ಬ್ಯುಸಿನೆಸ್ನಲ್ಲಿ ಹಣ ಹೂಡಿಕೆ ಮಾಡಿ, ಲಾಭ ಮಾಡಿ ಕೊಡ್ತೀವಿ ಅಂತ ಹಣ ಕಟ್ಟಿಸಿಕೊಂಡು ನೂರಾರು ಜನರಿಗೆ ವಂಚನೆ ಮಾಡಿರೋ ಪ್ರಕರಣಹೊಸಪೇಟೆಯಲ್ಲಿ ಬೆಳಕಿಗೆ ಬಂದಿದೆ..
ಆರೋಪಿ ಮುಮ್ತಾಜ್ ಬೇಗಂ ಆ್ಯಂಡ್ ಟೀಮ್ ಬ್ಯುಸಿನೆಸ್ನಲ್ಲಿ ಲಾಭ ಮಾಡಿಕೊಡ್ತೀವಿ ಅಂತ ನಂಬಿಸಿ 100 ಕೋಟಿಗೂ ಹೆಚ್ಚು ಹಣ ಕಟ್ಟಿಸಿಕೊಂಡಿದ್ದಾರಂತೆ. ಐನಾತಿ ಲೇಡಿ ಮಾತು ನಂಬಿ ಹಣ ಕಳೆದುಕೊಂಡ ಜನ ಬೀದಿಗೆ ಬಿದ್ದಿದ್ದು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಆರೋಪಿ ಮುಮ್ತಾಜ್ ಬೇಗಂ ಮರಳು ಮಾತುಗಳನ್ನ ನಂಬಿ ಮೋಸ ಹೋಗಿರೋರು ಹಲವಾರು ಜನ. ವಿಜಯನಗರ ಜಿಲ್ಲೆ ಹೊಸಪೇಟೆಯ ನೂರಾರು ಜನರಿಗೆ ಮುಮ್ತಾಜ್ ಬೇಗಂ & ಟೀಂ ದೋಖಾ ಪಂಗನಾಮ ಹಾಕಿದೆ.
ಮುಮ್ತಾಜ್ ಮಾತು ನಂಬಿದ ಜನ ಸಾಲ ಮಾಡಿ, ಮನೆ ಮಾರಿ ಹಣ ಹೂಡಿಕೆ ಮಾಡಿದ್ದಾರೆ. ಇದೀಗ ಹಣ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಹಣ ಕೇಳಲು ಹೋದವರ ಮೇಲೆ ಮುಮ್ತಾಜ್ ಆ್ಯಂಡ್ ಟೀಂ ದಬ್ಬಾಳಿಕೆ ನಡೆಸಿದೆ ಎನ್ನಲಾಗಿದೆ.
ಕಳೆದ ಒಂದು ವರ್ಷದಿಂದ ಮುಮ್ತಾಜ್ ಗ್ಯಾಂಗ್ ಇವರ ಬಳಿ ಹಣ ಕಟ್ಟಿಸಿಕೊಳ್ಳುತ್ತಾ ಬಂದಿದೆ. ಹೊಸಪೇಟೆ ನಿವಾಸಿ ಅನೀಸ್ನಿಂದ 1 ಕೋಟಿಗೂ ಅಧಿಕ ಹಣ ಪಡೆದಿದ್ದು, ಅನೀಸ್ ದೂರಿನ ಮೇರೆಗೆ ಹೊಸಪೇಟೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮುಮ್ತಾಜ್ ಬೇಗಂ ಆ್ಯಂಡ್ ಟೀಮ್ನ ಕೇರಳ ಮೂಲದ ಇಬ್ಬರು ಆರೋಪಿಗಳು ಅರೆಸ್ಟ್ ಆಗಿದ್ದಾರೆ. ಪ್ರಮುಖ ಆರೋಪಿ ಮುಮ್ತಾಜ್ ಸೇರಿ ಉಳಿದವ್ರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
Log in to write reviews