ಅಪ್ಪ-ಅಮ್ಮಗೆ ಮತ್ತೆ ಚಿಗುರಿದ ಬದುಕಿನ ಭರವಸೆ.. ಆಟವಾಡುತ್ತಿದ್ದ ಕಂದ ಕೊಳವೆ ಬಾವಿಗೆ ಬಿದ್ದಿತ್ತು 2 ವರ್ಷದ ಸಾತ್ವಿಕ್ನನ್ನು ರಕ್ಷಣೆ ಮಾಡಲು ಎನ್ಡಿಆರ್ಎಫ್, ಎಸ್ಡಿಆರ್ಎಫ್ ತಂಡಗಳಿಂದ ರಕ್ಷಣಾ ಕಾರ್ಯಾಚರಣೆ ವೇಗವಾಗಿ ನಡೆಯುತ್ತಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ಮಗುವನ್ನ ಹೊರ ತೆಗೆಯಲಾಗುತ್ತದೆ. ಈಗಾಗಲೇ ಕೊಳವೆ ಬಾವಿಯಲ್ಲಿ ಸಿಲುಕಿಕೊಂಡಿರುವ ಮಗು ಅಳುತ್ತಿರುವ ಧ್ವನಿಯನ್ನು ರಕ್ಷಣೆ ಪಡೆ ಸಿಬ್ಬಂದಿ ಕೇಳಿಸಿಕೊಂಡಿದ್ದಾರೆ. ಈ ಸಂಬಂಧ NDRF, SDRF ತಂಡಗಳು ರಕ್ಷಣಾ ಕಾರ್ಯಾಚರಣೆಯ ವೇಗ ಹೆಚ್ಚಿಸಿವೆ. ರಕ್ಷಣೆ ಕಾರ್ಯ ಅಂತಿಮ ಘಟ್ಟ ತಲುಪಿದ್ದು ಕೆಲವೇ ಗಂಟೆಗಳಲ್ಲಿ ಮಗು ಹೊರತೆಗೆಯಲಿದ್ದಾರೆ. ಸತತ 17 ಗಂಟೆಗಳಿಂದ ಈ ರಕ್ಷಣಾ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಭೂಮಿಯನ್ನು ಅಗೆಯುವ ವೇಳೆ ಕಲ್ಲು ಬಂಡೆ ಅಡ್ಡಿಯಾಗಿದ್ರಿಂದ ರಕ್ಷಣಾ ಕಾರ್ಯದಲ್ಲಿ ಕೊಂಚ ವಿಳಂಬವಾಗಿದೆ. ಇದು ಬಿಟ್ಟರೇ ಎಲ್ಲವೂ ಸುಗಮವಾಗಿ ನಡೆಯುತ್ತಿದ್ದ ಕಾರಣ ಇನ್ನೇನು ಕೆಲವೇ ಕೆಲವು ಗಂಟೆಗಳಲ್ಲಿ ಸಾತ್ವಿಕ್ ಪ್ರಪಂಚವನ್ನು ಮರಳಿ ನೋಡಲಿದ್ದಾನೆ ಎಂಬ ಭರವಸೆ ಸಿಕ್ಕಿದೆ 2014ರ ನಂತರ ಇದೀಗ 2024ರ ಏಪ್ರಿಲ್ 3 ರಂದು ಸಾತ್ವಿಕ್ ಎನ್ನುವ 2 ವರ್ಷದ ಮುದ್ದಾದ ಕಂದ ಕೊಳವೆ ಬಾವಿಗೆ ಬಿದ್ದು ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾನೆ. ಒಳಗೆ ಅವನಿಗಾಗುವ ನೋವು, ನರಳಾಟ, ಹಸಿವು ಮತ್ತು ದಾಹ ಎಲ್ಲವೂ ಆ ದೇವರೇ ಬಲ್ಲನು. ಏಕೆಂದರೆ ಮಗು ಒಂದು ದಿನ ಹಸಿವಿನಿಂದ ಇರಬೇಕು ಎಂದರೆ ದೊಡ್ಡ ಪವಾಡವೇ ನಡೆಯಬೇಕು. ಅಂತಹದ್ದರಲ್ಲಿ ಸಾತ್ವಿಕ್ ಕೊಳವೆ ಬಾವಿಯಲ್ಲಿ ಬೀಳುವುದಕ್ಕೂ ಮೊದಲು ಯಾವಾಗ ಊಟ ಮಾಡಿದ್ದನು ಎನ್ನುವುದು ಗೊತ್ತಿಲ್ಲ. ಆವಾಗಿನಿಂದ ಈ ಕ್ಷಣದವರೆಗೆ ಉಪವಾಸದಲ್ಲಿದ್ದಾನೆ. ಸದ್ಯ ರಕ್ಷಣಾ ಕಾರ್ಯವಂತೂ ವೇಗವಾಗಿ ನಡೆದಿದ್ದು ಆದಷ್ಟು ಬೇಗ ಬದಕಿ ಬರಲಿ ಎನ್ನುವುದು ಎಲ್ಲದ ಹೃದಯದ ಮಾತು.
ಅಪ್ಪ-ಅಮ್ಮಗೆ ಮತ್ತೆ ಚಿಗುರಿದ ಬದುಕಿನ ಭರವಸೆ..
No Ads
Log in to write reviews