No Ads

ವಿದ್ಯಾರ್ಥಿನಿ ಬರ್ಬರ ಹತ್ಯೆ: ಎನ್ ಕೌಂಟರ್ ಕಾನೂನು ಬರಲೇಬೇಕು - ಸಚಿವ ಸಂತೋಷ್ ಲಾಡ್ ಆಗ್ರಹ

ಜಿಲ್ಲೆ 2024-04-19 14:41:46 198
post

ಹುಬ್ಬಳ್ಳಿ: ಹುಬ್ಬಳ್ಳಿಯ ಬಿವಿಬಿ ಕ್ಯಾಂಪಸ್‌ನಲ್ಲಿ ವಿದ್ಯಾರ್ಥಿನಿ ನೇಹಾ ಬರ್ಬರ ಹತ್ಯೆಯನ್ನು ಖಂಡಿಸಿರುವ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್‌ ಲಾಡ್‌, ಇಂತಹ ಪ್ರಕರಣದಲ್ಲಿ ಎನ್ ಕೌಂಟರ್ ಕಾನೂನು ಬರಲೇಬೇಕು ಎಂದು ಆಗ್ರಹಿಸಿದರು. ಹುಬ್ಬಳ್ಳಿಯ ಕಿಮ್ಸ್ ಶವಾಗಾರಕ್ಕೆ ಭೇಟಿ ನೀಡಿದ ಅವರು, ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು. ಇದೊಂದು ಬರ್ಬರ ಕೃತ್ಯ. ಇಂತಹ ಘಟನೆಗಳು ಮುಂದೆಂದೂ ನಡೆಯಬಾರದು. ಎನ್ ಕೌಂಟರ್ ಕಾನೂನು ಮಾಡಿದರೆ ಈ ರೀತಿಯ ಕೃತ್ಯ ಎಸಗುವವರನ್ನು ಹೊಡೆದು ಉರುಳಿಸಬಹುದು ಎಂದರು. ಎಲ್ಲ ಸರ್ಕಾರದ ಅವಧಿಯಲ್ಲಿ ಇಂತಹ ಘಟನೆಗಳು ನಡೆದಿವೆ. ಅವುಗಳ ಸಂಖ್ಯೆಗಳನ್ನು ಕೊಡಬಲ್ಲೆ, ಆದರೆ ಅದಕ್ಕೆ ಉತ್ತರಿಸುವ ಸಮಯ ಇದಲ್ಲ. ಹಲವು ಮುಖಂಡರು ಈ ಬಗ್ಗೆ ಮಾತನಾಡಿದ್ದಾರೆ. ಅದಕ್ಕೆ ನಾನು ಏನು ಹೇಳುವುದಿಲ್ಲ ಎಂದರು. ಕೆಲವರು ಇದನ್ನ ರಾಜಕೀಯ ಮಾಡಲು ಹೊರಟಿದ್ದಾರೆ. ಅವರಿಗೆ ಏನು ಅಂತಾ ಹೇಳಲಿ. ಇಂತಹ ಸೂಕ್ಷ್ಮ ವಿಷಯಗಳನ್ನು  ರಾಜಕೀಯಗೊಳಿಸದೇ ಸೂಕ್ಷ್ಮತೆ ಇರಬೇಕು. ಸಂಮಯ ಕಾಯ್ದುಕೊಳ್ಳಬೇಕು. ಹುಬ್ಬಳ್ಳಿ ಘಟನೆ ರಾಜಕರಣಗೊಳಿಸುತ್ತಿರುವವರು ಬಿಜೆಪಿಯವರು. ಅವರೇಕೆ ಬೆಂಗಳೂರು ಘಟನೆ ಬಗ್ಗೆ ಏಕೆ ಚಕಾರ ಎತ್ತುತ್ತಿಲ್ಲ.   ತನಿಖೆ ಮುಗಿಯದೇ ರಾಜಕೀಯ ಹೇಳಿಕೆ ನೀಡುವುದು ಸರಿಯಲ್ಲ ಎಂದ ಅವರು ಕಳೆದ ಎರಡು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಒಟ್ಟು ೧೩.೩೦ ಲಕ್ಷ ಯುವತಿಯರು, ಮಹಿಳೆಯರು ಕಾಣೆಯಾಗಿದ್ದಾರೆ. ಈ ಬಗ್ಗೆ ಜೋಶಿ ಉತ್ತರಿಸಲಿ ಎಂದು ಸವಾಲು ಹಾಕಿದರು. ಘಟನೆ ಆಕಸ್ಮಿಕ ಎಂಬ ಗೃಹಸಚಿವರ ಹೇಳಿಕೆಯನ್ನು ಸಚಿವ ಲಾಡ್ ಅವರು ಸಮರ್ಥಿಸಿಕೊಂಡರು. ಡ್ರಗ್ಸ್ ಮಾಫೀಯಾ ಬಹಳ ದಿನದಿಂದ ಇದೆ. ಡ್ರಗ್ಸ್ ಬೇರೆ ಬೇರೆ ಕಡೆಯಿಂದ ಬರುತ್ತದೆ. ಇದು ಕೇವಲ ರಾಜ್ಯದ ಸಮಸ್ಯೆಯಲ್ಲ. ಎಲ್ಲಿ ಸರಬರಾಜು ಆಗುತ್ತದೆ ಅದನ್ನ ತಡೆಯಬೇಕು. ಈಗ ಆಗಿರುವ ಘಟನೆಗೆ ಅದಕ್ಕೂ ಹೋಲಿಕೆ ಬೇಡ ಎಂದರು.

No Ads
No Reviews
No Ads

Popular News

No Post Categories
Sidebar Banner
Sidebar Banner