No Ads

ಹೊಸ ಜೆರ್ಸಿಯಲ್ಲಿ RCB ಆಟಗಾರರು ಮಿಂಚಿಂಗ್

ಕ್ರೀಡೆ 2024-03-20 11:47:37 437
post

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2024) ಸೀಸನ್ 17 ಗಾಗಿ 10 ತಂಡಗಳು ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಿದೆ. ಈ ಮೂಲಕ ಹತ್ತು ತಂಡಗಳೂ ಕೂಡ ಐಪಿಎಲ್​ಗಾಗಿ ಸಕಲ ರೀತಿಯಲ್ಲೂ ಸಿದ್ಧವಾಗಿ ನಿಂತಿದೆ. ಅದರಂತೆ ಮಾರ್ಚ್ 22 ರಿಂದ IPL 2024 ಶುರುವಾಗಲಿದ್ದು, ಮೊದಲ ಪಂದ್ಯದಲ್ಲಿ ಸಿಎಸ್​ಕೆ ಮತ್ತು ಆರ್​ಸಿಬಿ ಹೊಸ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ.  ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಲಿದೆ. ಈ ಮೂಲಕ ಆರ್​ಸಿಬಿ-ಸಿಎಸ್​ಕೆ ಐಪಿಎಲ್ ಅಭಿಯಾನ ಆರಂಭಿಸಲಿದೆ.ಹೊಸ ಜೆರ್ಸಿಯ ಬಿಡುಗಡೆ ಬೆನ್ನಲ್ಲೇ ಇದೀಗ ಆರ್​ಸಿಬಿ ಆಟಗಾರರು ಫೋಟೋಶೂಟ್​ನಲ್ಲಿ ಕಾಣಿಸಿಕೊಂಡಿದ್ದಾರೆ.ಜೆರ್ಸಿಯಲ್ಲಿ ವೇಗದ ಬೌಲರ್​ ಮೊಹಮ್ಮದ್ ಸಿರಾಜ್ ವಿವಿಧ ರೀತಿಯಲ್ಲಿ ಪೋಸ್ ನೀಡಿದ್ದಾರೆ.ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ಕೂಡ ಫೋಟೋಶೂಟ್​ನಲ್ಲಿ ಭಾಗವಹಿಸಿದ್ದು, ಅವರು ಸಹ ಗ್ಲೌಸ್​ನೊಂದಿಗೆ ವಿವಿಧ ಭಂಗಿಯಲ್ಲಿ ಪೋಸ್ ನೀಡಿ ಮಿಂಚಿದ್ದಾರೆ.ಆಸ್ಟ್ರೇಲಿಯಾದ ಆಲ್​ರೌಂಡರ್ ಕ್ಯಾಮರೋನ್ ಗ್ರೀನ್ ಕೂಡ ಫೋಟೋಶೂಟ್​ನಲ್ಲಿ ಕಾಣಿಸಿಕೊಂಡಿದ್ದಾರೆ.ರೀಸ್ ಟೋಪ್ಲಿ ಈ ಬಾರಿ ಕೂಡ ರೆಡ್ ಜೆರ್ಸಿಯಲ್ಲಿ ಕಣಕ್ಕಿಳಿಯಲು ಸಜ್ಜಾಗಿದ್ದಾರೆ. ಯುವ ದಾಂಡಿಗ ರಜತ್ ಪಾಟಿದಾರ್ ಈ ಬಾರಿ ಸಂಪೂರ್ಣ ಫಿಟ್​ನೆಸ್​ನೊಂದಿಗೆ ಅಖಾಡಕ್ಕಿಳಿಲು ಸಜ್ಜಾಗಿ ನಿಂತಿದ್ದಾರೆ. ಬಿಗ್ ಶೋ ತೋರಿಸಲು ಗ್ಲೆನ್ ಮ್ಯಾಕ್ಸ್​ವೆಲ್ ಸಹ ಸಕಲ ಸಿದ್ಧತೆಯಲ್ಲಿದ್ದಾರೆ. ಅದಕ್ಕೂ ಮುನ್ನ ನಡೆದ ಫೋಟೋಶೂಟ್​ನಲ್ಲಿ ಬ್ಯಾಟ್​ನೊಂದಿಗೆ ಕಾಣಿಸಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ವಿರಾಟ್ ಕೊಹ್ಲಿ ಈ ಬಾರಿ ಆರ್​ಸಿಬಿ ಧ್ವಜದೊಂದಿಗೆ ಪೋಸ್ ನೀಡಿರುವುದು