ವಾರೆ ನೋಟದಲ್ಲಿ ರಶ್ಮಿಕಾ ಮಂದಣ್ಣ ರಗಡ್ ಪೋಸ್ ಕೊಟ್ಟಿದ್ದು ವಿಶೇಷವಾಗಿದೆ. ಪುಷ್ಪಗಿಂತ ಪುಷ್ಪ 2 ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಅವರ ಡಿಫರೆಂಟ್ ಲುಕ್ ಅಭಿಮಾನಿಗಳ ಮನ ಗೆದ್ದಿದೆ. ಶ್ರೀವಲ್ಲಿಯ ಫಸ್ಟ್ ಲುಕ್ ಜೊತೆಗೆ ರಶ್ಮಿಕಾ ಮಂದಣ್ಣ ಅವರ ಹುಟ್ಟುಹಬ್ಬಕ್ಕೆ ಶುಭಾಶಯಗಳ ಸುರಿಮಳೆ ಹರಿದು ಬರುತ್ತಿದೆ. ಪುಷ್ಪ-2 ಚಿತ್ರದ ಟೀಸರ್ ರಿಲೀಸ್‌ಗೆ ದಿನಗಣನೆ ಶುರುವಾಗಿದೆ. ಇದೇ ಏಪ್ರಿಲ್ 8 ರಂದು ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬವಿದೆ. ಅಂದ್ರೆ ಮೋಸ್ಟ್ ಎಕ್ಸ್‌ಪೆಕ್ಟ್ ಪುಷ್ಪ-2 ಚಿತ್ರದ ಟೀಸರ್ ಬಿಡುಗಡೆ ಮಾಡಲಾಗುತ್ತಿದೆ. ಈ ಟೀಸರ್‌ಗೂ ಮೊದಲೇ ಶ್ರೀವಲ್ಲಿಯ ಫಸ್ಟ್ ಲುಕ್ ರಿಲೀಸ್ ಮಾಡಿ ಪುಷ್ಪ 2 ಚಿತ್ರತಂಡ ಬರ್ತ್‌ಡೇ ಗಿಫ್ಟ್ ನೀಡಿದೆ.ಪುಷ್ಪ 2 ಚಿತ್ರ ಈಗಾಗಲೇ ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದ್ದು, ಟೀಸರ್ ಕೂಡ ಹೊಸ ದಾಖಲೆ ಬರೆಯುವ ನಿರೀಕ್ಷೆಯಲ್ಲಿದೆ. ಪುಷ್ಪ 2 ಸಿನಿಮಾ ಆಗಸ್ಟ್ 15, 2024ಕ್ಕೆ ರಿಲೀಸ್ ಆಗಲಿದೆ. ನ್ಯಾಷನಲ್ ಕ್ರಶ್ ಖ್ಯಾತಿಯ ನಟಿ ರಶ್ಮಿಕಾ ಮಂದಣ್ಣ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಬರ್ತ್‌ಡೇ ಹಿನ್ನೆಲೆಯಲ್ಲಿ ರಶ್ಮಿಕಾ ಅವರಿಗೆ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ಅವರ ಅಭಿಮಾನಿಗಳ ಸಂಭ್ರಮದ ಮಧ್ಯೆ ರಶ್ಮಿಕಾ ಮಂದಣ್ಣ ಅವರಿಗೆ ಪುಷ್ಪಾ 2 ಚಿತ್ರ ಸ್ಪೆಷಲ್ ಗಿಫ್ಟ್ ನೀಡಿದೆ.ಪುಷ್ಪ ಸಕ್ಸಸ್ ಬಳಿಕ ಪುಷ್ಪ 2 ಚಿತ್ರದಲ್ಲೂ ರಶ್ಮಿಕಾ ಮಂದಣ್ಣ ಅವರು ಅಭಿನಯಿಸಿದ್ದು ಭಾರೀ ಕುತೂಹಲ ಕೆರಳಿಸಿದೆ. ಪುಷ್ಪ 2 ಚಿತ್ರದಲ್ಲಿ ಶ್ರೀವಲ್ಲಿಯ ಗೆಟಪ್ ಹೇಗಿದೆ ಅನ್ನೋ ಫಸ್ಟ್ ಲುಕ್ ರಿಲೀಸ್ ಆಗಿದೆ. ಪುಷ್ಪ ಚಿತ್ರತಂಡ ಸೋಷಿಯಲ್ ಮೀಡಿಯಾದಲ್ಲಿ ಶ್ರೀವಲ್ಲಿ ಫಸ್ಟ್ ಲುಕ್ ರಿಲೀಸ್ ಮಾಡಿದೆ.
ರಶ್ಮಿಕಾ ಮಂದಣ್ಣ ಹುಟ್ಟುಹಬ್ಬಕ್ಕೆ ಪುಷ್ಪ-2 ಚಿತ್ರತಂಡದಿಂದ ಸ್ಪೆಷಲ್ ಗಿಫ್ಟ್!
No Ads
Log in to write reviews