No Ads

ಒಂದು ರಾತ್ರಿ ನಡೆಯುವ ಘಟನೆ ಮ್ಯಾಕ್ಸ್ : ಆ್ಯಕ್ಷನ್ ಪ್ರಿಯರಿಗೆ ಮ್ಯಾಕ್ಸಿಮಮ್ ಮನೋರಂಜನೆ ಫಿಕ್ಸ್!

ಮನರಂಜನೆ 2024-12-25 11:55:15 319
post

‘ಮ್ಯಾಕ್ಸ್’ ಸಿನಿಮಾದಲ್ಲಿ ಕಳ್ಳ-ಪೊಲೀಸ್​ ಕಥೆ ಇದೆ. ಮ್ಯಾಕ್ಸ್ ಸಿನಿಮಾ ಕಥೆ ಡಿಫರೆಂಟ್ ಆಗಿದೆ. ಈ ಚಿತ್ರದಲ್ಲಿ ಕಳ್ಳರೇ ಪೊಲೀಸರನ್ನು ಹಿಡಿಯಲು ಬರುತ್ತಾರೆ! ಇಲ್ಲಿ ಕಿಚ್ಚ ಸುದೀಪ್ ಅವರು ಖಡಕ್ ಪೊಲೀಸ್ ಆಫೀಸರ್​ ಪಾತ್ರವನ್ನು ಮಾಡಿದ್ದಾರೆ. ಅವರ ಜೊತೆ ಉಗ್ರಂ ಮಂಜು, ಸುಕೃತಾ ವಾಗ್ಳೆ, ಸಂಯುಕ್ತಾ ಹೊರನಾಡು ಮುಂತಾದವರು ಕೂಡ ಪೊಲೀಸ್ ಪಾತ್ರವನ್ನು ನಿಭಾಯಿಸಿದ್ದಾರೆ. ಒಂದೇ ರಾತ್ರಿಯಲ್ಲಿ ನಡೆಯುವ ಕಥೆಯನ್ನು ಇಟ್ಟುಕೊಂಡು ನಿರ್ದೇಶಕ ವಿಜಯ್ ಕಾರ್ತಿಕೇಯ ಅವರು ‘ಮ್ಯಾಕ್ಸ್’ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ. ಮ್ಯಾಕ್ಸ್ ಕಥೆ ಸರಳವಾಗಿದೆ. ರಾಜಕಾರಣಿಗಳ ಮಕ್ಕಳು ಪೊಲೀಸರ ಮೇಲೆ ಕೈ ಮಾಡುತ್ತಾರೆ. ಅಂಥವರಿಗೆ ಬುದ್ಧಿ ಕಲಿಸಲು ಮ್ಯಾಕ್ಸ್ ಅಲಿಯಾಸ್ ಅರ್ಜುನ್ ಮಹಾಕ್ಷಯ್ (ಸುದೀಪ್) ಬರುತ್ತಾನೆ. ಬಂಧನಕ್ಕೆ ಒಳಗಾದ ಬಳಿಕ ರಾಜಕಾರಣಿಗಳ ಮಕ್ಕಳು ಅನುಮಾನಾಸ್ಪದವಾಗಿ ಸಾಯುತ್ತಾರೆ. ಆಗ ಇಡೀ ಪೊಲೀಸ್ ಸ್ಟೇಷನ್​ಗೆ ಸಂಕಷ್ಟ ಶುರುವಾಗುತ್ತದೆ. ಸೇಡು ತೀರಿಸಿಕೊಳ್ಳಲು ವಿಲನ್​ಗಳ ದಂಡು ಬರುತ್ತದೆ. ಅವರಿಂದ ತಪ್ಪಿಸಿಕೊಂಡು, ತಮ್ಮವರನ್ನು ಕಾಪಾಡಿಕೊಳ್ಳಲು ಮ್ಯಾಕ್ಸ್ ಹೇಗೆಲ್ಲ ಕಷ್ಟಪಡುತ್ತಾನೆ ಎಂಬುದೇ ಈ ಚಿತ್ರದ ಕಥಾ ಸಾರಾಂಶ. ಮೇಲ್ನೋಟಕ್ಕೆ ನೋಡಲು ‘ಮ್ಯಾಕ್ಸ್’ ಕಥೆ ಸರಳವಾಗಿದೆ ಎನಿಸದರೂ ಅದನ್ನು ತೆರೆಗೆ ತರುವಲ್ಲಿ ನಿರ್ದೇಶಕರು ಸಾಕಷ್ಟು ಶ್ರಮಪಟ್ಟಿದ್ದಾರೆ. ಎಷ್ಟು ಸಾಧ್ಯವೋ ಅಷ್ಟು ಥ್ರಿಲ್ಲಿಂಗ್ ಗುಣವನ್ನು ಪ್ರತಿ ದೃಶ್ಯದಲ್ಲೂ ಬರೆಸಿದ್ದಾರೆ. ಒಂದಷ್ಟು ಟ್ವಿಸ್ಟ್​ಗಳ ಮೂಲಕ ಮನರಂಜನೆಯನ್ನು ಹೆಚ್ಚಿಸಿದ್ದಾರೆ. ಮುಂದೇನಾಗುತ್ತದೆ ಎಂಬ ಕೌತುಕವನ್ನು ಕೊನೇ ತನಕ ಕಾಪಾಡಿಕೊಂಡಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಪ್ರೇಕ್ಷಕರನ್ನು ‘ಮ್ಯಾಕ್ಸ್’ ಸಿನಿಮಾ ಆವರಿಸುತ್ತದೆ. ಇದು ಬರೀ ಹೊಡಿಬಡಿ ದೃಶ್ಯಗಳೇ ತುಂಬಿರುವ ಸಿನಿಮಾ ಅಲ್ಲ. ಆ್ಯಕ್ಷನ್​ ಸೀನ್​ಗಳ ಜೊತೆಗೆ ಬುದ್ಧಿಯ ಆಟ ಕೂಡ ಹೌದು. ಸುದೀಪ್​ ಅವರ ವೃತ್ತಿಜೀವನದಲ್ಲಿಒಂದು ಡಿಫರೆಂಟ್​ ಚಿತ್ರವಾಗಿ ‘ಮ್ಯಾಕ್ಸ್’ ಮೂಡಿಬಂದಿದೆ. ಆ್ಯಕ್ಷನ್ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ. ಮಾಸ್ ಕಮರ್ಷಿಯಲ್ ಸಿನಿಮಾ ಆದ್ದರಿಂದ ಎಲ್ಲ ಕಡೆಯಲ್ಲೂ ಲಾಜಿಕ್ ಹುಡುಕುವಂತಿಲ್ಲ. ಇನ್ನು, ಕಥೆ ಸಂಪೂರ್ಣ ಹೊಸದಾಗಿದೆ ಎನ್ನವಂತೆಯೂ ಇಲ್ಲ. ಇಂಥ ಕೆಲವು ಮೈನಸ್ ಅಂಶಗಳನ್ನು ಬದಿಗಿಟ್ಟರೆ ‘ಮ್ಯಾಕ್ಸ್’ ಇಷ್ಟ ಆಗುತ್ತದೆ.  

No Ads
No Reviews
No Ads

Popular News

No Post Categories
Sidebar Banner
Sidebar Banner