No Ads

LIC ಉದ್ಯೋಗಿಗಳಿಗೆ ಶೇ.17ರಷ್ಟು ವೇತನ ಹೆಚ್ಚಳ

ವಾಣಿಜ್ಯ 2024-03-16 19:03:04 234
post

ಭಾರತೀಯ ಜೀವ ವಿಮಾ ನಿಗಮ (ಎಲ್ಐಸಿ) ಉದ್ಯೋಗಿಗಳಿಗೆ ಕೇಂದ್ರ ಸರ್ಕಾರ ಶೇ.17ರಷ್ಟು ವೇತನ ಹೆಚ್ಚಳ ಮಾಡಿದೆ. ಇದರಿಂದ ಸುಮಾರು 1 ಲಕ್ಷ ಉದ್ಯೋಗಿಗಳಿಗೆ ಹಾಗೂ 30,000 ಪಿಂಚಣಿದಾರರಿಗೆ ಪ್ರಯೋಜನವಾಗಲಿದೆ. ಈ ವೇತನ ಹೆಚ್ಚಳ 2002ರ ಆಗಸ್ಟ್ ನಿಂದಲೇ ಜಾರಿಗೆ ಬರಲಿದೆ. ಇದರಿಂದ ಎಲ್ಐಸಿಗೆ ಒಂದು ವರ್ಷಕ್ಕೆ  4,000 ಕೋಟಿ ರೂ. ವೆಚ್ಚವಾಗಲಿದೆ. ಈ ಬಗ್ಗೆ ಎಲ್ಐಸಿ ಪ್ರಕಟಣೆ ಕೂಡ ಹೊರಡಿಸಿದೆ. ಈ ಪರಿಷ್ಕರಣೆಯಲ್ಲಿ ಎನ್ ಪಿಎಸ್ ಕೊಡುಗೆಯನ್ನು ಶೇ.10ರಿಂದ ಶೇ.14ಕ್ಕೆ ಹೆಚ್ಚಿಸಿರೋದು ಕೂಡ ಸೇರಿದೆ. ಇದರಿಂದ 2010ರ ಏಪ್ರಿಲ್ 1ರ ಬಳಿಕ ಸೇರ್ಪಡೆಗೊಂಡ ಸುಮಾರು  24,000 ಉದ್ಯೋಗಿಗಳಿಗೆ ನೆರವಾಗಲಿದೆ. ಈ ಪರಿಷ್ಕರಣೆಯು ಎಲ್ಐಸಿ ಪಿಂಚಣಿದಾರರಿಗೆ ಒಂದು ಬಾರಿಯ ಎಕ್ಸ್ ಗ್ರೇಷಿಯಾ ಪಾವತಿಯನ್ನು ಕೂಡ ಒಳಗೊಂಡಿದೆ. ಇದನ್ನು ಎಲ್ಐಸಿ ಪಿಂಚಣಿದಾರರಿಗೆ ಅವರು ಸಂಸ್ಥೆಗೆ ನೀಡಿರುವ ಮೌಲ್ಯಯುತ ಕೊಡುಗೆಗೆ ಅಭಿನಂದನೆ ಮಾದರಿಯಲ್ಲಿ ನೀಡಲಾಗುತ್ತಿದೆ. ಇದರಿಂದ 30,000ಕ್ಕೂ ಅಧಿಕ ಪಿಂಚಣಿದಾರರಿಗೆ ಹಾಗೂ ಕುಟುಂಬ ಪಿಂಚಣಿದಾರರಿಗೆ ನೆರವಾಗಲಿದೆ.  ಬ್ಯಾಂಕ್ ಉದ್ಯೋಗಿಗಳ ವೇತನ ಪರಿಷ್ಕರಣೆ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಅಂಗೀಕರಿಸಿತ್ತು. ಶೇಕಡ 17 ವೇತನ ಹೆಚ್ಚಳದ ಪ್ರಸ್ತಾವನೆ ಅದಾಗಿತ್ತು. ಇದು 2022ರ ನವೆಂಬರ್ 1ರಿಂದ ಪೂರ್ವಾನ್ವಯವಾಗುವಂತೆ ಜಾರಿಯಾಗಿತ್ತು. ಈ ಕ್ರಮದಿಂದ ಸಾರ್ವಜನಿಕ ವಲಯದ ಬ್ಯಾಂಕ್‌ಗಳು ವಾರ್ಷಿಕವಾಗಿ ಸುಮಾರು 8,284 ಕೋಟಿ ರೂಪಾಯಿಯನ್ನು ಹೆಚ್ಚುವರಿಯಾಗಿ ನೀಡಬೇಕಿರುತ್ತದೆ. 8 ಲಕ್ಷ ಬ್ಯಾಂಕ್ ಉದ್ಯೋಗಿಗಳು ವೇತನ ಹೆಚ್ಚಳದಿಂದ ಪ್ರಯೋಜನ ಪಡೆಯಲಿದ್ದಾರೆ, ಇದು ನವೆಂಬರ್ 2022 ರಿಂದ ಅನ್ಚಯವಾಗುವಂತೆ ಜಾರಿಗೆ ಬರಲಿದೆ. ಕೇಂದ್ರ ಸರ್ಕಾರಿ ನೌಕರಿಯಲ್ಲಿರುವ ವ್ಯಕ್ತಿಗಳ ತುಟ್ಟಿಭತ್ಯೆಯನ್ನು ಶೇ. 4ರಷ್ಟು ಏರಿಸಲು ಕ್ಯಾಬಿನೆಟ್‌ ಇತ್ತೀಚೆಗೆ  ಅನುಮೋದನೆ ನೀಡಿತ್ತು. 2024ರ ಜನವರಿ 1 ರಿಂದ ಅನ್ವಯವಾಗುವಂತೆ ಇದು ಜಾರಿಗೆ ಬರಲಿದೆ. ಡಿಎ ಹೆಚ್ಚಳಕ್ಕೆ ಅನುಮೋದನೆ ಸಿಕ್ಕಿರುವ ಕಾರಣ, ಕೇಂದ್ರ ಸರ್ಕಾರಿ ನೌಕರರ ಡಿಎ ಶೇಕಡಾ 50ಕ್ಕೆ ಏರಿದಂತಾಗಲಿದೆ.

No Ads
No Reviews
No Ads

Popular News

No Post Categories
Sidebar Banner
Sidebar Banner