No Ads

ಪತ್ನಿಯ ಖಾಸಗಿ ಫೋಟೊ ತೋರಿಸಿ ಬ್ಲ್ಯಾಕ್ಮೇಲ್; ಸ್ನೇಹಿತನ ತುಂಡ ತುಂಡಾಗಿಸಿದ ವ್ಯಕ್ತಿ

India 2025-04-03 13:29:20 330
post

ಪತ್ನಿಯ ಖಾಸಗಿ ಫೋಟೊಗಳನ್ನಿಟ್ಟುಕೊಂಡು ಬ್ಲ್ಯಾಕ್​ಮೇಲ್ ಮಾಡುತ್ತಿದ್ದ ಸ್ನೇಹಿತನನ್ನು ವ್ಯಕ್ತಿಯೊಬ್ಬ ಕೊಲೆ(Murder) ಮಾಡಿ ತುಂಡು, ತುಂಡಾಗಿ ಕತ್ತರಿಸಿರುವ ಘಟನೆ ಗುಜರಾತ್​ನಲ್ಲಿ ನಡೆದಿದೆ. ಸ್ನೇಹಿತನನ್ನು ಕೊಂದು 9 ತುಂಡುಗಳಾಗಿ ದೇಹವನ್ನು ಕತ್ತರಿಸಿ, ವಿವಿಧೆಡೆ ಎಸೆದುಬಂದಿದ್ದ. ಉತ್ತರ ಪ್ರದೇಶ ಮೂಲದ ಶೈಲೇಂದ್ರ ಎಂಬ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಭರೂಚ್​ನ ವಿವಿಧ ಪ್ರದೇಶಗಳಲ್ಲಿ ದೇಹದ ವಿವಿಧ ಭಾಗಗಳು ಪತ್ತೆಯಾಗಿದ್ದವು. ನಾಲ್ಕು ದಿನಗಳ ನಂತರ ಗುಜರಾತ್ ಪೊಲೀಸರು ಉತ್ತರ ಪ್ರದೇಶ ಮೂಲದ ವ್ಯಕ್ತಿ ಶೈಲೇಂದ್ರನನ್ನು ಬಂಧಿಸಿದ್ದಾರೆ. ಶೈಲೇಂದ್ರ ತನ್ನ ಸ್ನೇಹಿತ ಸಚಿನ್‌ನನ್ನು ಕೊಲೆ ಮಾಡಿ, ಗುರುತು ಹಿಡಿಯದಂತೆ ದೇಹವನ್ನು ಒಂಬತ್ತು ತುಂಡುಗಳಾಗಿ ಕತ್ತರಿಸಿದ್ದಾಗಿ ಒಪ್ಪಿಕೊಂಡಿದ್ದಾನೆ.

ಮಾರ್ಚ್​ 29ರಂದು ಭರೂಚ್​ನ ಚರಂಡಿಯಲ್ಲಿ ವ್ಯಕ್ತಿಯ ತಲೆ ಪತ್ತೆಯಾಗಿತ್ತು, ಮುಂದಿನ ಮೂರು ದಿನಗಳಲ್ಲಿ ವಿವಿಧ ಸ್ಥಳಗಳಲ್ಲಿ ಮಾನವ ದೇಹದ ಭಾಗಗಳನ್ನು ವಶಪಡಿಸಿಕೊಳ್ಳಲಾಯಿತು. ಆತನ ಕೈಯಲ್ಲಿರುವ ಹಚ್ಚೆಯಿಂದ ಆತ ಸಚಿನ್ ಚೌಹಾಣ್ ಎಂದು ಗುರುತಿಸಿದ್ದಾರೆ. ಉತ್ತರ ಪ್ರದೇಶದ ಬಿಜ್ನೋರ್ ಮೂಲದ ಸಚಿನ್, ನಾಲ್ಕು ವರ್ಷದ ಮಗ, ಪತ್ನಿಯೊಂದಿಗೆ ಭರೂಚ್‌ನ ದಹೇಜ್‌ನಲ್ಲಿ ಕೆಲಸ ಮಾಡುತ್ತಿದ್ದರು.

