ದುಬೈಇಂದ ಕಳೆದ ರಾತ್ರಿ ಏರ್ಪೋರ್ಟ್ಗೆ ಬಂದಿಳಿದ ನಟಿಯನ್ನು ವಿದೇಶದಿಂದ ಹೆಚ್ಚುವರಿ ಚಿನ್ನವನ್ನು ತಂದಿರುವ ಆರೋಪದ ಮೇಲೆ ವಶಕ್ಕೆ ಪಡೆಯಲಾಗಿದೆ. ಈ ನಟಿ, ಸ್ಯಾಂಡಲ್ವುಡ್ ಕಿಚ್ಚ ಸುದೀಪ್ ಜೊತೆ ಮಾಣಿಕ್ಯ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ಪಟಾಕಿ ಸಿನಿಮಾದಲ್ಲಿ ನಟನೆ ಮಾಡಿದ್ದಾರೆ.
ಕಳೆದ ರಾತ್ರಿ ದುಬೈನಿಂದ ಕೆಂಪೇಗೌಡ ಏರ್ಪೋರ್ಟ್ಗೆ ಬಂದಿದ್ದ ನಟಿ, ವಿದೇಶದಿಂದ ಹೆಚ್ಚುವರಿ ಗೋಲ್ಡ್ ತಂದಿರುವ ಶಂಕೆ ಮೂಡಿದೆ. ಇದೇ ಆರೋಪದ ಮೇಲೆ ಆಕೆಯನ್ನು ವಶಕ್ಕೆ ಪಡೆಯಲಾಗಿದೆ. ಏರ್ಪೋರ್ಟ್ ಕಸ್ಟಮ್ಸ್ ಡಿಆರ್ಐ ತಂಡ ವಶಕ್ಕೆ ಪಡೆದು ವಿಚಚಾರಣೆ ನಡೆಸಿದೆ.
ಬೆಂಗಳೂರಿನ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಟಿ ರನ್ಯಾ ರಾವ್ ಅವರನ್ನು ಡಿಆರ್ಐ ವಶಕ್ಕೆ ಪಡೆದು ವಿಚಾರಣೆ ನಡೆಸಿದೆ. ಅಕ್ರಮ ಚಿನ್ನ ಸಾಗಾಟದಲ್ಲಿ ನಟಿ ತೊಡಗಿಕೊಂಡಿರುವ ಆರೋಪದಲ್ಲಿ ನಟಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ.
Log in to write reviews