ಗಂಗಾವತಿಯ ಸಾಣಾಪುರದಲ್ಲಿ ಇಸ್ರೇಲ್ ಮಹಿಳೆ ಹಾಗೂ ಹೋಮ್ ಸ್ಟೇ ಒಡತಿಯ ಮೇಲೆ ನಡೆದಿರುವ ಹೀನ ಕೃತ್ಯ, ಲೈಂಗಿಕ ದೌರ್ಜನ್ಯ ಪ್ರಕರಣ ದೇಶಾದ್ಯಂತ ಸುದ್ದಿಯಾಗಿದೆ. ತಕ್ಷಣವೇ ಎಚ್ಚೆತ್ತುಕೊಂಡ ಕೊಪ್ಪಳ ಪೊಲೀಸರು ಈ ಕೇಸ್‌ಗೆ ಸಂಬಂಧಪಟ್ಟ ಮೂವರು ಆರೋಪಿಗಳನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ವಿದೇಶಿಗರ ಮೇಲೆ ಹಲ್ಲೆ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲಾ ಎಸ್ಪಿ ಡಾ. ರಾಮ್ ಎಲ್. ಅರಸಿದ್ದಿ ಅವರು ಸುದ್ದಿಗೋಷ್ಟಿ ನಡೆಸಿ ಇಂಚಿಂಚು ಮಾಹಿತಿ ನೀಡಿದ್ದಾರೆ.
ಮಹಿಳೆಯರ ಮೇಲೆ ದುಷ್ಕೃತ್ಯ ಎಸಗಿದ ಮೂವರು ಆರೋಪಿಗಳು ಹಗಲಿನ ವೇಳೆ ಗಾರೆ ಕೆಲಸ ಮಾಡಿ ರಾತ್ರಿಯಾದ್ರೆ ಕಳ್ಳತನ ಮಾಡುತ್ತಿದ್ದರು. ಸಣ್ಣ, ಪುಟ್ಟ ಕಳ್ಳತನ, ಜನರ ಮೇಲೆ ದೌರ್ಜನ್ಯ ಮಾಡುತ್ತಿದ್ದ ಆರೋಪಿಗಳು ಕೋಳಿ, ಬೈಕ್, ಕಿರಾಣಿ ಅಂಗಡಿ ಕಳ್ಳತನದಲ್ಲಿ ಆರೋಪದಲ್ಲಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು.
ಮಲ್ಲೇಶ್ ಅಲಿಯಾಸ್ ಹಂದಿ ಮಲ್ಲು, ಸಾಯಿಚೇತನ್, ಶರಣಬಸವ ಆರೋಪಿಗಳು ಈಗಾಗಲೇ ತಮ್ಮ ಮೇಲಿನ ಆರೋಪವನ್ನು ಒಪ್ಪಿಕೊಂಡಿದ್ದಾರೆ. ಅತ್ಯಾಚಾರಕ್ಕೆ ಒಳಗಾದ ಮಹಿಳೆಯರು ದೂರು ನೀಡಿದ್ದು, ಅದರ ಬಗ್ಗೆ ತನಿಖೆ ಮುಂದುವರೆದಿದೆ. ಮೊದಲು ಈ ಕೇಸ್ ಬಗ್ಗೆ ಗಂಭೀರ ಪರಿಗಣಿಸಿದ್ದ್ದು, ಗಂಗಾವತಿ ಅಕ್ರಮ ರೆಸಾರ್ಟ್‌ಗಳ ಕುರಿತು ಪರಿಶೀಲನೆ ಮಾಡಲಾಗುವುದು ಎಂದು ಎಸ್‌ಪಿ ತಿಳಿಸಿದ್ದಾರೆ.
