ಗುಜರಾತ್: ಮಹಾತ್ಮ ಗಾಂಧಿಯವರ (Mahatma Gandhi) ಮೊಮ್ಮಗಳು ನೀಲಾಂಬೆನ್ ಪಾರಿಖ್ (92) (Nilamben Parikh) ಅವರು ಕೊನೆಯುಸಿರೆಳೆದಿದ್ದಾರೆ. 92 ವರ್ಷ ವಯಸ್ಸಾಗಿದ್ದ ನೀಲಾಂಬೆನ್ ಪಾರಿಖ್ ಅವರು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರು. ಇದೀಗ ಅವರು ನಿಧನ ಹೊಂದಿದ್ದಾರೆ.
ನೀಲಾಂಬೆನ್ ಪಾರಿಖ್ ಅವರು ಮಹಾತ್ಮ ಗಾಂಧಿಯವರ ಮಗ ಹರಿದಾಸ್ ಗಾಂಧಿಯವರ ಮೊಮ್ಮಗಳು. ಹರಿಲಾಲ್ ಗಾಂಧಿ ಮತ್ತು ಅವರ ಪತ್ನಿ ಗುಲಾಬ್ ಅವರ ಐದು ಮಕ್ಕಳಲ್ಲಿ ಹಿರಿಯವರಾದ ರಾಮಿಬೆನ್ ಅವರ ಮಗಳು ನೀಲಾಂಬೆನ್ ತಮ್ಮ ಮಗ ಡಾ. ಸಮೀರ್ ಪಾರಿಖ್ ಅವರೊಂದಿಗೆ ನವಸಾರಿ ಜಿಲ್ಲೆಯಲ್ಲಿ ವಾಸಿಸುತ್ತಿದ್ದರು. ಅವರ ಅಂತ್ಯಕ್ರಿಯೆಯ ಮೆರವಣಿಗೆ ಇಂದು ನಡೆಯಲಿದ್ದು, ವೀರ್ವಾಲ್ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ತಿಳಿದು ಬಂದಿದೆ.
ಮೂರು ದಶಕಗಳ ಹಿಂದೆ ನಿವೃತ್ತರಾಗುವವರೆಗೂ, ಬುಡಕಟ್ಟು ಮಹಿಳೆಯರಿಗೆ ಶಿಕ್ಷಣ ನೀಡುವ ಮತ್ತು ಆರ್ಥಿಕ ಸ್ವಾತಂತ್ರ್ಯವನ್ನು ಪಡೆಯುವ ಸಲುವಾಗಿ ವೃತ್ತಿಪರ ತರಬೇತಿಯನ್ನು ನೀಡಿ ಅವರ ಉನ್ನತಿಗಾಗಿ ನೀಲಾಂಬೆನ್ ಸ್ಥಾಪಿಸಿದ್ದ ದಕ್ಷಿಣಪಥ ಎಂಬ ಸಂಸ್ಥೆಯಲ್ಲಿ ತಮ್ಮ ಇಡೀ ಜೀವನವನ್ನು ಕಳೆದರು.
ಹರಿಲಾಲ್ ಗಾಂಧಿ ಮತ್ತು ಅವರ ಪತ್ನಿ ಗುಲಾಬ್ (ಚಂಚಲ್) ಅವರ ಐದು ಮಕ್ಕಳಲ್ಲಿ ಹಿರಿಯರಾದ ರಾಮಿಬೆನ್ ಅವರ ಪುತ್ರಿ ನೀಲಾಂಬೆನ್, ತಮ್ಮ ಜೀವನದುದ್ದಕ್ಕೂ ಮೌನ ಶಕ್ತಿಗೆ ಮತ್ತು ಖಾದಿಯ ಮೇಲಿನ ನಿಷ್ಠೆಗೆ ಹೆಸರುವಾಸಿಯಾಗಿದ್ದರು. ನವಸಾರಿಯಲ್ಲಿ ನೇತ್ರಶಾಸ್ತ್ರಜ್ಞರಾಗಿ ಕೆಲಸ ಮಾಡುತ್ತಿರುವ ಅವರ ಮಗ, ಡಾ. ಸಮೀರ್ ಪಾರಿಖ್ ಅವರು ತಮ್ಮ ತಾಯಿಯ ಬಗ್ಗೆ ಭಾವುಕ ಮಾತುಗಳನ್ನು ಹೇಳಿದ್ದಾರೆ.
Log in to write reviews