ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ (Micro Finance), ಹಾಗೂ ಫೈನಾನ್ಸ್ ಕಂಪನಿ (Finance Company) ಹಾವಳಿ ಹೆಚ್ಚಾಗಿರುವ ಹೊತ್ತಲ್ಲೇ ಇದೀಗ ಮೀಟರ್ ಬಡ್ಡಿ ದಂಧೆ (Meter Interest Sscam) ಕೂಡ ಸದ್ದು ಮಾಡುತ್ತಿದೆ. ಹೌದು ಮೀಟರ್ ಬಡ್ಡಿ ದಂಧೆಕೋರರ ಅಟ್ಟಹಾಸಕ್ಕೆ ಯುವಕನೊಬ್ಬ ಬಲಿಯಾದ ಘಟನೆ ಯಾದಗಿರಿ (Yadgiri) ನಗರದ ಲಾಡೇಜಗಲ್ಲಿಯಲ್ಲಿ ನಡೆದಿದೆ.
ಖಾಸೀಂ ಅಲಿಯಾಸ್ ಬಿಲ್ಲಿ ಎನ್ನುವ ಯುವಕ ಮೃತಪಟ್ಟಿದ್ದಾನೆ. ಈತ ಯಾಸೀನ್ ಎನ್ನುವವನ ಬಳಿ 35 ಸಾವಿರ ರೂ ಸಾಲ ಪಡೆದಿದ್ದನಂತೆ, ಮರು ಪಾವತಿಸುವುದು ತಡವಾಗಿದ್ದಕ್ಕೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದನಂತೆ. ಚಿಕಿತ್ಸೆ ಫಲಕಾರಿಯಾಗದೆ ಕಲಬುರಗಿ ಸರ್ಕಾರಿ ಆಸ್ಪತ್ರೆಯಲ್ಲಿ ಖಾಸೀಂ ಉಸಿರು ಚೆಲ್ಲಿದ್ದಾನೆ
ಯಾಸೀನ್ ಬಳಿ ಸಾಲ ಪಡೆದಿದ್ದ ಮೃತ ಖಾಸೀಂ ಸಾಲ ಪಡೆದಿದ್ದನು. ಸಾಲ ಮರು ಪಾವತಿಗೆ 19ನೇ ತಾರೀಖು ನಿಗದಿಯಾಗಿತ್ತು, ಆದರೆ ಅಂದು ಹಣ ನೀಡಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಸ್ವಲ್ಪ ದಿನ ಸಮಯ ಕೊಡು ಎಂದು ಖಾಸೀಂ ಕೇಳಿಕೊಂಡಿದ್ದನಂತೆ, ಆದರೆ ಯಾಸೀನ್ ದುಡ್ಡಿನ ಹಪಾಹಪಿಯಲ್ಲಿದ್ದನು
ನಿಗದಿಪಡಿಸಿದ ಸಮಯಕ್ಕೆ ಹಣ ಮರುಪಾವತಿ ಮಾಡದೇ ಇದ್ದಿದ್ದಕ್ಕೆ ಖಾಸೀಂನನ್ನು ಬಾರುಕೋಲ್, ಮೊಣಕಾಲಿನಿಂದ ಒದ್ದು ಯಾಸೀನ್ ಮಾರಣಾಂತಿಕ ಹಲ್ಲೆ ನಡೆಸಿದ್ದನು. ಬಳಿಕ ಖಾಸೀಂನನ್ನ ಅವರ ಕುಟುಂಬಸ್ಥರು ಯಾದಗಿರಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರು ಕಲಬುರಗಿಗೆ ರವಾನಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಲಬುರಗಿ ಸರ್ಕಾರಿ ಆಸ್ಪತ್ರೆಯಲ್ಲಿ ಖಾಸೀಂ ಉಸಿರು ಚೆಲ್ಲಿದ್ದಾನೆ.
ಸಧ್ಯ ಆರೋಪಿ ಯಾಸೀನ್ ನನ್ನ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಯಾಸೀನ್ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
Log in to write reviews