ಒರಿಸ್ಸಾ, ಮಹಾರಾಷ್ಟ್ರದ ಇಬ್ಬರು.. ಇಸ್ರೇಲ್ನ ಮಹಿಳೆ.. ಅಮೆರಿಕಾ ಪುರುಷ ಹಾಗೂ ಹೋಮ್ ಸ್ಟೇ ಮಾಲಕಿ ತುಂಗಾಭದ್ರ ದಂಡೆ ಮೇಲಿದ್ರು. ಇಲ್ಲಿಗೆ ಕುಡಿದುಕೊಂಡೇ ಬೈಕ್ ಮೇಲೆ ಬಂದಿದ್ದ ಮೂವರು ಆರಂಭದಲ್ಲಿ ಪೆಟ್ರೋಲ್ ಬಂಕ್ ಎಲ್ಲಿದೆ ಅಂತ ಅಡ್ರೆಸ್ ಕೇಳಿದ್ರು. ಆ ಬಳಿಕ ಪೆಟ್ರೋಲ್ ಹಾಕಿಸೋದಕ್ಕೆ ಹಣವಿಲ್ಲ. ₹100 ಕೊಡಿ ಅಂತ ಕೇಳಿದ್ರಂತೆ. ಹೋಮ್ ಸ್ಟೇನಲ್ಲಿ ಹಣವಿದೆ. ಸದ್ಯ, ನಮ್ಮ ಬಳಿ ಕೇವಲ ₹20 ಮಾತ್ರವಿದೆ ಅಂತ ಒರಿಸ್ಸಾ ಮೂಲದ ವ್ಯಕ್ತಿ ನೀಡಲು ಹೋಗಿದ್ದ. ಇದೇ ಕಾರಣಕ್ಕೇ ನೀವು ₹100 ಕೊಡೋದಿಲ್ಲವೇ? ಅಂತ ಜಗಳ ಮಾಡಿದ್ದಾರೆ. ಈ ಸಂದರ್ಭ ಅಲ್ಲಿದ್ದ ಗಂಡಸರಿಗೂ ಈ ಮೂವರಿಗೂ ಮಧ್ಯೆ ಜಗಳ ನಡೆದಿದೆ ಅಂತ ಪೊಲೀಸರು ಹೇಳುತ್ತಿದ್ದಾರೆ. ಬೈಕ್ ಮೇಲೆ ಬಂದಿದ್ದ ಮೂವರು ನೀಚರು ಬಳಿಕ ಅಲ್ಲಿದ್ದ ಪುರುಷರನ್ನು ಹೊಡೆದು ಅವರನ್ನು ನಾಲೆಗೆ ತಳ್ಳಿದ್ದಾರೆ. ಇಲ್ಲಿಂದೀಚೆಗೆ ಸಣಾಪುರದ ಇದೇ ತುಂಗಭದ್ರಾ ತೀರದಲ್ಲಿ ನಡೆದಿದ್ದು ಮಾತ್ರ ಘೋರ ಕೃತ್ಯ.
ವಿದೇಶಿ ಮಹಿಳೆ ಸೇರಿ ಇಬ್ಬರ ಮೇಲೆ ನಡೆದ ಹೀನ ಕೃತ್ಯಕ್ಕೂ ಮುನ್ನ ಆರೋಪಿಗಳು ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಕಳೆದ ಮಾರ್ಚ್ 6ಕ್ಕೆ ಬಸಾಪುರ ಹಂಪಿ ಕೆಫೆ ರೆಸಾರ್ಟ್‌ನಲ್ಲಿ ಪಾರ್ಟಿ ನಡೆದಿದ್ದು, ಕೃತ್ಯ ಎಸಗಿದ ಆರೋಪಿಗಳು ರೆಸಾರ್ಟ್‌ನಲ್ಲಿ ಭಾಗಿಯಾಗಿದ್ದರು. ಆರೋಪಿಗಳು ಆ ಪಾರ್ಟಿಯಲ್ಲಿ ಭಾಗಿಯಾಗಿದ್ದ ವಿಡಿಯೋ ಕೂಡ ಬಿಡುಗಡೆಯಾಗಿದೆ.
Log in to write reviews