ವಿಶೇಷ. ಅಂದರೆ ಕಳೆದ ಸೀಸನ್​ನಲ್ಲೂ ಕೊಹ್ಲಿ ಇದೇ ಮಾದರಿಯಲ್ಲಿ ಧ್ವಜ ಹಿಡಿದು ಪೋಸ್ ಕೊಟ್ಟಿದ್ದರು. ಇದೀಗ ಧ್ವಜವನ್ನು ಹೆಗಲೇರಿಸಿಕೊಂಡು ಕಿಂಗ್​ಡಮ್​​ನಲ್ಲಿ ನಾನೇ ಕಿಂಗ್ ಎಂಬಂತೆ ವಿರಾಟ್ ಕೊಹ್ಲಿ ಪೋಸ್ ನೀಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (IPL 2024) ಸೀಸನ್ 17 ಕ್ಕಾಗಿ ಎಲ್ಲಾ ತಂಡಗಳು ನೂತನ ಜೆರ್ಸಿಯನ್ನು ಅನಾವರಣಗೊಳಿಸಿದೆ. ಈ ಹತ್ತು ತಂಡಗಳಲ್ಲಿ ಬಹುತೇಕ ಟೀಮ್​ಗಳು ಈ ಹಿಂದಿನ ಜೆರ್ಸಿ ಬಣ್ಣವನ್ನೇ ಮುಂದುವರೆಸಿದೆ. ಇದಾಗ್ಯೂ ಸನ್​ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್​ ತಂಡಗಳು ಮಾತ್ರ ತಮ್ಮ ಜೆರ್ಸಿ ವಿನ್ಯಾಸದಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡಿದೆ. ಅದರಂತೆ ಐಪಿಎಲ್ 2024 ರಲ್ಲಿ 10 ತಂಡಗಳು ಧರಿಸಲಿರುವ ಜೆರ್ಸಿಯ ಝಲಕ್ ಇಲ್ಲಿದೆ... ಡೆಲ್ಲಿ ಕ್ಯಾಪಿಟಲ್ಸ್: ರಿಷಭ್ ಪಂತ್ ಮುಂದಾಳತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಈ ಬಾರಿ ಕೂಡ ಬ್ಲೂ-ರೆಡ್ ಜೆರ್ಸಿಯಲ್ಲೇ ಕಣಕ್ಕಿಳಿಯಲಿದೆ. ಜೆರ್ಸಿಯ ಮುಂಭಾಗದ ವಿನ್ಯಾಸದಲ್ಲಿ ದೆಹಲಿ ಮೆಟ್ರೊ ರೂಟ್ ಅನ್ನು ಸಾಂಕೇತಿಕವಾಗಿ ಬಳಸಿಕೊಂಡಿರುವುದು ವಿಶೇಷ. ರಾಜಸ್ಥಾನ್ ರಾಯಲ್ಸ್: ಪಿಂಕ್ ಸಿಟಿಯನ್ನು ಪ್ರತಿನಿಧಿಸುವ ರಾಜಸ್ಥಾನ್ ರಾಯಲ್ಸ್ ಈ ಸಲ ಕೂಡ ಪಿಂಕ್ ಜೆರ್ಸಿಯಲ್ಲೇ ಕಣಕ್ಕಿಳಿಯಲಿದೆ. ತೊಳ್ಭಾಗದಲ್ಲಿ ನೀಲಿ ಬಣ್ಣ ನೀಡಲಾಗಿರುವ ಈ ಜೆರ್ಸಿಯ ಮುಂಭಾಗದ ವಿನ್ಯಾಸದಲ್ಲಿ ತುಸು ಬದಲಾವಣೆ ಮಾಡಲಾಗಿದೆ. ಸನ್​ರೈಸರ್ಸ್ ಹೈದರಾಬಾದ್: ಎಸ್​ಆರ್​ಹೆಚ್ ತಂಡವು ಈ ಬಾರಿ ನೂತನ ವಿನ್ಯಾಸದ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ ಚೆನ್ನೈ ಸೂಪರ್ ಕಿಂಗ್ಸ್​: ಯೆಲ್ಲೊ ಆರ್ಮಿ ಖ್ಯಾತಿಯ ಸಿಎಸ್​ಕೆ ತಂಡವು ಕಳೆದ ಬಾರಿಯಂತೆ ಈ ಸಲ ಕೂಡ ಹಳದಿ ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಐಪಿಎಲ್ 2023 ರ ಸಿಎಸ್​ಕೆ ಜೆರ್ಸಿಗೆ ಹೋಲಿಸಿದರೆ, ಗುಜರಾತ್ ಟೈಟಾನ್ಸ್​: ಶುಭ್​ಮನ್ ಗಿಲ್ ಮುನ್ನಡೆಸಲಿರುವ ಗುಜರಾತ್ ಟೈಟಾನ್ಸ್ ತಂಡದ ಜೆರ್ಸಿಯಲ್ಲೂ ಅಂತಹ ಬದಲಾವಣೆ ಕಂಡು ಬಂದಿದೆ. ಈ ಹಿಂದಿನ ಜೆರ್ಸಿ ವಿನ್ಯಾಸವನ್ನೇ ಜಿಟಿ ಫ್ರಾಂಚೈಸಿ ಮುಂದುವರೆಸಿದ್ದು, ಅದರಂತೆ ಈ ಬಾರಿ ಕೂಡ ಚಾರ್ಕೊಲ್ ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಪಂಜಾಬ್ ಕಿಂಗ್ಸ್: ಐಪಿಎಲ್ 2023 ರಲ್ಲಿ ಫುಲ್ ರೆಡ್ ಬಣ್ಣದಲ್ಲಿ ಕಣಕ್ಕಿಳಿದಿದ್ದ ಪಂಜಾಬ್ ಕಿಂಗ್ಸ್ ಪಡೆ ಈ ಬಾರಿ ಜೆರ್ಸಿ ವಿನ್ಯಾಸದಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡಿದೆ ಮುಂಬೈ ಇಂಡಿಯನ್ಸ್​: ಕಳೆದ ಸೀಸನ್​​ನಂತೆ ಈ ಬಾರಿ ಕೂಡ ಮುಂಬೈ ಇಂಡಿಯನ್ಸ್ ರಾಯಲ್ ಬ್ಲೂ ಬಣ್ಣದ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಆದರೆ ಈ ಸಲ ಜೆರ್ಸಿ ವಿನ್ಯಾಸದಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡಲಾಗಿದ್ದು, ಅದರಂತೆ ಜೆರ್ಸಿ ಮೇಲೆ M ಆಕಾರವನ್ನು ವಿನ್ಯಾಸಗೊಳಿಸಿರುವುದು ವಿಶೇಷ. ಕೊಲ್ಕತ್ತಾ ನೈಟ್ ರೈಡರ್ಸ್: ಕೆಕೆಆರ್ ತಂಡವು ಈ ಬಾರಿ ಕೂಡ ನೇರಳೆ ಬಣ್ಣದ ಜೆರ್ಸಿಯಲ್ಲೇ ಕಣಕ್ಕಿಳಿಯಲಿದೆ. ಆದರೆ ಜೆರ್ಸಿಯ ಮುಂಭಾಗದ ವಿನ್ಯಾಸಗಳಲ್ಲಿ ಸಣ್ಣ ಪುಟ್ಟ ಬದಲಾವಣೆ ಮಾಡಲಾಗಿದ್ದು, ಇದನ್ನು ಹೊರತುಪಡಿಸಿದರೆ ಎಂದಿನಂತೆ ಪರ್ಪಲ್-ಗೋಲ್ಡ್ ಬಣ್ಣಗಳನ್ನೇ ಈ ಬಾರಿ ಸಹ ಬಳಸಲಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು: ಆರ್​ಸಿಬಿ ತಂಡದ ಜೆರ್ಸಿಯ ಬಣ್ಣ ಬದಲಾಗಿದೆ. ಕಪ್ಪು-ಕೆಂಪು ಇದ್ದ ಜಾಗದಲ್ಲಿ ಇದೀಗ ನೀಲಿ-ಕೆಂಪು ಬಣ್ಣಗಳನ್ನು ಬಳಸಲಾಗಿದೆ. ಹಾಗೆಯೇ ತಂಡದ ಹೆಸರನ್ನು ರಾಯಲ್ ಚಾಲೆಂಜರ್ಸ್ ಬ್ಯಾಂಗಲೋರ್ ಬದಲಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂದು ಬದಲಿಸಿದೆ. ಇದರ ಜೊತೆಗೆ ಲೋಗೋವನ್ನು ಕೂಡ ಬದಲಿಸಲಾಗಿದೆ.

No Ads
No Reviews
No Ads

Popular News

No Post Categories
Sidebar Banner
Sidebar Banner