No Ads

ಚಾರಣ ದುರಂತ; ಈ ದಂಪತಿ ಹುಟ್ಟಿದ ದಿನವೂ ಒಂದೇ, ಮೃತಪಟ್ಟ ದಿನವೂ ಒಂದೇ!

India 2024-06-07 13:13:01 424
post

ಉತ್ತರಾಖಂಡದ ಸಹಸ್ರತಾಲ್ ಶಿಖರಕ್ಕೆ ಟ್ರಕ್ಕಿಂಗ್ ತೆರಳಿದ್ದ ರಾಜ್ಯದ 22 ಜನರಲ್ಲಿ 9 ಮಂದಿ ಮೃತಪಟ್ಟಿದ್ದು, ಇದರಲ್ಲಿ ಹುಬ್ಬಳ್ಳಿಯ ದಂಪತಿಯೂ ಸೇರಿದ್ದಾರೆ. ಹುಬ್ಬಳ್ಳಿಯ ವಿನಾಯಕ ಮುಂಗರವಾಡಿ ಹಾಗೂ ಸುಜಾತಾ ಮುಂಗರವಾಡಿ ಮೃತ ದುರ್ದೈವಿಗಳು. ವಿಶೇಷವೆಂದರೆ, ವಿನಾಯಕ ಜನ್ಮ ದಿನಾಂಕ 03-10-1969 ಆದರೆ, ಸುಜಾತಾ ಮುಂಗರವಾಡಿ ಜನ್ಮ ದಿನಾಂಕ 03-10-1972 ಆಗಿದೆ. ಇಬ್ಬರೂ ಒಂದೇ ದಿನ ಮೃತಪಟ್ಟಿದ್ದು ಕಾಕತಾಳೀಯ. ಚಾರಣಕ್ಕೆ ಹೋದ 22 ಮಂದಿಯ ಪೈಕಿ ಹುಬ್ಬಳ್ಳಿಯಲ್ಲಿ ವಾಸವಿದ್ದ ದಂಪತಿ ಜೂನ್ ನಾಲ್ಕರಂದು ಮೃತಪಟ್ಟಿದ್ದಾರೆ. ಮೃತ ದಂಪತಿ ಹುಬ್ಬಳ್ಳಿಯ ಬಿವಿಬಿ ಕಾಲೇಜ್‌ನಲ್ಲಿ 1994ರಲ್ಲಿ ಇಂಜಿನೀಯರಿಂಗ್ ಪದವಿ ಪಡೆದಿದ್ದರು‌. ಇಬ್ಬರೂ 1996 ರಲ್ಲಿ ಉದ್ಯೋಗ ಅರಿಸಿಕೊಂಡು ಬೆಂಗಳೂರಿಗೆ ಹೋಗಿದ್ದರು. ಈ ಬಾರಿ ಮಕ್ಕಳನ್ನು ಕೂಡ ಚಾರಣಕ್ಕೆ ಕರೆದೊಯ್ಯಲು ದಂಪತಿ ಯೋಜನೆ ಹಾಕಿಕೊಂಡಿದ್ದರು. ಆದರೆ, ಅವರಿಗೆ ಕೇವಲ 2 ಟಿಕೆಟ್ ಮಾತ್ರ ದೊರೆತಿತ್ತು. ಹೀಗಾಗಿ ದಂಪತಿ ಮಾತ್ರ ಚಾರಣಕ್ಕೆ ಹೋಗಿದ್ದರು. ಚಾರಣದ ವೇಳೆ ಸಾವಿಗೀಡಾದವರ ಪಾರ್ಥಿವ ಶರೀರವನ್ನು ತವರಿಗೆ ತರುವ ಪ್ರಕ್ರಿಯೆ ಮುಂದುವರಿದಿದೆ. ಸದ್ಯ, ಪತ್ತೆಯಾಗಿರುವ 9 ಮೃತದೇಹಗಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಈಗಾಗಲೇ ದೆಹಲಿಯಿಂದ ಎರಡು ಪ್ರತ್ಯೇಕ ಇಂಡಿಗೋ ವಿಮಾನಗಳಲ್ಲಿ 4 ಮೃತದೇಹಗಳನ್ನು ಬೆಂಗಳೂರಿಗೆ ತರಲಾಗಿದೆ.

No Ads
No Reviews
No Ads

Popular News

No Post Categories
Sidebar Banner
Sidebar Banner