ಹುಬ್ಬಳ್ಳಿ ಕಾಲೇಜಿನ ಆವರಣದಲ್ಲಿ ನಿನ್ನೆ ನಡೆದ ನೇಹಾ ಹಿರೇಮಠ ಅವರ ಕೊಲೆಯನ್ನು ಸಮಾಜದಲ್ಲಿರುವ ಎಲ್ಲರೂ ಖಂಡಿಸಬೇಕು. ಯಾವುದೇ ಸಮಾಜ ಅಥವಾ ರಾಜ್ಯದಲ್ಲಿ ಇಂತಹ ಅನಾಹುತಗಳಾಗಬಾರದು ಎಂದು ಮಾನ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ. ನಾವು ಮುಂದೆ ಬರುವ ದಿನಗಳಲ್ಲಿ ಇತರಹದ ಸಂಗತಿಗಳು ನಡೆಯದಂತೆ ಕಾನೂನುಗಳನ್ನು ತರಬೇಕು. ಇದು ಮೊದಲ ಬಾರಿಯಾಗಿರುವುದಲ್ಲ. ಈ ಹಿಂದೆಯೂ ಇಂತಹ ಅಮಾನವೀಯ ಘಟನೆಗಳು ಜರುಗಿರುವುದು ನಮಗೆ ಕಾಣಲು ಸಿಗುತ್ತದೆ. ಕಾಲೇಜಿನ ಆವರಣದಲ್ಲಿ ಇಂಥ ಪರಿಸ್ಥಿತಿಗಳು ನಿರ್ಮಾಣವಾದರೆ ಮಕ್ಕಳನ್ನು ಕಾಲೇಜುಗಳಿಗೆ ಕಳುಹಿಸುವುದೇ ಕಷ್ಟವಾಗುತ್ತದೆ. ನಾವೆಲ್ಲರು ಇನ್ನಾದರೂ ಜಾಗೃತರಾಗಿ ಇಂಥ ದುಷ್ಕೃತ್ಯ ನಡೆದಾಗ ಕೂಡಲೇ ಆರೊಪಿಗೆ ಕಠಿಣ ಶಿಕ್ಷೆ ನೀಡಿದಲ್ಲಿ ಮಾತ್ರ ಈ ರೀತಿಯ ಕೃತ್ಯವನ್ನು ತಡೆಯಬಹುದು. ಈ ರೀತಿಯ ಘಟನೆಗಳು ಮತ್ತೆ ಮರುಕಳಿಸದಂತಾಗಲಿ. ಭಗವಂತ ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ನೀಡಲಿ. ಆರೋಪಿಗೆ ಕಠಿಣ ಶಿಕ್ಷೆಯಾದರೆ ಮಾತ್ರ ನೇಹಾ ಸಾವಿಗೆ ನ್ಯಾಯ ಕೊಡಿಸಿದಂತಾಗುತ್ತದೆ ಎಂದಿದ್ದಾರೆ.
ನೇಹಾ ಮನೆಗೆ ತೆರಳಿ ಪೋಷಕರಿಗೆ ಸಾಂತ್ವನ ಹೇಳಿದ ಕಾರ್ಮಿಕ ಸಚಿವ ಸಂತೋಷ್ ಲಾಡ್
No Ads
Log in to write reviews