No Ads

ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ತಿದ್ದುಪಡಿ ವಿಧೇಯಕಕ್ಕೆ ವಿಧಾನಪರಿಷತ್ ಅನುಮೋದನೆ: ವಿಧಾನ ಮಂಡಲದ ಉಭಯ ಸದನಗಳ ಒಪ್ಪಿಗೆ ಕಾಯ್ದೆಯಾಗಲು ಒಂದೇ ಹೆಜ್ಜೆ ಬಾಕಿ

ಕರ್ನಾಟಕ 2024-12-19 16:33:11 49
post

ಬೆಳಗಾವಿ, ಡಿಸೆಂಬರ್‌ 19: ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದ್ದ 2024 ನೇ ಸಾಲಿನ ಕರ್ನಾಟಕ ಕಾರ್ಮಿಕ ಕಲ್ಯಾಣ ನಿಧಿ ತಿದ್ದುಪಡಿ ವಿಧೇಯಕಕ್ಕೆ ವಿಧಾನ ಪರಿಷತ್‌ ಅನುಮೋದನೆ ನೀಡಿತು.  ಪರಿಷತ್‌ ಕಲಾಪದ ವೇಳೆ ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಅವರು ವಿಧೇಯಕವನ್ನು ಮಂಡಿಸಿದರು. ಆನಂತರ ಮಾತನಾಡಿದ ಅವರು, ಇದು ಐದನೇ ಬಾರಿಗೆ ಈ ಮಸೂದೆಗೆ ತಿದ್ದುಪಡಿ ತರಲಾಗಿದೆ. ಈಗಾಗಲೇ ಹಲವು ಬಾರಿ ಉದ್ಯೋಗಿ, ಉದ್ಯೋಗದಾತ ಮತ್ತು ಸರ್ಕಾರದ ಕೊಡುಗೆ ಬದಲಾಯಿಸಲಾಗಿದೆ. ಐವತ್ತು ಉದ್ಯೋಗಿಗಳಿಗೂ ಹೆಚ್ಚು ಇರುವಲ್ಲಿ ಈ ಕಾಯ್ದೆಗೆ ವ್ಯಾಪ್ತಿಗೆ ಬರಲಿದ್ದಾರೆ ಎಂದರು.  ಈ ನಿಧಿನಿಂದ ಹಲವಾರು ಸಾಮಾಜಿಕ ಸೇವಾ ಸೌಲಭ್ಯಗಳನ್ನು ನೀಡಲಾಗುತ್ತಿದೆ. ವಿಶೇಷವಾಗಿ ಶೈಕ್ಷಣಿಕ ನೆರವು, ವೈದ್ಯಕೀಯ ಸೌಲಭ್ಯ, ಅಪಘಾತ ಧನಸಹಾಯ, ಅಂತ್ಯಸಂಸ್ಕಾರ ನೆರವು, ಹೆರಿಗೆ ಭತ್ಯೆ ನೀಡಲಾಗುತ್ತದೆ. ಕಳೆದ ಎರಡು ಸಾಲಿನಿಂದ ಕೊಡುಗೆಗಿಂತ ವೆಚ್ಚ ಜಾಸ್ತಿ ಆಗಿತ್ತು. ಕಾರ್ಮಿಕರ ಸಂಖ್ಯೆ ಹೆಚ್ಚಳವಾಗಿದೆ. ಆಡಳಿತಾತ್ಮಕ ವೆಚ್ಚ ಏರಿದೆ. ಆದ್ದರಿಂದ ಸಂಘಟಿತ ವಲಯದ ಕಾರ್ಮಿಕರಿಗೆ ಹೆಚ್ಚಿನ ಸಹಾಯ ಮಾಡಲು ಈ ತಿದ್ದುಪಡಿ ತರಲಾಗಿದೆ ಎಂದು ವಿವರಿಸಿದರು.  ಪರಿಷತ್‌ ಸದಸ್ಯರಾದ ತಿಪ್ಪೇಸ್ವಾಮಿ, ಟಿ ಎ ಶರವಣ, ಕೇಶವ ಪ್ರಸಾದ್‌, ಐವನ್‌ ಡಿಸೋಜ ಅವರು ಈ ನಿಧಿಯ ಬಳಕೆ ಬಗ್ಗೆ ವಿವರಗಳನ್ನು ಕೋರಿದರು.  ಇದಕ್ಕೆ ಉತ್ತರಿಸಿದ ಸಚಿವ ಲಾಡ್‌ ಅವರು, ಕಾರ್ಮಿಕರ ಕೊಡುಗೆ ವರ್ಷಕ್ಕೆ ಒಂದು ಬಾರಿ. ಎಲ್ಲಾ ಕಡೆಯಿಂದ ಪರಿಶೀಲನೆ ಮಾಡಿಯೇ ಫಲಾನುಭವಿಗಳಿಗೆ ಹಣ  ನೀಡಲಾಗುತ್ತದೆ. ಇದರಲ್ಲಿ ಯಾವುದೇ ಅವ್ಯವಹಾರ ಆಗಲು ಬಿಡುವುದಿಲ್ಲ ಎಂದರು.  ಇಎಸ್‌ಐ ಆಸ್ಪತ್ರೆಗಳ ಸುಧಾರಣೆಗೆ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಕೇಂದ್ರ ಸಚಿವರೊಂದಿಗೆ ಮಾತನಾಡಿದ್ದೇನೆ. ಖಾಸಗಿ ಆಸ್ಪತ್ರೆಗಳಿಗೆ ಹೋಗುವುದನ್ನು ತಡೆದು ನಮ್ಮಲ್ಲೇ ಒಳ್ಳೆಯ ಚಿಕಿತ್ಸೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.  ನಮ್ಮ ಇಲಾಖೆ ಪಾರದರ್ಶಕವಾಗಿ ಕೆಲಸ ಮಾಡುತ್ತಿದೆ. ಯಾವುದೇ ಭ್ರಷ್ಟಾಚಾರಕ್ಕೆ ಅವಕಾಶ ಇಲ್ಲ. ನಿರ್ದಿಷ್ಟ ಪ್ರಕರಣ ಇದ್ದರೆ ಕ್ರಮ ಕೈಗೊಳ್ಳಲಾಗುವುದು. ಅಸಂಘಟಿತ ಕಾರ್ಮಿಕರಿಗೆ ಸಹ ಸೌಲಭ್ಯಗಳನ್ನು ನೀಡಲಾಗುತ್ತಿದೆ ಎಂದು ಹೇಳಿದರು.

No Ads
No Reviews
No Ads

Popular News

No Post Categories
Sidebar Banner
Sidebar Banner