No Ads

‘ಜೈಲರ್ 2’ ರಜನಿಕಾಂತ್ ಜೊತೆ ಅತಿಥಿ ಪಾತ್ರ ; ಬಾಲಯ್ಯ ಕೇಳಿದ್ದು 50 ಕೋಟಿ ರೂಪಾಯಿ…!

ಮನರಂಜನೆ 2025-05-10 12:47:55 298
post

ಜೈಲರ್ 2’ (Jailer 2 Movie) ಸಿನಿಮಾಗೆ ಈಗ ಪಾತ್ರವರ್ಗದ ಆಯ್ಕೆ ನಡೆಯುತ್ತಿದೆ. ರಜನಿಕಾಂತ್ ಅವರು ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದ ಶೂಟ್ ಕೇರಳದಲ್ಲಿ ನಡೆಯಲಿದೆ. ಬಾಲಯ್ಯ ಅವರು ಈ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇದಕ್ಕಾಗಿ ಅವರು ಬರೋಬ್ಬರಿ 50 ಕೋಟಿ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ ಎಂದು ವರದಿ ಆಗಿದೆ. ಈ ವಿಚಾರ ಕೇಳಿ ಅವರ ಅಭಿಮಾನಿಗಳಿಗೆ ಶಾಕ್ ಹಾಗೂ ಅಚ್ಚರಿ ಎರಡೂ ಆಗಿದೆ.

 

‘ಜೈಲರ್’ ಸಿನಿಮಾದಲ್ಲಿ ನಿರ್ದೇಶಕರು ಒಂದು ತಂತ್ರವನ್ನು ಉಪಯೋಗಿಸಿದ್ದರು. ಅದುವೇ ಅತಿಥಿ ಪಾತ್ರ. ಶಿವರಾಜ್​ಕುಮಾರ್, ಮೋಹನ್​ಲಾಲ್, ಜಾಕಿ ಶ್ರಾಫ್ ಅವರನ್ನು ಅತಿಥಿ ಪಾತ್ರದಲ್ಲಿ ಕರೆತಂದು ಎಲ್ಲರ ಗಮನ ಸೆಳೆದರು. ಅದರಲ್ಲೂ ಶಿವರಾಜ್​ಕುಮಾರ್ ತೋರಿದ ಮಾಸ್ ಅವತಾರಕ್ಕೆ ಫ್ಯಾನ್ಸ್ ಫ್ಲ್ಯಾಟ್ ಆಗಿಬಿಟ್ಟರು. ತಮಿಳು, ತೆಲುಗು ಮಂದಿ ಕೂಡ ಶಿವಣ್ಣನ ಅವತಾರಕ್ಕೆ ಸಿಳ್ಳೆ ಹೊಡೆದರು. ಈಗ ಇದೇ ತಂತ್ರವನ್ನು ಎರಡನೇ ಪಾರ್ಟ್​ನಲ್ಲೂ ಮುಂದುವರಿಸಿಕೊಂಡು ಹೊಗುವ ಆಲೋಚನೆಯಲ್ಲಿ ಅವರಿದ್ದಾರೆ.

ಬಾಲಯ್ಯ ಅವರಿಗೆ ಈ ಚಿತ್ರದ ಆಫರ್ ನೀಡಲಾಗಿದೆ. ಬರೋಬ್ಬರಿ 20 ದಿನಗಳ ಕಾಲ ಚಿತ್ರದ ಶೂಟ್​ಗೆ ಪ್ಲ್ಯಾನ್ ಮಾಡಲಾಗಿದೆ. ಇದಕ್ಕಾಗಿ ಬಾಲಯ್ಯ ತೆಗೆದುಕೊಳ್ಳುತ್ತಿರುವು 50 ಕೋಟಿ ರೂಪಾಯಿ. ಅಂದರೆ ಒಂದು ದಿನದ ಶೂಟ್​ಗೆ ಅವರು ಬರೋಬ್ಬರಿ 2.5 ಕೋಟಿ ರೂಪಾಯಿ ಚಾರ್ಜ್ ಮಾಡಿದಂತಾಗಲಿದೆ. ಈ ಬಗ್ಗೆ ಯಾವುದೇ ಅಧಿಕೃತ ಘೋಷಣೆ ಆಗಿಲ್ಲ.

2023ರಲ್ಲಿ ‘ಜೈಲರ್’ ಸಿನಿಮಾ ರಿಲೀಸ್ ಆಗಿ ಹಿಟ್ ಆಯಿತು. ರಜನಿಕಾಂತ್ ಅವರು ‘ಟೈಗರ್’ ಮುತ್ತವೇಲ್ ಪಾಂಡಿಯನ್ ಪಾತ್ರದಲ್ಲಿ ಕಾಣಿಸಿಕೊಂಡರು. ನಿವೃತ್ತ ಜೈಲರ್ ಕಥೆಯನ್ನು ಇದು ಒಳಗೊಂಡಿತ್ತು. ರಜನಿಕಾಂತ್ ಅವರ ಬೋಲ್ಡ್ ಅವತಾರ ನೋಡಿ ಫ್ಯಾನ್ಸ್ ಖುಷಿಯಾಗಿದ್ದರು. ಇದರಲ್ಲಿ ವಿನಾಯಕನ್ ಅವರು ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡರೆ, ರಮ್ಯಾ ಕೃಷ್ಣನ್ ಅವರು ರಜನಿ ಪತ್ನಿ ಪಾತ್ರ ಮಾಡಿದ್ದರು. ತಮನ್ನಾ ಭಾಟಿಯಾ ಅವರು ಸಖತ್ ಬೋಲ್ಡ್ ಆಗಿ ಹೆಜ್ಜೆ ಹಾಕಿದ್ದರು.

ರಜನಿಕಾಂತ್ ಅವರ ‘ಕೂಲಿ’ ಸಿನಿಮಾ ಈ ವರ್ಷ ಆಗಸ್ಟ್ 14ರಂದು ತೆರೆಗೆ ಬರಲಿದೆ. ಆ ಬಳಿಕ ಅವರ ನಟನೆಯ ‘ಜೈಲರ್ 2’ ಬಿಡುಗಡೆ ಕಾಣಲಿದೆ. ನೆಲ್ಸನ್ ದಿಲೀಪ್​ಕುಮಾರ್ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

No Ads
No Reviews
No Ads

Popular News

No Post Categories
Sidebar Banner
Sidebar Banner