No Ads

ಇಂದು ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ ದಿವಂಗತ ಕೆ ಶಿವರಾಂ ಅವರ ಪತ್ನಿ

ಕರ್ನಾಟಕ 2024-04-08 12:01:00 166
post

ಇಂದುಕಾಂಗ್ರೆಸ್​ ಕೈ ಹಿಡಿಯಲಿದ್ದಾರೆ ದಿವಂಗತ ಕೆ ಶಿವರಾಂ ಅವರ ಪತ್ನಿ ಮಾಜಿ ಐಎಎಸ್​​ ಅಧಿಕಾರಿ ದಿವಂಗತ ಕೆ ಶಿವರಾಂ ಅವರ ಪತ್ನಿ ವಾಣಿ ಕೆ.ಶಿವರಾಂ ಇಂದು ಕಾಂಗ್ರೆಸ್ ಗೆ ಸೇರ್ಪಡೆಯಾಗಲಿದ್ದಾರೆ. ಸಂಜೆ 4 ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ಸೇರ್ಪಡೆಯಾಗಲಿದ್ದಾರೆ. ಇತ್ತೀಚೆಗೆ ಮಾಜಿ ಐಎಎಸ್ ಅಧಿಕಾರಿ ಶಿವರಾಂ ನಿಧನರಾದರು. ಅಸೌಖ್ಯದಿಂದ ಬಳಲುತ್ತಿದ್ದ ಅವರು ಕೊನೆಯುಸಿರೆಳೆದರು. ಇವರ ಅಗಲಿಕೆ ನಂತರ ಪತ್ನಿ ವಾಣಿ ಶಿವರಾಂ ರಾಜಕೀಯ ಪಕ್ಷ ಸೇರುವ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿದ್ದರು. ಜನಸೇವೆ ಮಾಡುವ ಬಗ್ಗೆ ಅಭಿಪ್ರಾಯ ತಿಳಿಸಿದ್ದರು. ಅದರಂತೆಯೇ ಇಂದು ವಾಣಿ ಕೆ.ಶಿವರಾಂ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್​ ಸೇರ್ಪಡೆಗೊಳ್ಳಲಿದ್ದಾರೆ. ಡಿಸಿಎಂ ಡಿ.ಕೆ ಶಿವಕುಮಾರ್ ಸಮ್ಮುಖದಲ್ಲಿ ವಾಣಿ ಶಿವರಾಂ ಕಾಂಗ್ರೆಸ್​ ಕೈ ಹಿಡಿಯಲಿದ್ದಾರೆ ದಿವಂಗತ ಶಿವರಾಂರವರು ಬಿಜೆಪಿ ಜೊತೆ ಗುರುತಿಸಿಕೊಂಡಿದ್ದರು. ಇದೀಗ ಶಿವರಾಂ ಪತ್ನಿ ವಾಣಿ ಶಿವರಾಂ ಕಾಂಗ್ರೆಸ್ ಪಕ್ಷ ಸೇರುವ ಮೂಲಕ ಜನ ಸೇವೆ ಮಾಡಲು ಮುಂದಾಗಿದ್ದಾರೆ.

No Ads
No Reviews
No Ads

Popular News

No Post Categories
Sidebar Banner
Sidebar Banner