No Ads

ಮ್ಯಾಕ್ಸ್ ಮಂಜುಗೆ ಸಿಕ್ಕ ಹೊಸ ಗೆಳತಿ; ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್

ಮನರಂಜನೆ 2025-04-14 15:00:00 267
post

ಉಗ್ರಂ ಮಂಜು ಅವರು ‘ಬಿಗ್ ಬಾಸ್’ ಬಳಿಕ ಹಲವು ಸಿನಿಮಾ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಅದರಲ್ಲಿ ‘ಮ್ಯಾಂಗೋ ಪಚ್ಚ’ ಚಿತ್ರ ಕೂಡ ಒಂದು. ಈ ಸಿನಿಮಾದ ನಾಯಕಿ ಕಾಜಲ್ ಕುಂದರ್ ಜೊತೆ ಇರೋ ಫೋಟೋಗಳನ್ನು ಮಂಜು ಅವರು ಹಂಚಿಕೊಂಡಿದ್ದಾರೆ.

ಕಾಜಲ್ ಜೊತೆ ಇರೋ ಫೋಟೋ ಪೋಸ್ಟ್ ಮಾಡಿರೋ ಮಂಜು ಅವರು, ‘ನನ್ನ ಹೊಸ ಗೆಳತಿ ಕಾಜಲ್ ಕುಂದರ್. ಮ್ಯಾಂಗೋ ಪಚ್ಚ ಸಿನಿಮಾದ ನಟಿ’ ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ. ಈ ಫೋಟೋಗೆ ಫ್ಯಾನ್ಸ್ ಕಡೆಯಿಂದ ಭರ್ಜರಿ ಲೈಕ್ಸ್ ಸಿಗುತ್ತಿದೆ.

ಕಾಜಲ್ ಅವರು ಕನ್ನಡದ ನಟಿ. ಅವರು ಈ ಮೊದಲು ‘ಪೆಪೆ’, ‘ಮೇಘಾ’, ‘ಬಾಂಡ್ ರವಿ’ ರೀತಿಯ ಸಿನಿಮಾಗಳನ್ನು ಮಾಡಿದ್ದಾರೆ. ಈಗ ಅವರಿಗೆ ‘ಮ್ಯಾಂಗೋ ಪಚ್ಚ’ ಸಿನಿಮಾದಲ್ಲಿ ನಟಿಸೋ ಅವಕಾಶ ದೊರೆತಿದೆ. ಇದಕ್ಕಾಗಿ ಕಾಜಲ್ ಖುಷಿ ಆಗಿದ್ದಾರೆ.

ಮಂಜು ಹಾಗೂ ಕಾಜಲ್ ಅವರ ಸೀನ್ ಕಾಂಬಿನೇಷನ್ ಇತ್ತು. ಈ ಕಾರಣಕ್ಕೆ ಶೂಟಿಂಗ್ ಬ್ರೇಕ್ ಸಂದರ್ಭದಲ್ಲಿ ಕುಳಿತು ಹರಟೆ ಹೊಡೆದಿದ್ದಾರೆ. ಇವರ ಮಧ್ಯೆ ಒಳ್ಳೆಯ ಗೆಳೆತನ ಬೆಳೆದಿದೆ. ಉಗ್ರಂ ಮಂಜು ಪಾತ್ರ ಯಾವ ರೀತಿಯಲ್ಲಿ ಮೂಡಿ ಬಂದಿದೆ ಎಂಬ ಕುತೂಹಲ ಇದೆ.

‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಸುದೀಪ್ ಅವರ ಸೋದರ ಅಳಿಯ ಸಂಚಿತ್ ಸಂಜೀವ್ ಅವರು ನಾಯಕನಾಗಿ ನಟಿಸುತ್ತಿದ್ದಾರೆ.  ಈ ಚಿತ್ರ ರೆಟ್ರೋ ಶೈಲಿಯಲ್ಲಿ ಮೂಡಿ ಬರಲಿದೆ. ಇದು ಅವರು ನಟಿಸುತ್ತಿರೋ ಮೊದಲ ಸಿನಿಮಾ ಆಗಿದೆ.

ಉಗ್ರಂ ಮಂಜು ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಸ್ಪರ್ಧಿ ಆಗಿದ್ದರು. ಅವರಿಗೆ ಬಿಗ್ ಬಾಸ್​ನಿಂದ ಸಾಕಷ್ಟು ಜನಪ್ರಿಯತೆ ಸಿಕ್ಕಿದೆ. ದೊಡ್ಮನೆಯಲ್ಲಿ ಇರುವಾಗಲೇ ‘ಮ್ಯಾಕ್ಸ್’ ಸಿನಿಮಾ ರಿಲೀಸ್ ಆಗಿ ಯಶಸ್ಸು ಕಂಡಿತು. ಅಂದಿನಿಂದ ಅವರು ಮ್ಯಾಕ್ಸ್ ಮಂಜು ಆಗಿದ್ದಾರೆ.

 

No Ads
No Reviews
No Ads

Popular News

No Post Categories
Sidebar Banner
Sidebar Banner