ಬೆಂಗಳೂರು, ಜನವರಿ 07: ಕರ್ನಾಟಕ ಸರ್ಕಾರ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್‌ಟಿಸಿ) ನೌಕರರು ಮತ್ತು ಸಿಬ್ಬಂದಿಗೆ ನಗದು ರಹಿತ ಆರೋಗ್ಯ ಸವಲತ್ತು ಯೋಜನೆಯನ್ನು ಸೋಮವಾರ ಆರಂಭಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಯೋಜನೆಗೆ ಚಾಲನೆ ನೀಡಿದ್ದಾರೆ. 275 ಖಾಸಗಿ ಆಸ್ಪತ್ರೆಗಳ ಜೊತೆಗೆ ಒಡಂಬಡಿಕೆ ಆಗಿದ್ದು, ಮುಂದಿನ ದಿನಗಳಲ್ಲಿ ಇತರೇ ನಿಗಮಗಳಿಗೆ ಈ ಸೌಲಭ್ಯವನ್ನು ವಿಸ್ತರಿಸಲಿದ್ದು, ಇದರ ಪ್ರಮಾಣ ಇನ್ನೂ ಹೆಚ್ಚಲಿದೆ ಎಂದು ಸಾರಿಗೆ ಇಲಾಖೆ ಹೇಳಿದೆ.
ಕೆ.ಎಸ್.ಆರ್.ಟಿ.ಸಿ ಆರೋಗ್ಯ ಯೋಜನೆ'ಯಡಿಯಲ್ಲಿ ಒಳ ಮತ್ತು ಹೊರ ರೋಗಿ ಚಿಕಿತ್ಸೆಯನ್ನು ಹೇಗೆ ನೀಡಲಾಗುತ್ತದೆ? ಎಂಬ ಕುರಿತು ಮಾಹಿತಿ ನೀಡಲಾಗಿದೆ. ವೈದ್ಯಕೀಯ ಚಿಕಿತ್ಸೆ (Medical Treatment) ಯೋಜನೆಯಡಿ ವೈದ್ಯಕೀಯ ಚಿಕಿತ್ಸೆ ಎಂದರೆ ಯೋಜನೆಯ ವ್ಯಾಪ್ತಿಗೆ ಒಳಪಟ್ಟಿರುವ ಹಾಗೂ ಯೋಜನೆಯಲ್ಲಿ ನಿರ್ದಿಷ್ಟಪಡಿಸಲಾಗಿರುವಂತೆ ಚಿಕಿತ್ಸೆ ಎಂದು ವಿವರಣೆ ನೀಡಲಾಗಿದೆ.
ಹೊರ ರೋಗಿ ವೈದ್ಯಕೀಯ ಚಿಕಿತ್ಸೆ: ನೋಂದಣಿ, ವೈದ್ಯರ ಸಮಾಲೋಚನಾ ಶುಲ್ಕ, ರೋಗ ನಿರ್ಧಾರ ವಿಧಾನಗಳು, ಪರೀಕ್ಷೆಗಳು, ಔಷಧಿಗಳು (ನಿರ್ದಿಷ್ಟ ಸಮಾಲೋಚನೆಯಲ್ಲಿ ವೈದ್ಯರು ಸೂಚಿಸಿರುವ ಸಲಹಾ ಚೀಟಿಯಂತೆ) ನಿಗಮದ ನೌಕರರಿಗೆ ಹೊರರೋಗಿ ವೈದ್ಯಕೀಯ ಚಿಕಿತ್ಸೆಗೆ ನಗದು ರಹಿತ ವೈದ್ಯಕೀಯ ಚಿಕಿತ್ಸಾ ಸೌಲಭ್ಯಗಳನ್ನು ನೀಡಲು ಒಡಂಬಡಿಕೆ ಮಾಡಿಕೊಂಡು ಮಾನ್ಯತಾ ಪಟ್ಟಿಯಲ್ಲಿರುವ ಆಸ್ಪತ್ರೆಗಳಲ್ಲಿ ಪಡೆದ ಹೊರರೋಗಿ ವೈದ್ಯಕೀಯ ಚಿಕಿತ್ಸೆಯೂ ನಗದು ರಹಿತ ಚಿಕಿತ್ಸಾ ಯೋಜನೆಯ ವ್ಯಾಪ್ತಿಗೆ ಬರುತ್ತದೆ. ಮಾನ್ಯತಾ ಪಟ್ಟಿಯಲ್ಲಿರದ ಆಸ್ಪತ್ರೆಗಳಲ್ಲಿ ಹೊರರೋಗಿ ಚಿಕಿತ್ಸೆ ಪಡೆದ ಪ್ರಕರಣಗಳಲ್ಲಿ ವೈದ್ಯಕೀಯ ವೆಚ್ಚವನ್ನು ಪ್ರಸ್ತುತ ಅನುಸರಿಸುತ್ತಿರುವ ಕ್ರಮದಲ್ಲಿ ನಿಯಮಾನುಸಾರ ಮರುಪಾವತಿ ಮಾಡುವುದು.
