ಉತ್ತರ ಪ್ರದೇಶದ ಮೀರತ್ನಲ್ಲಿ (Meerut) ನಡೆದ ಭೀಕರ ಹತ್ಯೆ ಪ್ರಕರಣ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ತನಿಖೆ ನಡೆಸಿದಾಗ ಈ ಕೊಲೆ ಪ್ರಕರಣ ದಿನದಿಂದ ದಿನಕ್ಕೆ ಸ್ಫೋಟಕ ತಿರುವು ಪಡೆದುಕೊಳ್ಳುತ್ತಲೇ ಇತ್ತು. ಪೊಲೀಸರ ನಿರಂತರ ತನಿಖೆಯಿಂದಾಗಿ ಕೊಲೆಯ ಹಿಂದಿನ ಇಂಚಿಂಚೂ ಮಾಹಿತಿ ಇಲ್ಲಿ ಬಹಿರಂಗವಾಗಿತ್ತು. ಪತ್ನಿ ಮುಸ್ಕಾನ್ ಮತ್ತು ಆಕೆಯ ಗೆಳೆಯ ಸಾಹಿಲ್ ಶುಕ್ಲಾ (Sahil Shukla) ಸೇರಿಕೊಂಡು ಗಂಡ ಸೌರಭ್ ರಜಪೂತ್ನನ್ನೇ (Sourabh Rajput) ಭೀಕರವಾಗಿ ಹತ್ಯೆ (Murder) ಮಾಡಿದ್ದರು. ಕೊಲೆ ಮಾಡಿದ್ದಲ್ಲದೇ ಕೃತ್ಯದ ಸ್ವಲ್ಪವೂ ಸುಳಿವು ಸಿಗಬಾರದೆಂಬ ಕಾರಣಕ್ಕೆ ಗಂಡ ಸೌರಭ್‌ನನ್ನ ತುಂಡು ತುಂಡಾಗಿ ಕತ್ತರಿಸಿ ಡ್ರಮ್ನಲ್ಲಿ ಹಾಕಿ, ಅದಕ್ಕೆ ಸಿಮೆಂಟ್ ತುಂಬಿಸಿದ್ದರು. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿ ಹೆಂಡತಿ ಮುಸ್ಕಾನ್ (Muskan) ಆಗಿದ್ದಳು. ಇದೀಗ ಪ್ರಿಯಕರನ ಜೊತೆ ಸೇರಿ ಗಂಡನನ್ನ ಕೊಂದು ಜೈಲು ಸೇರಿದ್ದ ಮುಸ್ಕಾನ್ ಗರ್ಭಿಣಿಯಾಗಿದ್ದಾಳೆ ಎಂಬ ಶಾಕಿಂಗ್ ವರದಿಯೊಂದು ಹೊರಬಿದ್ದಿದೆ.
ಉತ್ತರ ಪ್ರದೇಶದ ಮೀರತ್ನಲ್ಲಿ ನಡೆದ ಭಯಾನಕ ಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಮುಸ್ಕಾನ್ ರಾಸ್ತೋಗಿ ಎಂಬ ಮಹಿಳೆ ಜೈಲಿನಲ್ಲಿದ್ದಾಗ ಗರ್ಭಿಣಿ ಎಂದು ದೃಢಪಟ್ಟಿದೆ ಎಂದು ವರದಿಯಾಗಿದೆ. ತನ್ನ ಪತಿ ಸೌರಭ್ ರಜಪೂತ್‌ನನ್ನು ಪ್ರಿಯಕರ ಸಾಹಿಲ್ ಶುಕ್ಲಾ ಜೊತೆ ಸೇರಿ ಕೊಂದ ಆರೋಪದ ಮೇಲೆ ಮುಸ್ಕಾನ್ ಜೈಲು ಸೇರಿದ್ದರು. ಈಗ ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಪತಿಗೆ ಮಾದಕ ದ್ರವ್ಯ ನೀಡಿದ ನಂತರ ಆಕೆ ತನ್ನ ಪ್ರಿಯಕರನೊಂದಿಗೆ ಆತನ ದೇಹವನ್ನು ಕತ್ತರಿಸಿ ಡ್ರಮ್‌ನಲ್ಲಿ ಇರಿಸಿ, ಸಾಕ್ಷ್ಯವನ್ನು ಮರೆಮಾಚುವ ಪ್ರಯತ್ನದಲ್ಲಿ ಸಿಮೆಂಟ್ ತುಂಬಿಸಿದರು. ಆದರೆ, ಈ ವೇಳೆ ಆಕೆ ಗರ್ಭಿಣಿಯಾಗಿದ್ದರು ಎಂಬ ಆಘಾತಕಾರಿ ವಿಷಯ ಇಂದು ಬೆಳಕಿಗೆ ಬಂದಿದೆ.
Log in to write reviews