No Ads

ಜಸ್ಟ್ ಸೆಕೆಂಡ್ಸ್, ಭಾರತದ ಷೇರು ಮಾರುಕಟ್ಟೆಗೆ 20 ಲಕ್ಷ ಕೋಟಿ ನಷ್ಟ..!

ವಿದೇಶ 2025-04-07 13:08:25 84
post

ಡೊನಾಲ್ಡ್​ ಟ್ರಂಪ್​ ಅವರ ‘ಹೊಸ ತೆರಿಗೆ ನೀತಿ’ಯಿಂದಾಗಿ ವಿಶ್ವದ ಷೇರು ಮಾರುಕಟ್ಟೆಗಳಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಭಾರತೀಯ ಸ್ಟಾಕ್ ಮಾರ್ಕೆಟ್ ಸೇರಿದಂತೆ ವಿಶ್ವದ ದೈತ್ಯ ಮಾರುಕಟ್ಟೆಗಳು ಅಲುಗಾಡಿವೆ.

ಬೆಳಗ್ಗೆ ಭಾರತೀಯ ಷೇರುಪೇಟೆಯಲ್ಲಿ ಸೆನ್ಸೆಕ್ಸ್​ 3000 ಪಾಯಿಂಟ್ಸ್​​ಗಿಂತಲೂ ಕಡಿಮೆ ಕುಸಿತಕಂಡಿದೆ. ನಿಫ್ಟಿ ಸೂಚ್ಯಂಕ 750 ಪಾಯಿಂಟ್ಸ್​ ಕುಸಿದಿದೆ. ಟ್ರಂಪ್​ ಅವರ ಹೊಸ ಆಮದು ನೀತಿಯಿಂದಾಗಿ ಹೂಡಿಕೆದಾರರಿಗೆ ಆತಂಕ ಶುರುವಾಗಿದ್ದು, ಕಂಪನಿಗಳು ತಮ್ಮೆಲ್ಲ ಷೇರುಗಳನ್ನು ಮಾರಾಟ ಮಾಡಲು ಮುಂದಾಗಿವೆ.

ಕಳೆದ ವಾರ ಜಾಗತಿಕವಾಗಿ 5 ಟ್ರಿಲಿಯನ್ ಡಾಲರ್ ಕುಸಿತವಾಗಿತ್ತು. ಭಾರತದ ಷೇರುಪೇಟೆಯಲ್ಲಿ 10 ಸೆಕೆಂಡ್​ನಲ್ಲಿ 20 ಲಕ್ಷ ಕೋಟಿ ರೂಪಾಯಿ ನಷ್ಟವಾಗಿದೆ ಎಂದು ವರದಿಯಾಗಿದೆ. ಭಾರತದ ಷೇರು ಮಾರುಕಟ್ಟೆ ಒಟ್ಟಾರೆ ಮೌಲ್ಯ 403 ಲಕ್ಷ ಕೋಟಿಯಿಂದ 384 ಲಕ್ಷ ಕೋಟಿ ರೂಪಾಯಿಗೆ ಕುಸಿತವಾಗಿದೆ.

ಜಾಗತಿಕ ಷೇರು ಮಾರಾಟ ಭರಾಟೆ: ಏಷ್ಯಾ, ಯೂರೋಪ್, ಅಮೆರಿಕಾ ಷೇರು ಮಾರುಕಟ್ಟೆಯಲ್ಲಿ ಷೇರು ಮಾರಾಟವಾಗಿದೆ. ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಷೇರು ಮಾರಾಟ ಹೆಚ್ಚಾಗಿರೋದ್ರಿಂದ ಸಹಜವಾಗಿಯೇ ಭಾರತದ ಷೇರುಪೇಟೆ ಏರುಪೇರು ಆಗಿದೆ. ಇದನ್ನು ಟ್ರಂಪ್ ‘ಆಮದು ಸುಂಕ ಮೆಡಿಸಿನ್’ ಎಂದು ಬಣ್ಣಿಸಿದ್ದಾರೆ.