ರೋಗಿ ವೈದ್ಯಕೀಯ ಚಿಕಿತ್ಸೆ: ಮಾನ್ಯತಾ ಪಟ್ಟಿಯಲ್ಲಿರುವ ಆಸ್ಪತ್ರೆಗಳಲ್ಲಿ ಒಳರೋಗಿಯಾಗಿ ಪಡೆದ ಚಿಕಿತ್ಸೆಯು ನಗದು ರಹಿತ ಚಿಕಿತ್ಸಾ ವ್ಯಾಪ್ತಿಗೆ ಬರುತ್ತದೆ. ಒಳರೋಗಿಯಾಗಿ ಚಿಕಿತ್ಸೆಗೆ ಒಳಪಡುವ ಸಂದರ್ಭಗಳಲ್ಲಿ ಆಡಳಿತ ವರ್ಗದ ನಿಯೋಜಿತ ಅಧಿಕಾರಿಯು ಪೂರ್ವ ಮಂಜೂರಾತಿಯನ್ನು 24 ಗಂಟೆಗಳ ಒಳಗಾಗಿ ವಿಳಂಬವಿಲ್ಲದೇ ನೀಡುವುದು. CGHS ದರಪಟ್ಟಿಯಲ್ಲಿ ಇಲ್ಲದಿರುವ ಇತರೇ ವಿಶೇಷ ಪ್ರಕರಣಗಳ ಚಿಕಿತ್ಸೆಗಳಿಗೆ ಪೂರ್ವಾನುಮತಿಯನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ.
ಇದಕ್ಕಾಗಿ ಅಧಿಕಾರ ಪ್ರತ್ಯಾಯೋಜನೆ ನೀಡಿದೆ. ವ್ಯವಸ್ಥಾಪಕ ನಿರ್ದೇಶಕರು ರೂ. 5 ಲಕ್ಷಗಳ ಮೇಲ್ಪಟ್ಟು, ನಿರ್ದೇಶಕರು (ಸಿ&ಜಾ) ರೂ. 1 ಲಕ್ಷದಿಂದ 5 ಲಕ್ಷಗಳವರೆಗೆ ರೂ.1 ಲಕ್ಷದವರೆಗೆ, ಮುಖ್ಯ ಕಾರ್ಮಿಕ ಮತ್ತು ಕಲ್ಯಾಣಾಧಿಕಾರಿ ರೂ. 1 ಲಕ್ಷದವರೆಗೆ ಮೊತ್ತವನ್ನು ಮಂಜೂರು ಮಾಡಬಹುದು. ಒಳರೋಗಿ ಪ್ರಕರಣಗಳಲ್ಲಿ ನೋಂದಣಿ, ವೈದ್ಯರ/ ವಿಶೇಷ ತಜ್ಞ ವೈದ್ಯರ ಸಮಾಲೋಚನಾ ಶುಲ್ಕ, ವೈದ್ಯರ/ ವಿಶೇಷ ತಜ್ಞ ವೈದ್ಯರ ಚಿಕಿತ್ಸಾ ಶುಲ್ಕ, ರೋಗ ನಿರ್ಧಾರಕ ವಿಧಾನಗಳು, ಪರಿಕ್ಷೇಗಳು, ಅರ್ಹ ವಾರ್ಡ್ ಶುಲ್ಕ, ICU ಶುಲ್ಕ, ಚಿಕಿತ್ಸಾ ವಿಧಾನಗಳು, ಇಂಪ್ಲಾಂಟ್ಸ್, ಹೆರಿಗೆ ಮತ್ತು ಶಿಶು ಆರೈಕೆ ಹಾಗೂ ಔಷಧೋಪಚಾರಗಳನ್ನು ಒಳಗೊಂಡಿರುತ್ತದೆ. ಎಲ್ಲಾ ರೀತಿಯ ಅಳವಡಿಕೆ ಸಾಧನಗಳ ವೆಚ್ಚ (Implants Charges) CGHS ದರ ಪಟ್ಟಿಯಂತೆ ಪರಿಗಣಿಸಲಾಗುತ್ತದೆ. ವಾರ್ಡ್ ಶುಲ್ಕವನ್ನು ಅಧಿಕಾರಿ ಮತ್ತು ನೌಕರರ ದರ್ಜೆಯನ್ನು ಪರಿಗಣಿಸದೇ ಎಲ್ಲರಿಗೂ ಏಕ ರೀತಿಯಲ್ಲಿ ಅರೇ ಖಾಸಗಿ ವಾರ್ಡ್ (Semi Private Ward) ನಲ್ಲಿ ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ಒಳರೋಗಿ ಚಿಕಿತ್ಸೆಯು CGHS ಪ್ಯಾಕೇಜ್ ದರಗಳನ್ನು ಒಳಗೊಂಡಂತೆ ಸೀಮಿತವಾಗಿರುತ್ತದೆ. ಉಪಭೋಗ್ಯ ವಸ್ತುಗಳು, ಆಹಾರ, ಸೌಂಧರ್ಯವರ್ಧಕಗಳು, ಇತ್ಯಾದಿ ನಗದು ರಹಿತಾ ಚಿಕಿತ್ಸಾ ವ್ಯಾಪ್ತಿಗೆ ಒಳಪಡುವುದಿಲ್ಲ. ಆಸ್ಪತ್ರೆಯಿಂದ ಬಿಡುಗಡೆಗೊಂಡ ನಂತರದ ಮುಂದುವರೆದ Follow-up treatment ಅನ್ನು ಮುಂದಿನ 45 ದಿನಗಳ ವರೆಗೆ ಹೊರ ರೋಗಿಯಾಗಿ ಪಡೆಯಲು ಅವಕಾಶವಿರುತ್ತದೆ.
KSRTC ಆರೋಗ್ಯ ಯೋಜನೆ: 275 ಖಾಸಗಿ ಆಸ್ಪತ್ರೆಗಳ ಜೊತೆಗೆ ಒಡಂಬಡಿಕೆ; ಚಿಕಿತ್ಸೆ ವಿವರಗಳು
No Ads
Log in to write reviews