No Ads

ISRO: ಬಾಹ್ಯಾಕಾಶ ಇತಿಹಾಸದಲ್ಲೇ ಹೊಸ ಸಾಧನೆ; ಭಾರತದ ಕೀರ್ತಿ ಮತ್ತಷ್ಟು ಎತ್ತರಕ್ಕೆ

India 2025-01-16 12:51:22 642
post

ಇಸ್ರೋ ಭಾರತದ ಬಾಹ್ಯಾಕಾಶ ಇತಿಹಾಸದಲ್ಲೇ ಹೊಸ ಸಾಧನೆ ಮಾಡಿದ್ದು ಅಂತರಿಕ್ಷದಲ್ಲಿ ಈಗ ಮನುಷ್ಯರ ಸಹಾಯ ಇಲ್ಲದೆಯೇ, ಎರಡು ಉಪಗ್ರಹ ನಡುವೆ ಡಾಕಿಂಗ್ ಮಾಡಿದೆ. ಅಂದ್ರೆ, ಭೂಮಿಯ ಕಕ್ಷೆಯಲ್ಲಿ ಸುತ್ತುವ 2 ಉಪಗ್ರಹದ ಮೇಲೆ ಭೂಮಿ ಮೇಲಿಂದ ನಿಯಂತ್ರಣ ಸಾಧಿಸಿ & ಒಂದನ್ನು ಮತ್ತೊಂದಕ್ಕೆ ಕೂಡಿಸುವ ಪ್ರಕ್ರಿಯೆ ಈಗ ಯಶಸ್ವಿಯಾಗಿದೆ. ಈ ರೀತಿ ಸಾಧನೆ ಮಾಡಿರುವುದು ಜಗತ್ತಿನ ಕೆಲವೇ ಕೆಲವು ದೇಶಗಳು. ಆ ಪಟ್ಟಿಗೆ ಭಾರತದ ಹೆಮ್ಮೆ 'ಇಸ್ರೋ' ಸಂಸ್ಥೆ ಕೂಡ ಇದೀಗ ಸೇರ್ಪಡೆಯಾಗಿದೆ.

ಅಂದಹಾಗೆ 2024 ರ ಕೊನೆಯಲ್ಲಿ ಅಂದ್ರೆ ಡಿಸೆಂಬರ್ 30 ರಂದು 'ಇಸ್ರೋ' ಸಂಸ್ಥೆ ಉಪಗ್ರಹ ಉಡಾವಣೆ ಮಾಡಿತ್ತು. ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋ ಮಹತ್ವದ ಉಡಾವಣೆ ಮಾಡಿತ್ತು. 'ಸ್ಪೇಸ್ ಡಾಕಿಂಗ್ ಎಕ್ಸ್‌ಪರಿಮೆಂಟ್' ಯೋಜನೆ ಭಾಗವಾಗಿ ಒಟ್ಟು 2 ಉಪಗ್ರಹ ಉಡಾವಣೆ ಮಾಡಿ, ಸುಮಾರು 17 ದಿನಗಳ ಕಾಲ ಕಾಯಲಾಗಿತ್ತು. ಇಂದು ಇಸ್ರೋ ತನ್ನ ಕಾರ್ಯದಲ್ಲಿ ಸಕ್ಸಸ್ ಕಂಡಿದೆ.

'ಇಸ್ರೋ' ವಿಜ್ಞಾನಿಗಳು ಇಂದು ಯಶಸ್ವಿಯಾಗಿ 2 ಉಪಗ್ರಹಗಳ ಡಾಕಿಂಗ್ ಮಾಡಿದ್ದಾರೆ. ಈ ಸಾಧನೆ ಮಾಡಲು ಹಲವು ದಶಕದಿಂದ ಕೂಡ ಭಾರತದ 'ಇಸ್ರೋ' ವಿಜ್ಞಾನಿಗಳು ಪ್ರಯತ್ನ ಆರಂಭಿಸಿದ್ದರು. ಇದೀಗ, ತಮ್ಮ ಕಾರ್ಯದಲ್ಲಿ ಯಶಸ್ಸು ಪಡೆದಿದ್ದಾರೆ ಇಸ್ರೋ ವಿಜ್ಞಾನಿಗಳು. ಮತ್ತೊಂದು ಕಡೆ ಈ ಸಾಧನೆಯಿಂದಾಗಿ, ಮನುಷ್ಯರು ಭವಿಷ್ಯದಲ್ಲಿ ಬಾಹ್ಯಾಕಾಶ ಲೋಕದಲ್ಲಿ ಇನ್ನಷ್ಟು ನಿಯಂತ್ರಣ ಸಾಧಿಸಲು ಸಾಧ್ಯವಾಗಲಿದೆ.

2 ಬಾಹ್ಯಾಕಾಶ ನೌಕೆಗಳ ಡಾಕಿಂಗ್ & ಅನ್‌ಡಾಕಿಂಗ್‌ ಎಂದರೆ, 2 ಬಾಹ್ಯಾಕಾಶ ನೌಕೆಗಳನ್ನು ಒಂದಕ್ಕೊಂದು ಜೋಡಿಸುವುದು ಹಾಗೂ ಬೇರ್ಪಡಿಸುವ ಪ್ರಯೋಗವೇ ಆಗಿದೆ. ಈವರೆಗೂ ಈ ಸಾಧನೆ ಮಾಡಿದ್ದ ದೇಶಗಳ ಪೈಕಿ ಅಮೆರಿಕ, ರಷ್ಯಾ, ಚೀನಾ ಮಾತ್ರ ಮುನ್ನೆಲೆಯಲ್ಲಿ ಇದ್ದವು. ಇದೀಗ ಭಾರತ ಕೂಡ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದು, ಮುಂದಿನ ದಿನಗಳಲ್ಲಿ ಭಾರತದ ಬಾಹ್ಯಾಕಾಶ ಲೋಕ ಮತ್ತಷ್ಟು ಎತ್ತರಕ್ಕೆ ಹೋಗುವ ನಿರೀಕ್ಷೆ ಇದೆ.

No Ads
No Reviews
No Ads

Popular News

No Post Categories
Sidebar Banner
Sidebar Banner