ನೇಹಾ ಹಿರೇಮಠ್ ಬರ್ಬರ ಹತ್ಯೆ ಕೇಸ್‌ನ ರೋಚಕ ಅಂಶಗಳ ಬಗ್ಗೆ ಎಳೆ ಎಳೆಯಾಗಿ ಬಾಯ್ಬಿಟ್ಟಿದ್ದಾನೆ ಆರೋಪಿ ಫಯಾಜ್. ನನಗೆ ಸಿಗದ ನೇಹಾ ಮತ್ಯಾರಿಗೂ ಸಿಗಬಾರದು ಅನ್ನೋ ಹಗೆ ಫಯಾಜ್‌ನಲ್ಲಿತ್ತು ಅನ್ನೋದು ಪೊಲೀಸರ ವಿಚಾರಣೆಯಲ್ಲಿ ಗೊತ್ತಾಗಿದೆ. ನೇಹಾ ಹತ್ಯೆಗೆ 5 ದಿನಗಳ ಮೊದಲೇ ಚಾಕು ಖರೀದಿ ಮಾಡಿದ್ದ. ಧಾರವಾಡದಲ್ಲಿ ನೇಹಾ ಕೊಲೆ ಮಾಡೋ ಉದ್ದೇಶದಿಂದ ಚಾಕು ಖರೀದಿಸಿ ಬ್ಯಾ ಗ್ನಲ್ಲಿ ಇಟ್ಟುಕೊಂಡು ಓಡಾಡಿದ್ದ. ಆರೋಪಿ ಫಯಾಜ್, ನೇಹಾಳ ಪ್ರತಿ ನಡೆಯನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದ. ಮೊದಲೇ ಸ್ಕೆಚ್ ಹಾಕಿದ್ದಂತೆ ಏಪ್ರಿಲ್ 18ರಂದು ಎರಡೂವರೆ ಗಂಟೆಗಳ ಕಾಲ ಕಾದು ಕುಳಿತು ಕೊಲೆ ಮಾಡಿದ್ದಾನೆ. ಅಂದು ಕೊಲೆ ಮಾಡಲು ನಿರ್ಧರಿಸಿದ್ದ ಫಯಾಜ್, ತಾಯಿಯ ಸ್ಕೂಟಿ ತೆಗೆದುಕೊಂಡು ಧಾರವಾಡಕ್ಕೆ ಬಂದಿದ್ದ. ಪರೀಕ್ಷಾ ಕೇಂದ್ರದ ಎದುರೇ ಕಾದು ಕುಳಿತಿದ್ದ ಆರೋಪಿ ಫಯಾಜ್ ನೇಹಾ ಹಿರೇಮಠ್ ಕೊಲೆ ಮಾಡಿದ್ದಾನೆ. ನೇಹಾ ಕೊಲೆಗೆ ಮೊದಲು ಫಯಾಜ್ ಸ್ಕೂಟಿಯ ಹ್ಯಾಂಡಲ್ ಲಾಕ್ ಮಾಡದೇ ಬಿಟ್ಟಿದ್ದ. ಯಾಕಂದ್ರೆ ಕೊಲೆ ಮಾಡಿ ತಪ್ಪಿಸಿಕೊಂಡು ಹೋಗೋಕೆ ಹ್ಯಾಂಡಲ್ ಹಾಗೇ ಬಿಟ್ಟಿದ್ದ. ಕಾಲೇಜ್ ಕ್ಯಾಂಪಸ್‌ನಿಂದ ಪರಾರಿಯಾಗೋಕೆ ರಸ್ತೆಯತ್ತ ಮುಖ ಮಾಡಿ ಸ್ಕೂಟಿಯನ್ನ ನಿಲ್ಲಿಸಿದ್ದ. ಆದ್ರೆ ಅಲ್ಲಿಗೆ ತಲುಪಲು ಆಗದಿದ್ದಾಗ ಮುಖ್ಯದ್ವಾರದಿಂದ ಓಡಿ ಹೋಗಿದ್ದಾನೆ. ನಿನ್ನೆಯಷ್ಟೇ ನೇಹಾ ಹತ್ಯೆ ಮಾಡಿದ ಜಾಗದ ಮಹಜರು ಮಾಡಿದ್ದ ಸಿಐಡಿ ಪೊಲೀಸರು. ಕ್ರೈಂ ಸ್ಪಾಟ್‌ಗೆ ಫಯಾಜ್ ಅನ್ನು ಕರೆದುಕೊಂಡು ಹೋದ ಸಿಐಡಿ ಭಾರೀ ಪೊಲೀಸ್ ಭದ್ರತೆಯಲ್ಲಿ ಸ್ಥಳ ಮಹಜರು ಮಾಡಿದ್ದಾರೆ. ಧಾರವಾಡ ಕಾರಾಗೃಹದಲ್ಲಿದ್ದ ಫಯಾಜ್ ಅನ್ನು ಸದ್ಯ ಸಿಐಡಿ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ನೇಹಾ ಹತ್ಯೆಗೆ 5 ದಿನಗಳ ಮೊದಲೇ ಚಾಕು ಖರೀದಿ ಮಾಡಿದ್ದ ಫಯಾಜ್
No Ads
Log in to write reviews