ನಿನ್ನೆ ವಿಕ್ಟೋರಿಯಾ ಆಸ್ಪತ್ರೆಗೆ 47 ವೈದ್ಯಕೀಯ ವಿದ್ಯಾರ್ಥಿಗಳು ದಾಖಲಾಗಿದ್ದರು. ಅದರಲ್ಲಿ 26 ವರ್ಷದ ಸಂಶೋಧನ ವಿದ್ಯಾರ್ಥಿನಿಗೆ ಬ್ಲಡ್ ಟೆಸ್ಟ್ ನಲ್ಲಿ ಕಾಲರಾ ಇರೋದು ದೃಢವಾಗಿದೆ. ಸದ್ಯ ಬ್ಲಡ್ ಟೆಸ್ಟ್ ವರದಿ ಬಂದಿದ್ದು, ಕಲ್ಚರ್ ರಿಪೋರ್ಟ್ ಗೆ ವೈದ್ಯರು ಕಾಯ್ತಿದ್ದಾರೆ. ಇನ್ನು ಎರಡ್ಮೂರು ದಿನದಲ್ಲಿ ಕಲ್ಚರ್ ರಿಪೋರ್ಟ್ ಬರುವ ಸಾಧ್ಯತೆ ಇದೆ. ಬೆಂಗಳೂರು ವೈದ್ಯಕೀಯ ಕಾಲೇಜು ಡೀನ್ ಡಾ.ರಮೇಶ್ ಕೃಷ್ಣ ಈ ಕುರಿತು ಮಾತನಾಡಿದ್ದು, ನಿನ್ನೆ 47 ವೈದ್ಯಕೀಯ ವಿದ್ಯಾರ್ಥಿಗಳು ಅಡ್ಮಿಟ್ ಆಗಿದ್ದಾರೆ. ಎಲ್ಲಾ ವಿದ್ಯಾರ್ಥಿಗಳ ಆರೋಗ್ಯ ಸ್ಥಿರವಾಗಿದೆ. ಸ್ಕ್ರೀನಿಂಗ್ ಟೆಸ್ಟ್ ನಲ್ಲಿ ಒಬ್ಬ ವಿದ್ಯಾರ್ಥಿಯ ಟೆಸ್ಟ್ ರಿಪೋರ್ಟ್ ಪಾಸಿಟಿವ್ ಬಂದಿದೆ. ಐಸಿಯುನಲ್ಲಿ ಇಬ್ಬರು ಪೇಷೆಂಟ್ ಇದ್ದಾರೆ. ಬಿಬಿಎಂಪಿಗೆ ಈ ಬಗ್ಗೆ ಮಾಹಿತಿ ಕೊಡಲಾಗಿದೆ.ಕಲ್ಚರ್ ರಿಪೋರ್ಟ್ ಬರಲು ಇನ್ನೂ 3 ದಿನ ಬೇಕು ಎಂದಿದ್ದಾರೆ. ವಿದ್ಯಾರ್ಥಿನಿಯರಿಗೆ ಚಿಕಿತ್ಸೆ ನೀಡ್ತಿರುವ ವೈದ್ಯ ಡಾ ಪ್ರಶಾಂತ್ ಮಾತನಾಡಿ, ಇಬ್ಬರಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಒಬ್ಬರಿಗೆ ಕಿಡ್ನಿ ಪ್ರಾಬ್ಲಂ ಆಗಿತ್ತು, ನೆಫ್ರಾಲಜಿಸ್ಟ್ ಅಭಿಪ್ರಾಯದಂತೆ ಆಂಟಿಬಯೋಟಿಕ್ ಶುರು ಮಾಡಲಾಗಿದೆ. ಇನ್ನೊಬ್ಬ ವಿದ್ಯಾರ್ಥಿನಿ ಶಾಕ್ನಲ್ಲಿ ಬಂದಿದ್ರು, ಹೀಗಾಗಿ ಬಿಪಿ ಜಾಸ್ತಿಯಾಗಿತ್ತು. ಇವತ್ತು ಎಲ್ಲರೂ ರಿಕವರಿ ಆಗ್ತಿದ್ದಾರೆ. ಇವತ್ತು ಐಸಿಯುನಿಂದ ವಾರ್ಡ್ ಗೆ ಶಿಫ್ಟ್ ಮಾಡಲಾಗುತ್ತೆ. ಹ್ಯಾಂಗಿಂಗ್ ರಿಪೋರ್ಟ್ ನೆಗೆಟಿವ್ ಬಂದಿದೆ, ಕಲ್ಚರ್ ರಿಪೋರ್ಟ್ ಮೂರ್ನಾಲ್ಕು ದಿನದಲ್ಲಿ ಬರಲಿದೆ. 47 ವಿದ್ಯಾರ್ಥಿನಿಯರಿಗೆ ಭೇದಿ ಮಾತ್ರ ಇತ್ತು, ವಾಂತಿ ಇರಲಿಲ್ಲ. ಹೀಗಾಗಿ ಇದು ಕಾಲರಾ ಅನ್ನಕ್ಕಾಗಲ್ಲ. ತಾಪಮಾನದಿಂದ ಫುಡ್ ಪಾಯಿಸನ್ ಆಗಿರಬಹುದು. ಫುಡ್ ಪಾಯಿಸನ್ ಸಂಬಂಧಿಸಿದಂತೆ ಚಿಕಿತ್ಸೆ ನೀಡಲಾಗ್ತಿದೆ. ಸ್ಟೂಲ್ ರಿಪೋರ್ಟ್ ನಲ್ಲಿ ಕಾಲರಾ ಪಾಸಿಟಿವ್ ಬಂದಿರುವ ವಿದ್ಯಾರ್ಥಿನಿ ಸ್ಟೇಬಲ್ ಆಗಿದ್ದಾರೆ. ಕಲ್ಚರ್ ರಿಪೋರ್ಟ್ ಗಾಗಿ ಕಾಯ್ತಿದ್ದೇವೆ ಎಂದು ಹೇಳಿದ್ದಾರೆ.
49 ವೈದ್ಯಕೀಯ ವಿದ್ಯಾರ್ಥಿನಿಯರು ಅಸ್ವಸ್ಥ, ಕಾಲರ ದೃಢ
No Ads
Log in to write reviews