ಆಮದು ಸುಂಕದ ಇಂಪ್ಯಾಕ್ಟ್ ಇನ್ನೂ ಖಚಿತವಾಗಿಲ್ಲ: ಟ್ರಂಪ್ ಅವರ ಆಮದು ಸುಂಕಕ್ಕೆ ಸಂಬಂಧಿಸಿದಂತೆ ದೇಶದಲ್ಲಿ ಇನ್ನೂ ಗೊಂದಲ ಇದೆ. ದುಬಾರಿ ತೆರಿಗೆ ವಿಧಿಸಲು ಟ್ರಂಪ್ ನಿರ್ಧಾರ ಮಾಡಿದ್ದಾರೆ. ಇದನ್ನು ವಿಶ್ವದ ಬಹುತೇಕ ರಾಷ್ಟ್ರಗಳು ವಿರೋಧಿಸಿವೆ. ಈ ಸಂಬಂಧ ಆಯಾ ದೇಶದ ನಾಯಕರು ಅಮೆರಿಕ ಜೊತೆ ಮಾತುಕತೆ ನಡೆಸಿದ್ದರೂ, ಒಂದು ಧನಾತ್ಮಕ ನಿಲುವಿಗೆ ಬಂದಿಲ್ಲ. ಮಾತುಕತೆಯಿಂದ ಪಾಸಿಟಿವ್ ತೀರ್ಮಾನ ಬರದ ಕಾರಣ ಷೇರುಗಳ ಮಾರಾಟ ಹೆಚ್ಚಾಗಿದೆ.

ಆರ್ಥಿಕ ಬೆಳವಣಿಗೆ ಕುಸಿಯುವ ಭೀತಿ: ದುಬಾರಿ ಸುಂಕ ನೀತಿಯಿಂದಾಗಿ ಹಣದುಬ್ಬರ, ಆರ್ಥಿಕ ಬೆಳವಣಿಗೆ ಕುಸಿಯುವ ಭೀತಿಯಾಗಿದೆ. ಹೀಗಾಗಿ ಷೇರು ಮಾರುಕಟ್ಟೆಗಳು ಅಲುಗಾಡಲು ಶುರುವಾಗಿವೆ.

ವಿದೇಶಿ ಹೂಡಿಕೆದಾರರಿಂದ ಬಂಡವಾಳ ಹಿಂತೆಗೆತ: ಏಪ್ರಿಲ್ ತಿಂಗಳಲ್ಲಿ 13,750 ಕೋಟಿ ರೂಪಾಯಿ ಎಫ್‌ಪಿಐ ಹಿಂತೆಗೆದುಕೊಳ್ಳಲಾಗಿದೆ. ಜಾಗತಿಕ ಆರ್ಥಿಕತೆಯ ಅನಿಶ್ಚಿತತೆಯಿಂದ ವಿದೇಶಿ ಸಾಂಸ್ಥಿಕ ಹೂಡಿಕೆದಾರರಿಂದ ಬಂಡವಾಳ ಹೂಡಲು ಹಿಂದೇಟು ಹಾಕಿದ್ದಾರೆ.
ಆರ್‌ಬಿಐ ಎಂಪಿಸಿ, ನಾಲ್ಕನೇ ತ್ರೈಮಾಸಿಕದ ಆದಾಯದ ಬಗ್ಗೆ ಗಮನ: ಈ ವಾರ ಆರ್‌ಬಿಐ ದ್ವೈಮಾಸಿಕ ಹಣಕಾಸು ಸಮಿತಿ ಸಭೆ ನಿಗದಿಯಾಗಿದೆ. ಈ ವಾರ ರೆಪೋ ದರ ಕಡಿತ ಮಾಡುವ ನಿರೀಕ್ಷೆ ಇದೆ. ಇದರಿಂದ ಬ್ಯಾಂಕ್ ಸಾಲದ ಬಡ್ಡಿದರಗಳು ಕಡಿಮೆಯಾಗುವ ನಿರೀಕ್ಷೆ ಇದೆ. ಇದರಿಂದಲೂ ಭಾರತದ ಷೇರುಪೇಟೆಯಲ್ಲಿ ಷೇರು ಬೆಲೆ ಕುಸಿತವಾಗಿದೆ.

 

No Ads
No Reviews
No Ads

Popular News

No Post Categories
Sidebar Banner
Sidebar Banner