ಬಿಜ್ನೋರ್‌ನವರೇ ಆದ ಅವರ ಸ್ನೇಹಿತ ಶೈಲೇಂದ್ರ ಚೌಹಾಣ್ ಕೂಡ ಭರೂಚ್‌ನಲ್ಲಿ ವಾಸಿಸುತ್ತಿದ್ದರು. ಅವರ ಎರಡೂ ಕುಟುಂಬಗಳು ಹೋಳಿಗೆಂದು ತಮ್ಮ ಹಳ್ಳಿಗೆ ಹೋಗಿದ್ದರು, ಘಟನೆ ಸಂಭವಿಸಿದಾಗ ಸ್ನೇಹಿತರಿಬ್ಬರೇ ಇದ್ದರು.

ನಾಪತ್ತೆಯಾಗಿದ್ದವನ ಫೋಟೊವನ್ನು ಪರಿಶೀಲಿಸಿದ ಪೊಲೀಸರು ಹೆಚ್ಚಿನ ಮಾಹಿತಿಗಾಗಿ ಸಹೋದರನಿಗೆ ಕರೆ ಮಾಡಿದ್ದರು. ತನಿಖೆಯ ಸಮಯದಲ್ಲಿ ಸಚಿನ್ ಕೊನೆಯ ಬಾರಿಗೆ ಶೈಲೇಂದ್ರ ಜೊತೆ ಕಾಣಿಸಿಕೊಂಡಿದ್ದಾನೆ ಎಂದು ತಿಳಿದುಬಂದಿದೆ. ಹೆಚ್ಚಿನ ತನಿಖೆಯಲ್ಲಿ ಶೈಲೇಂದ್ರ ಸಚಿನ್ ಫೋನ್‌ನೊಂದಿಗೆ ಬಿಜ್ನೋರ್ ಮತ್ತು ದೆಹಲಿಗೆ ಪ್ರಯಾಣಿಸಿದ್ದನು, ಸಚಿನ್ ಜೀವಂತವಾಗಿದ್ದಾನೆ ಎಂಬ ಭ್ರಮೆಯನ್ನು ಸೃಷ್ಟಿಸಲು ಅವನ ಕುಟುಂಬಕ್ಕೆ ಸಂದೇಶಗಳನ್ನು ಕಳುಹಿಸಿದ್ದ ಎಂದು ತಿಳಿದುಬಂದಿದೆ.

ಶೈಲೇಂದ್ರ ಮಹಿಳೆಯ ವೇಷ ತೊಟ್ಟು ದೇಹದ ಭಾಗಗಳನ್ನು ವಿಲೇವಾರಿ ಮಾಡಲು ಆಕ್ಟೀವಾದಲ್ಲಿ ಹೋಗಿದ್ದ. ಬಂಧನದ ಬಳಿಕ ಶೈಲೇಂದ್ರ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಮಾರ್ಚ್​ 24ರಂದು ರಾತ್ರಿ ಇಬ್ಬರೂ ಮದ್ಯಪಾನ ಮಾಡಿದ್ದರು. ಬಳಿಕ ಇಬ್ಬರ ನಡುವೆ ಜಗಳ ಉಲ್ಬಣಗೊಂಡಿತ್ತು. ಕೋಪದ ಭರದಲ್ಲಿ ಸಚಿನ್​ನನ್ನು ಕೊಲೆ ಮಾಡಿದ್ದಾನೆ.

ಆತನ ಪತ್ನಿಯ ಖಾಸಗಿ ಫೋಟೊಗಳನ್ನಿಟ್ಟುಕೊಂಡು ಬ್ಲ್ಯಾಕ್​ಮೇಲ್ ಮಾಡಿದ್ದಾಗಿ ತಿಳಿಸಿದ್ದಾರೆ. ಮೂರು ದಿನಗಳ ಕಾಲ ಶವವನ್ನು ತನ್ನ ಮನೆಯಲ್ಲಿ ಇಟ್ಟುಕೊಂಡು, ಒಂಬತ್ತು ತುಂಡುಗಳಾಗಿ ಕತ್ತರಿಸಿ, ಪತ್ತೆಯಾಗದಂತೆ ವಿವಿಧ ಸ್ಥಳಗಳಲ್ಲಿ ವಿಲೇವಾರಿ ಮಾಡಿದ್ದ.

 

 

No Ads
No Reviews
No Ads

Popular News

No Post Categories
Sidebar Banner
Sidebar Banner