No Ads

ಕಾಮಾಕ್ಷಿ ದೀಪ ಹಚ್ಚೊ ಮುನ್ನ ಈ ವಿಷಯ ಗೊತ್ತಿರಲಿ .

ಮನರಂಜನೆ 2024-11-13 13:59:00 33
post

ದೇವರ ಪೂಜೆಯಲ್ಲಿ ಹಚ್ಚಿಡುವ ದೀಪಗಳಲ್ಲೇ ಕಾಮಾಕ್ಷಿ ದೀಪವು ಪವಿತ್ರವಾದುದ್ದು ದೀಪದ ಮೇಲೆ ದೇವಿಯ ರೂಪವನ್ನು ಅಂದರೆ ಕಾಮಾಕ್ಷಿ ದೇವಿಯ ರೂಪವನ್ನು ಕೆತ್ತಲಾಗಿದೆ. ಈ ದೀಪವನ್ನು ಸಾವಿರಾರು ಹಿಂದೂ ಕುಟುಂಬಗಳು ತಮ್ಮ ಮನೆಯ ದೇವರ ಕೋಣೆಯಲ್ಲಿ ಹಚ್ಚಿಡುತ್ತಾರೆ ಕಾಮಾಕ್ಷಿ ದೀಪದ ಕುರಿತು ಒಂದಿಷ್ಟು ಮಾಹಿತಿ ಹೀಗಿದೆ..   ಕಾಮಾಕ್ಷಿ ದೀಪವನ್ನು ಗಜಲಕ್ಷ್ಮಿ ದೀಪವೆಂದೂ ಕರೆಯಲಾಗುತ್ತದೆ. ಯಾಕೆಂದರೆ ಈ ದೀಪದ ಮಧ್ಯಭಾಗದಲ್ಲಿ ದೇವಿಯು ಪದ್ಮಾಸನದಲ್ಲಿ ಕುಳಿತುಕೊಂಡಿದ್ದರೆ ಆಕೆಯ ಇಕ್ಕೆಲಗಳಲ್ಲಿ ಆನೆಗಳು ನಿಂತಿರುತ್ತದೆ.. ಕಾಮಾಕ್ಷಿ ದೀಪವನ್ನು ಅಂಗಡಿಯಿಂದ ತಂದಾಗ ಅಥವಾ ಯಾರಾದರೂ ಉಡುಗೊರೆಯಾಗಿ ನೀಡಿದಾಗ ಅದನ್ನು ಮನೆಯಲ್ಲೇ ಹುಣಸೇ ಹಣ್ಣುಗಳನ್ನು ಬಳಸಿ ಶುದ್ಧಗೊಳಿಸಿ   ಕಾಮಾಕ್ಷಿ ದೀಪವನ್ನು ಯಾವಾಗಲೂ ಖಾಲಿ ನೆಲದ ಮೇಲೆ ಇಡಬಾರದು. ಅದನ್ನು ಒಂದು ಮಣೆ, ಹಲಗೆ ಅಥವಾ ಹಿತ್ತಾಳೆ, ತಾಮ್ರ, ಬೆಳ್ಳಿ ತಟ್ಟೆಯ ಮೇಲೆ ಇಡಬೇಕು. ತಟ್ಟೆಯ ಮೇಲೆ ಅಥವಾ ತಟ್ಟೆಯನ್ನು ಇಡುವ ಸ್ಥಳದಲ್ಲಿ ಅಕ್ಕಿಹಿಟ್ಟಿನಿಂದ ಅಷ್ಟದಳ ರಂಗೋಲಿಯನ್ನು ಹಾಕಬೇಕು ನಂತರ ದೀಪವನ್ನಿಟ್ಟು ಅರಿಶಿನ ಕುಂಕುಮ , ಹೂವನ್ನಿಟ್ಟು ಪೂಜಿಸಬೇಕು. ಈ ದೀಪಕ್ಕೆ ಹಸುವಿನ ಶುದ್ಧತುಪ್ಪ, ಕೊಬ್ಬರಿ ಎಣ್ಣೆ, ಎಳ್ಳೆಣ್ಣೆಯನ್ನೂ ಬಳಸಬಹುದು. ಹೂವು, ಅರಿಶಿನ ಹಾಗೂ ಕುಂಕುಮವನ್ನಿಟ್ಟು ಅಲಂಕಾರ ಮಾಡಿದ ದೀಪವನ್ನು ದೇವರ ಪೂಜೆಯನ್ನು  ಆರಂಭಿಸುವ ಮುನ್ನ ಪೂಜಿಸಬೇಕು. ದೀಪವನ್ನುಬೆಳಗಿಸುವುದಕ್ಕಾಗಿ, ದೀಪಕ್ಕೆ 2 ಶುದ್ಧವಾದ ಹತ್ತಿಯ ಬತ್ತಿಯನ್ನಿಟ್ಟು ದೀಪ ಹಚ್ಚಬೇಕು. ಕಾಮಾಕ್ಷಿ ದೀಪವನ್ನು ಹಚ್ಚಿಡುವಾಗ ನೇರವಾಗಿ ಬೆಂಕಿಯ ಸಹಾಯವನ್ನು ಬಳಸಿಕೊಂಡೇ ಹಚ್ಚಬೇಕು. ಮೇಣದ ಬತ್ತಿಯಿಂದಾಗಲಿ, ನೇರವಾಗಿ ಬೆಂಕಿ ಕಡ್ಡಿಯಿಂದ ಅಥವಾ ದೀಪದಿಂದ ಇನ್ನೊಂದು ದೀಪವನ್ನು ಬೆಳಗುವುದಾಗಲಿ ಮಾಡಬಾರದು   ಹಾಗಾಗಿ, ತುಪ್ಪದಲ್ಲಿ ನೆನೆಸಿದ ಬತ್ತಿಗೆ ಬೆಂಕಿಯನ್ನು ಹಚ್ಚಿ ನಂತರ ಈ ದೀಪಕ್ಕೆ ಬೆಂಕಿಯನ್ನು ಹಚ್ಚಬೇಕು ಅಥವ ೊಒಣತುಳಸಿ ಕಡ್ಡಿಗಳಿಂದ ಹಚ್ಚಬಹುದು.   ಕಾಮಾಕ್ಷಿ ದೀಪವನ್ನು ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ಹಚ್ಚಿಡಬೇಕು ನೀವು ಹಚ್ಚಿದ ಕಾಮಾಕ್ಷಿ ದೀಪ ಎಷ್ಟು ಪ್ರಶಾಂತವಾಗಿ ಉರಿಯುತ್ತಿರುತ್ತದೆಯೋ ಆ ಮನೆಯ ವಾತಾವರಣ, ಸಂತೋಷ, ಸಮೃದ್ಧಿಯೂ ಪ್ರಶಾಂತವಾಗಿರುತ್ತದೆ. ಕಾಮಾಕ್ಷಿ ದೀಪವನ್ನು ಗೋಧೂಳಿ ಸಮಯದಲ್ಲಿ ಅಂದರೆ ಸೂರ್ಯಾಸ್ತದ ಸಮಯದಲ್ಲಿ ಹಚ್ಚಿಡಬೇಕು. ಈ ಸಮಯದಲ್ಲಿ ಲಕ್ಷ್ಮಿ ದೇವಿಯು ತನ್ನ ಸಂಚಾರವನ್ನು ಆರಂಭಿಸುತ್ತಾಳೆ. ಗೋಧೂಳಿ ಸಮಯದಲ್ಲಿ ಈ ದೀಪ ಹಚ್ಚಿಡುವುದರಿಂದ ಲಕ್ಷ್ಮಿ ದೇವಿಯ ಕೃಪಾ ಕಟಾಕ್ಷ ನಿಮ್ಮ ಮೇಲೆ ಉಳಿಯುತ್ತದೆ ಕಾಮಾಕ್ಷಿ ದೀಪದಲ್ಲಿ ಲಕ್ಷ್ಮಿದೇವಿಯ ಮುಖವು ಕಳೆಯಿಂದ ಕೂಡಿರಬೇಕು. ದೀಪ ಎಲ್ಲಿಯೂ ಮುಕ್ಕಾಗಿರಬಾರದು. ದೀಪದಲ್ಲಿ ಯಾವುದೇ ರೀತಿಯಾದ ಕೊಳೆಯು ಇರಬಾರದು. ನಿಮ್ಮ ಮನೆಗೆ ತಂದಿರುವ ದೀಪವನ್ನು ನೀವೇ ಬೆಳಗಬೇಕು ಅಥವಾ ನಿಮ್ಮ ಮನೆಯ ಕುಟುಂಬದ ಸದಸ್ಯರು ಬೆಳಗಬಹುದು. ಇದನ್ನು ಯಾರಿಗೂ ಅಂದರೆ ಹೊರಗಿನವರಿಗೆ ನೀಡಬಾರದು. ಒಂದು ವೇಳೆ ನೀವು ಈ ದೀಪ ಉಡುಗೊರೆಯಾಗಿ ನೀಡಬೇಕೆಂದುಕೊಂಡರೆ ಅದನ್ನು ಶಾಪ್‌ನಲ್ಲೇ ಪ್ಯಾಕ್‌ ಮಾಡಿಸಿಕೊಂಡು ನೀಡಿ. ಕಾಮಾಕ್ಷಿ ದೀಪವನ್ನು ಉಡುಗೊರೆಯಾಗಿ ಕೊಡುವುದು, ಅಥವಾ ಉಡುಗೊರೆಯಾಗಿ ಪಡೆದುಕೊಳ್ಳುವುದು ತುಂಬಾನೇ ಒಳ್ಳೆಯದು. ದೀಪದಲ್ಲಿ ಒಮ್ಮೆ ಬಳಸಿದ ಎಣ್ಣೆ ಅಥವಾ ಬತ್ತಿಯನ್ನು ಪದೇ ಪದೇ ಬಳಸಬಾರದು. ಒಮ್ಮೆ ಬಳಸಿದ ಬತ್ತಿಯನ್ನು ಮರದ ಬುಡಕ್ಕೆ, ನೀರಿನಲ್ಲಿ ಹಾಕಬೇಕು.

No Ads
No Reviews
No Ads

Popular News

No Post Categories
Sidebar Banner
Sidebar Banner