ಸನಾತನ ಭಾರತಿ ನಿರ್ದೇಶನದಲ್ಲಿ ‘ಗುಣ’ ಸಿನಿಮಾ ಮೂಡಿ ಬಂದಿತ್ತು. ಈ ಚಿತ್ರದಲ್ಲಿ ಕಮಲ್ ಹಾಸನ್, ರೇಖಾ ನಟಿಸಿದ್ದರು. ಈ ಚಿತ್ರಕ್ಕೆ ಇಳಯರಾಜ ಅವರು ಸಂಗೀತ ಸಂಯೋಜನೆ ಮಾಡಿದ್ದರು. ಈ ಸಿನಿಮಾದ ಹಾಡುಗಳು ಸಾಕಷ್ಟು ಗಮನ ಸೆಳೆದಿದ್ದವು. ಈ ಸಿನಿಮಾ 1991ರ ನವೆಂಬರ್ 5ರಂದು ರಿಲೀಸ್ ಆಗಿತ್ತು. ತಮಿಳು ಭಾಷೆಯ ಈ ಸಿನಿಮಾ ಶೂಟ್ ಆಗಿದ್ದು ಕೊಡೈಕೆನಲ್ನ ‘ಗುಣ’ ಗುಹೆಯಲ್ಲಿ. ಈ ಚಿತ್ರ ಶೂಟ್ ಆದ ಕಾರಣದಿಂದಲೇ ಇದಕ್ಕೆ ಗುಣ ಕೇವ್ ಎನ್ನುವ ಹೆಸರು ಬಂತು. ಈ ಚಿತ್ರದ ‘ಕಣ್ಮಣಿ ಅನ್ಬೋದು ಕಾದಲನ್..’ ಹಾಡು ಸಾಕಷ್ಟು ಗಮನ ಸೆಳೆದಿತ್ತು. ಇತ್ತೀಚೆಗೆ ಸೋಶಿಯಲ್ ಮೀಡಿಯಾ ಬಳಕೆ ಹೆಚ್ಚುತ್ತಿದೆ. ಯಾವ ಹಾಡು ಯಾವಾಗ ವೈರಲ್ ಆಗುತ್ತದೆ ಎಂದು ಊಹಿಸೋದು ಕಷ್ಟ. ಇತ್ತೀಚೆಗ ಕನ್ನಡದ ‘ಕರಿಮಣಿ..’ (Karimani Song) ಹಾಡು ವೈರಲ್ ಸಾಕಷ್ಟು ಸದ್ದು ಮಾಡಿತ್ತು. ಈಗ ‘‘ಕಣ್ಮಣಿ..’ ಹಾಡಿನ ಸರದಿ. 1991ರಲ್ಲಿ ರಿಲೀಸ್ ಆದ ಕಮಲ್ ಹಾಸನ್ ನಟನೆಯ ‘ಗುಣ’ ಚಿತ್ರದ ‘ಕಣ್ಮಣಿ ಅನ್ಬೋದು ಕಾದಲನ್’ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗುತ್ತಿದೆ. ಇದಕ್ಕೆ ಕಾರಣ ಆಗಿರೋದು ಮಲಯಾಳಂನ ‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾ. ‘ಮಂಜುಮ್ಮೇಲ್ ಬಾಯ್ಸ್’ ಸಿನಿಮಾದ ಬಜೆಟ್ ಐದು ಕೋಟಿ ರೂಪಾಯಿ ಕೂಡ ಮೀರಿಲ್ಲ ಎನ್ನಲಾಗಿದೆ. ಆದರೆ, ಚಿತ್ರದ ಗಳಿಕೆ ವಿಶ್ವಾದ್ಯಂತ 180 ಕೋಟಿ ರೂಪಾಯಿ ದಾಟಿದೆ! ಕಷ್ಟುಪಟ್ಟು ಮಾಡಿರೋ ಸಿನಿಮಾಗೆ ದೊಡ್ಡ ಬೇಡಿಕೆ ಸೃಷ್ಟಿ ಆಗಿದೆ. ಇದರಿಂದ ನಿರ್ಮಾಪಕರ ಮೊಗದಲ್ಲಿ ನಗು ಮೂಡಿದೆ. ಸಿಂಪಲ್ ಆಗಿ ಸಿನಿಮಾ ಮಾಡಿಯೂ ಗೆಲ್ಲಬಹುದು ಎಂಬುದನ್ನು ನಿರ್ಮಾಪಕರು ತೋರಿಸಿಕೊಟ್ಟಿದ್ದಾರೆ. ಈ ಚಿತ್ರ ಕೇರಳ ಮಾತ್ರವಲ್ಲದೆ ಕರ್ನಾಟಕ ಹಾಗೂ ತಮಿಳುನಾಡಿನಲ್ಲೂ ಒಳ್ಳೆಯ ಕಲೆಕ್ಷನ್ ಮಾಡಿ ಮುನ್ನುಗ್ಗುತ್ತಿದೆ.
‘ಕರಿಮಣಿ..’ ಆಯ್ತು ಈಗ ‘ಕಣ್ಮಣಿ
No Ads
Log in to write reviews