No Ads

ಬೊಕ್ಕ ತಲೆಯ ಬಗ್ಗೆ ತಮಾಷೆ ಮಾಡುವುದು ಕೂಡ ಲೈಂಗಿಕ ಕಿರುಕುಳ

ವಿದೇಶ 2024-10-14 13:07:08 89
post

ಬೋಳು ತಲೆಯವರಿಗೆ ಅವರ ಫ್ರೆಂಡ್ಸ್‌, ಸಹದ್ಯೋಗಿಗಳು ಮೊಟ್ಟೆ, ಬಾಲ್ಡ್‌ ಅಂತೆಲ್ಲಾ ಹೇಳಿ ರೇಗಿಸುತ್ತಿರುತ್ತಾರೆ.  ಈ ಮಾತುಗಳು ಅವರನ್ನು ತೀರಾ ಮುಜುಗರಕ್ಕೆ ಉಂಟು ಮಾಡುತ್ತವೆ. ಕೆಲವೊಂದು ಬಾರಿ ಈ ತಮಾಷೆಯ ಮಾತುಗಳು ಅವರ ಮನಸ್ಸಿಗೂ ನೋವುಂಟು ಮಾಡುತ್ತವೆ. ಇಲ್ಲೊಬ್ಬ ಬಾಸ್‌ ಕೂಡಾ ತನ್ನ ಉದ್ಯೋಗಿಯ ಬೋಳು ತಲೆಯ ಬಗ್ಗೆ ತಮಾಷೆ ಮಾಡಿದ್ದು, ಇದರಿಂದ ಬೇಸರಗೊಂಡ ಉದ್ಯೋಗಿ ಸೀದಾ ಕೋರ್ಟ್‌ ಮೆಟ್ಟಿಲೇರಿದ್ದಾರೆ ಸತತ ಹೋರಾಟದ ಬಳಿಕ ಕೋರ್ಟ್‌ ಉದ್ಯೋಗಿಯ ಪರ ತೀರ್ಪನ್ನು ನೀಡಿದ್ದು, ಬೋಳು ತಲೆಯ ಬಗ್ಗೆ ತಮಾಷೆ ಮಾಡುವುದು ಕೂಡಾ ಒಂದು ರೀತಿಯ ಲೈಂಗಿಕ ಕಿರುಕುಳ. ಹೀಗೆ ಯಾವತ್ತೂ ಬೋಳು ತಲೆಯ ಬಗ್ಗೆ ತಮಾಷೆ ಮಾಡಕೂಡದೂ ಎಂದು ಬಾಸ್‌ಗೆ ನ್ಯಾಯಾಲಯ ಕ್ಲಾಸ್‌ ತೆಗೆದುಕೊಂಡಿದೆ. ಬ್ರಿಟನ್‌ನಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಹೈ ಕೋರ್ಟ್‌ ಬೋಳು ತಲೆಯ ಬಗ್ಗೆ ತಮಾಷೆ ಮಾಡುವುದು ಕೂಡಾ ಒಂದು ರೀತಿಯ ಲೈಂಗಿಕ ಕಿರುಕುಳ ನೀಡಿದಂತೆ ಎಂಬ ತೀರ್ಪನ್ನು ನೀಡಿದೆ. ಬ್ರಿಟನ್‌ನಲ್ಲಿ ಎಲೆಕ್ಟ್ರಿಷಿಯನ್‌ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರಿಗೆ ಬೋಳು ತಲೆಗೆ ಅವರ ಬಾಸ್‌ ತಮಾಷೆ ಮಾಡಿದ್ದು ಮಾತ್ರವಲ್ಲದೆ ಅವರನ್ನು ಕೆಲಸದಿಂದ ವಜಾಗೊಳಿಸಿದ್ದರು. ಇದರಿಂದ ಬೇಸರಗೊಂಡ ಆ ವ್ಯಕ್ತಿ 2021 ರಲ್ಲಿ ಈ ಬಗ್ಗೆ ಪ್ರಕರಣವನ್ನು ದಾಖಲಿಸಿ ನ್ಯಾಯಾಲಯದ ಮೆಟ್ಟಿಲೇರಿದ್ದರು. ಇದೀಗ ನ್ಯಾಯಾಲಯ ಆ ವ್ಯಕ್ತಿಯ ತೀರ್ಪನ್ನು ನೀಡಿದ್ದು, ಬೋಳು ತಲೆಯ ಬಗ್ಗೆ ತಮಾಷೆ ಮಾಡುವುದು ಕೂಡಾ ಒಂದು ರೀತಿಯ ಲೈಂಗಿಕ ಕಿರುಕುಳ. ಹೀಗೆ ಯಾವತ್ತೂ ಬೋಳು ತಲೆಯ ಬಗ್ಗೆ ತಮಾಷೆ ಮಾಡಕೂಡದೂ ಎಂದು ಬಾಸ್‌ಗೆ ನ್ಯಾಯಾಲಯ ಕ್ಲಾಸ್‌ ತೆಗೆದುಕೊಂಡಿದೆ.

No Ads
No Reviews
No Ads

Popular News

No Post Categories
Sidebar Banner
Sidebar Banner