ಹೊಸ ವರ್ಷಕ್ಕೆ ಹೊಸ ಬ್ರ್ಯಾಂಡ್ ಎಂದು ಕೆಆರ್‌ಜಿ ಸಂಸ್ಥೆ ಪೋಸ್ಟರ್ವೊಂದನ್ನು ರಿಲೀಸ್ ಮಾಡಿತ್ತು. ಇದು ಕಿಚ್ಚ ಸುದೀಪ್ ಅಭಿನಯ ಮಾಡುತ್ತಿರುವ ಸಿನಿಮಾವೇ ಎಂದು ಬಹುತೇಕ ಅಭಿಮಾನಿಗಳು ಅಂದುಕೊಂಡಿದ್ದರು. ಆದರೆ ಅದು ತಪ್ಪು ಆ ಸಿನಿಮಾದಲ್ಲಿ ನಟಿಸುತ್ತಿರುವ ಹೀರೋ ಯಾರು ಎನ್ನುವುದಕ್ಕೆ, ಉತ್ತರ ಸಿಂಪಲ್.
2024ರ ಡಿಸೆಂಬರ್ 31 ರಂದು ಕೆಆರ್‌ಜಿ ಸಂಸ್ಥೆ ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹೊಸ ಸಿನಿಮಾ ಕುರಿತು ಪೋಸ್ಟ್ ಅನ್ನು ಬಿಡುಗಡೆ ಮಾಡಿತ್ತು. ಇದು ಕಿಚ್ಚನ ಹೊಸ ಸಿನಿಮಾ, ಟೈಟಲ್ ಏನಿರಬಹುದೆಂದು ಅಭಿಮಾನಿಗಳು ತಲೆ ಕೆಡಿಸಿಕೊಂಡಿದ್ದರು. ಆದರೆ ಇದು ಕಿಚ್ಚ ಸುದೀಪ್ ಅವರ ಸಿನಿಮಾವಲ್ಲ, ಬದಲಾಗಿ ಅವರ ಸಹೋದರಿಯ ಮಗನ ಸಿನಿಮಾವಾಗಿದೆ.
ಅಂದರೆ ಕಿಚ್ಚ ಸುದೀಪ್ ಅವರಿಗೆ ಸೋದರಳಿಯ ಆಗುವ ಸಂಚಿತ್ ಸಂಜೀವ್ ಅವರ ಮೊಟ್ಟ ಮೊದಲ ಸಿನಿಮಾ ಇದು ಆಗಿದೆ. ಈ ಮೂವಿಯನ್ನು ನಿರ್ದೇಶಕ ವಿವೇಕ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಅಲ್ಲದೇ ವಿವೇಕ್ ಅವರು ಇದೇ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಸಿನಿಮಾ ಇದಾಗಿದೆ. ಈ ಸಿನಿಮಾಕ್ಕೆ ಕೆಆರ್‌ಜಿ ಸ್ಟುಡಿಯೋಸ್ ಹಾಗೂ ಸುಪ್ರಿಯಾನ್ವಿ ಪಿಕ್ಚರ್ ಸ್ಟುಡಿಯೋ ಬಂಡವಾಳ ಹಾಕುತ್ತಿದೆ. ಸುದೀಪ್ ಅವರ ಪತ್ನಿ ಪ್ರಿಯಾ ಸುದೀಪ್, ಕಾರ್ತಿಕ್ ಮತ್ತು ಯೋಗಿ ಜಿ ರಾಜ್ ಅವರು ಹಣವನ್ನು ಹಾಕುತ್ತಿದ್ದಾರೆ.
ಸುದೀಪ್ ಅವರ ಸೋದರಳಿಯ ಆಗುವ ಸಂಚಿತ್ ಸಂಜೀವ್ ಅವರ ಮೊಟ್ಟ ಮೊದಲ ಸಿನಿಮಾದ ಹೆಸರೇನು, ಯಾರು ಯಾರು ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ, ಇದರಲ್ಲಿ ಸುದೀಪ್ ಅವರು ಇದಾರಾ ಎನ್ನುವ ಮಾಹಿತಿಗಳು ಸದ್ಯದಲ್ಲೇ ಗೊತ್ತಾಗಲಿವೆ. ಅಂದ್ಹಾಗೆ ಈ ಮೂವಿಯ ಫಸ್ಟ್ ಲುಕ್ ಅನ್ನು 2025ರ ಜನವರಿ 24 ರಂದು ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ. ಸಂಚಿತ್ ಸಂಜೀವ್ ಅವರು ಈ ಹಿಂದೆ ಜಿಮ್ಮಿ ಎನ್ನುವ ಸಿನಿಮಾವನ್ನು ತಾವೇ ನಿರ್ದೇಶಿಸಿ, ನಟನೆ ಮಾಡುತ್ತಿದ್ದರು. ಆದರೆ ಇದು ಈಗ ನಿಂತು ಹೋಗಿದೆ ಎಂದು ಹೇಳಲಾಗಿದೆ. ಹೀಗಾಗಿ ಹೊಸ ಸಿನಿಮಾ ಕೈಗೆತ್ತಿಕೊಂಡಿದ್ದಾರೆ.
Log in to write reviews