸದಾಗಿ ವಿವಾಹವಾದ ನವ ವಧುವಿನ ಬಾಳಲ್ಲಿ ಘೋರ ಘಟನೆಯೊಂದು ನಡೆದಿದೆ. 28 ವರ್ಷದ ವಸಂತ ಆತ್ಮಹತ್ಯೆಗೆ ಶರಣಾದ ನವವಿವಾಹಿತೆ. ಗಂಡನ ವಿಕೃತ ಕಾಮದಿಂದ ಬೇಸತ್ತು ನವವಿವಾಹಿತೆ ಸಾವಿನ ಕದ ತಟ್ಟಿರುವ ಘಟನೆ ವಿಶಾಖಪಟ್ಟಣಂದ ಗೋಪಾಲಪಟ್ಟಣದ ನಂದಮೂರಿ ಕಾಲೋನಿಯಲ್ಲಿ ನಡೆದಿದೆ . ಪತಿ ತನ್ನ ಲೈಂಗಿಕ ವೀಡಿಯೊಗಳನ್ನು ತೋರಿಸಿ ಚಿತ್ರಹಿಂಸೆ ನೀಡುತ್ತಿದ್ದನಂತೆ. ಈ ಚಿತ್ರಹಿಂಸೆ ಸಹಿಸಲಾಗದೆ ವಸಂತ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ. ಈ ಸಂಬಂಧ ಪೊಲೀಸರು, ಪತಿ ನಾಗೇಂದ್ರ ಬಾಬುನನ್ನು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಿದ್ದಾರೆ.
ತನ್ನ ಪತಿ ನಾಗೇಂದ್ರಬಾಬು ಪ್ರತಿದಿನ ಅಶ್ಲೀಲ ವಿಡಿಯೋಗಳನ್ನು ತೋರಿಸಿ ಟಾರ್ಚರ್ ಮಾಡುತ್ತಿದ್ದಾನೆ ಎಂದು ಆಕೆ ತನ್ನ ಕುಟುಂಬಸ್ಥರ ಜತೆ ಆಳಲು ತೊಡಿಕೊಂಡಿದ್ದಳು. ಈ ಕುರಿತಾಗಿ ನಾಗೇಂದ್ರಬಾಬು ಜತೆ ಮಾತನಾಡುವುದಾಗಿ ಹೇಳಿದ್ದರು. ಆದರೆ, ಇಷ್ಟರಲ್ಲೇ ವಸಂತ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಷನಾಗೇಂದ್ರಬಾಬುನೇ ನಮ್ಮ ಮಗಳಿಗೆ ಟಾರ್ಚರ್ ಕೊಟ್ಟು ಕೊಟ್ಟು ಕೊಲೆ ಮಾಡಿದ್ದಾನೆ ಎಂದು ಮೃತೆ ಕುಟುಂಬಸ್ಥರು ಆರೋಪಿಸಿದ್ದಾರೆ.
28 ವರ್ಷದ ವಸಂತಾ ಹಲವು ಕನಸು ಇಟ್ಟುಕೊಂಡು 34 ವರ್ಷದ ನಾಗೇಂದ್ರ ಬಾಬು ಎನ್ನುವಾತನನ್ನು ಮದುವೆಯಾಗಿದ್ದಳು. ಆದ್ರೆ, ಮದುವೆಯಾದ ಹೊಸತರದಲ್ಲಿ ನಾಗೇಂದ್ರ ಬಾಬುನ ವಿಕೃತ ಮನಸ್ಥಿತಿ ಬಯಲಾಗಿದೆ. ಗಂಡ ಹೆಂಡ್ತಿ ಅಂದಮೇಲೆ ಎಲ್ಲವೂ ಇದ್ದೇ ಇರುತ್ತೆ. ಆದ್ರೆ, ನಾಗೇಂದ್ರ ಬಾಬು ಲೈಂಗಿಕ ವಿಡಿಯೋಗಳನ್ನು ತೋರಿಸಿ ವಸಂತಾಳಿಗೆ ಪ್ರತಿದಿನ ಚಿತ್ರಹಿಂಸೆ ನೀಡಿದ್ದಾನೆ.
ಗಂಡನ ವಿಕೃತ ಕಾಮಕ್ಕೆ ವಸಂತಾ ಸಹಿಸಿಕೊಂಡು ಬಂದಿದ್ದಾಳೆ. ಈ ಬಗ್ಗೆ ತನ್ನ ಪೋಷಕರಿಗೂ ತನಗಾಗುತ್ತಿರುವ ಕಿರುಕುಳದ ಬಗ್ಗೆ ತಿಳಿಸಿದ್ದಾಳೆ. ಕುಟುಂಬಸ್ಥರು ಸಹ ಈ ಬಗ್ಗೆ ಮಾತನಾಡಿ ಬಗೆಹರಿಸೋಣ ಎಂದು ಸಮಾಧಾನಪಡಿಸಿದ್ದರು.
ಆದ್ರೆ, ನಾಗೇಂದ್ರ ಬಾಬುನ ಅಟ್ಟಹಾಸ ದಿನ ಕಳೆದಂತೆ ಹೆಚ್ಚಾಗುತ್ತಲೇ ಇತ್ತು. ಇದರಿಂದ ಬೇಸತ್ತ ವಸಂತಾ ಎಲ್ಲದಕ್ಕೂ ತಾನೇ ಇರಬಾರದು ಎಂದು ಸಾವಿನ ಹಾದಿ ಹಿಡಿದಿದ್ದಾಳೆ. ಈ ಮೂಲಕ ಹಲವು ಕನಸು ಕಂಡಿದ್ದ ವಸಂತಾ ಸಾವಿನ ಮನೆ ಸೇರುವಂತಾಗಿದೆ.
Log in to write reviews