ಸಾಲು ಸಾಲು ಧಾರಾವಾಹಿಗಳು ಲಾಂಚ್ ಆಗುತ್ತಿವೆ. ಹೊಸ ಕಥೆಗಳು ಬರುತ್ತಿದ್ದಂತೆ ಫೀಲ್ಡ್ನಲ್ಲಿ ಹಲವು ಧಾರಾವಾಹಿಗಳು ವೈಂಡಪ್ ಆಗುತ್ತಿವೆ. ಮೊನ್ನೆಯಷ್ಟೇ ನಮ್ಮ ಲಚ್ಚಿ ಮುಕ್ತಾಯವಾಗ್ತಿದೆ ಅಂತಾ ಮಾಹಿತಿ ನೀಡಿದ್ವಿ. ಸದ್ಯ ನಮ್ಮ ಲಚ್ಚಿ ಸೀರಿಯಲ್ಗೆ ವಿದಾಯ ಹೇಳೋ ಸಮಯ ಬಂದಿದೆ. ನಮ್ಮ ಲಚ್ಚಿ ಅಂತಿಮ ಸಂಚಿಕೆಗಳು ಪ್ರಸಾರವಾಗ್ತಿವೆ. ಸಾಕಷ್ಟು ಸೂಪರ್ ಹಿಟ್ ಧಾರಾವಾಹಿಗಳನ್ನು ನಿರ್ಮಾಣ ಮಾಡಿರೋ ಸಂಸ್ಥೆ ಜೈಮಾತಾ ಕಂಬೈನ್ಸ್ನಡಿ ಈ ಕಥೆ ನಿರ್ಮಾಣವಾಗಿತ್ತು. ವಿಭಿನ್ನ ಜಾನರ್ನ ಕಥೆ ಮೂಲಕ ರಂಜಿಸುತ್ತಿದ್ದ ಸೀರಿಯಲ್ ನಮ್ಮ ಲಚ್ಚಿ. ಸಂಗಮ್-ಗಿರಿಜಾ ಲವ್ ಸ್ಟೋರಿಗೆ ಕೊನೆಗೂ ನ್ಯಾಯ ಸಿಕ್ಕಿದೆ. ಲಚ್ಚಿಗೆ ಅಪ್ಪ-ಅಮ್ಮನ ಪ್ರೀತಿ ಸಿಕ್ಕಿದೆ. ದೀಪಿಕಾ ಮಾಡಿದ ಮೋಸ ಬಯಲಾಗಿದೆ. ಕೊನೆ ದಿನದ ಶೂಟಿಂಗ್ ಸಖತ್ ಇಂಟ್ರೆಸ್ಟಿಂಗ್ ಆಗಿತ್ತು. ಅಷ್ಟೇ ಭಾವುಕ ಕ್ಷಣಗಳಿಗೆ ಸಾಕ್ಷಿಯಾಯ್ತು. ನಿರ್ದೇಶಕ ಸಂಪೃಥ್ವಿ ತಂಡದ ಜೊತೆಗೆ ಕಳೆದ ಅದ್ಭುತ ಕ್ಷಣಗಳನ್ನ ನೆನೆದರು. ಮುದ್ದು ಮಾತಿನಿಂದ, ವಯಸ್ಸಿಗೂ ಮೀರಿದ ಅದ್ಭುತ ಅಭಿನಯಿದಿಂದ ಗಮನ ಸೆಳಿದಿರೋ ಪುಟಾಣಿ ಲಚ್ಚಿ. ಲಚ್ಚಿ ಅಂದ್ರೆ ಸಾಂಘವಿ ನಟನೆಯ ಅನುಭವಗಳು ತುಂಬಾನೇ ವಿಶೇಷವಾದದ್ದು. ಅಭಿನಯದಲ್ಲಿ ಹೊಸ ಪ್ರಯೋಗ ಮಾಡಿದ್ದ ನಟ ವಿಜಯ್ ಸೂರ್ಯ, ನೇಹಾ ಗೌಡ ಅವರ ಕಾಂಬಿನೇಷನ್ ಚನ್ನಾಗಿತ್ತು. ಅಪ್ಪ-ಮಗಳ ಸೆಂಟಿಮೆಂಟ್, ಅಮ್ಮನ ಪ್ರೀತಿ-ಕೋಪ, ಮೋಸದ ಆಟಗಳ ಜೊತೆಗೆ ಕಥೆ ಸವಿಯೋಕೆ ಸಿಕ್ಕಿತು. ಈಗ ಅದು ಒಂದೋಳ್ಳೆ ಕ್ಲೈಮ್ಯಾಕ್ಸ್ ಮೂಲಕ ಸುಖಾಂತ್ಯವಾಗಿದ್ದು, ತಂಡದ ಮುಂದಿನ ಹೆಜ್ಜೆಗಳಿಗೆ ಆಲ್ ದಿ ಬೆಸ್ಟ್.
ನಮ್ಮ ಲಚ್ಚಿ ಸೀರಿಯಲ್ಗೆ ಗುಡ್ ಬೈ ಹೇಳಿದ ನೇಹಾ ಗೌಡ, ವಿಜಯ ಸೂರ್ಯ;
No Ads
Log in to write reviews