No Ads

ಬೆಂಗಳೂರಿನ ಖಾಸಗಿ ಶಾಲೆಗಳಲ್ಲಿ ಬೇಕಾಬಿಟ್ಟಿ ಶುಲ್ಕ ಹೆಚ್ಚಳ

ಕರ್ನಾಟಕ 2024-04-03 13:54:41 39
post

ಬೆಂಗಳೂರಿನ ಖಾಸಗಿ ಶಾಲೆಗಳಲ್ಲಿ ಬೇಕಾಬಿಟ್ಟಿ ಶುಲ್ಕ ಹೆಚ್ಚಳ ಬೆಂಗಳೂರು: ಸಿಲಿಕಾನ್ ಸಿಟಿಯ ಪೋಷಕರಿಗೆ ಇದು ಶಾಕಿಂಗ್ ಸುದ್ದಿ. ಮಕ್ಕಳ ಪರೀಕ್ಷೆಗಳು ಮುಗಿದು ಮುಂದಿನ ವಿದ್ಯಾಭ್ಯಾಸಕ್ಕೆ ಅಡ್ಮಿಶನ್‌ ಮಾಡಿಸಲು ಹೋದ ಪೋಷಕರಿಗೆ ಫೀಸ್ ಟ್ರಬಲ್ ಎದುರಾಗಿದೆ. ಬೆಂಗಳೂರಿನ ಕೆಲವು ಶಾಲೆಗಳು ಬೇಕಾಬಿಟ್ಟಿಯಾಗಿ ಫೀಸ್ ದರ ಏರಿಕೆ ಮಾಡಿದ್ದು, ಪೋಷಕರು ಅಕ್ಷರಶಃ ಕಂಗಾಲಾಗಿದ್ದಾರೆ.ಆದರೆ ಕೆಲವು ಶಾಲೆಗಳಲ್ಲಿ ಶೇಕಡಾ 30-40 ಶುಲ್ಕ ಏರಿಸಿರೋ ಆರೋಪ ಕೇಳಿ ಬಂದಿದೆ. ರಾಜಧಾನಿಯ ಕೆಲ ಶಾಲೆಗಳಲ್ಲಿ ಶುಲ್ಕ ಏರಿಕೆಯ ನೋಟಿಸ್ ಬೋರ್ಡ್‌ ನೋಡಿ ಪೋಷಕರು ಶಾಕ್‌ಗೆ ಒಳಗಾಗಿದ್ದಾರೆ. ಕ್ಯಾಮ್ಸ್ ಖಾಸಗಿ ಶಾಲೆಗಳ ಒಕ್ಕೂಟದಿಂದ ಶೇಕಡಾ 10-15ರಷ್ಟು ಶುಲ್ಕ ಏರಿಕೆಯಾಗಿದೆ. LKG-UKGಗೆ ಶುಲ್ಕದ ವಿವರ                ಪ್ರತಿಷ್ಠಿತ ಶಾಲೆಗಳು : 1.5 ಲಕ್ಷದಿಂದ 2.5 ಲಕ್ಷ ರೂಪಾಯಿಗೆ ಏರಿಕೆ ಮೀಡಿಯಂ ಶಾಲೆಗಳು : 50,000 ದಿಂದ 1 ಲಕ್ಷ ರೂಪಾಯಿಗೆ ಏರಿಕೆ ಬಜೆಟ್ ಶಾಲೆಗಳು : 20 ರಿಂದ 50 ಸಾವಿರ ರೂಪಾಯಿಗೆ ಏರಿಕೆ 1 ರಿಂದ 5ನೇ ತರಗತಿ ಶುಲ್ಕದ ವಿವರ ಪ್ರತಿಷ್ಠಿತ ಶಾಲೆಗಳು : 1 ರಿಂದ 3 ಲಕ್ಷ ಮೀಡಿಯಂ ಶಾಲೆಗಳು : 50,000 ದಿಂದ 1 ಲಕ್ಷ ಬಜೆಟ್ ಶಾಲೆಗಳು : 40 ರಿಂದ 70 ಸಾವಿರ 8 ರಿಂದ 10ನೇ ತರಗತಿಗೆ ಶುಲ್ಕದ ವಿವರ ಪ್ರತಿಷ್ಠಿತ ಶಾಲೆಗಳು : 2 ರಿಂದ 4 ಲಕ್ಷ ಮೀಡಿಯಂ ಶಾಲೆಗಳು : 1 ರಿಂದ 2 ಲಕ್ಷ ಬಜೆಟ್ ಶಾಲೆಗಳು : 50,000 ದಿಂದ 1 ಲಕ್ಷ ಈ ಶುಲ್ಕದ ದರ ಏರಿಕೆಯಿಂದ ಶಾಲೆಗಳ ಆರಂಭಕ್ಕೂ ಮೊದಲೇ ಪೋಷಕರಿಗೆ ಬಿಗ್ ಶಾಕ್ ಎದುರಾಗಿದೆ. ರಾಜಧಾನಿಯಲ್ಲಿ ಕೆಲವು ಖಾಸಗಿ ಶಾಲೆಗಳು ಈಗಾಗಲೇ ದಾಖಲಾತಿಯನ್ನ ಶುರು ಮಾಡಿದ್ದು, ಶೇ 30-40% ಶುಲ್ಕ ಏರಿಕೆ ಮಾಡಿರುವ ಬಗ್ಗೆ ಆರೋಪ ಪೋಷಕರ ವಲಯದಲ್ಲಿ ಕೇಳಿ ಬಂದಿದೆ. ಈ ರೀತಿ ಹಣ ಸುಲಿಗೆ ಮಾಡಿದ್ರೆ ನಾವು ಫೀಸ್ ಕಟ್ಟೋದಾದರು ಹೇಗೆ ಅನ್ನೋ ಆತಂಕದಲ್ಲಿ ಪೋಷಕರಿದ್ದಾರೆ.ಖಾಸಗಿ ಶಾಲೆಗಳ ಶುಲ್ಕದ ಬಗ್ಗೆ ಕ್ಯಾಮ್ಸ್ ಪ್ರಧಾನ ಕಾರ್ಯದರ್ಶಿ ಶಶಿಕುಮಾರ್ ಅವರು ನ್ಯೂಸ್ ಫಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಕೆಲ ಶಾಲೆಗಳು 30ರಿಂದ 40 ರಷ್ಟು ಶುಲ್ಕ ಹೆಚ್ಚಳ ಮಾಡಿವೆ. ಕೆಲ ಶಾಲೆಗಳು ಈ ರೀತಿ ಮಾಡುವುದು ಒಪ್ಪುವಂತದ್ದು ಅಲ್ಲ . ಪ್ರತಿ ವರ್ಷ 10-15ರಷ್ಟು ವರ್ಷದಿಂದ ಹೆಚ್ಚಿಸಲು ಅವಕಾಶ ಇತ್ತು. ಆದರೆ ಈಗ ನಿಯಮಗಳು ಇಲ್ಲ ಅಂತ ಬೇಕಾಬಿಟ್ಟಿ ಶುಲ್ಕ ಹೆಚ್ಚಳ ಮಾಡುವುದು ಸರಿಯಲ್ಲ. ಶಿಕ್ಷಣದಲ್ಲಿ ವ್ಯಾಪಾರ ಹೆಚ್ಚಾಗುವುದನ್ನ ನಾವು ಕೂಡ ಖಂಡಿಸುತ್ತೇವೆ. ಪೋಷಕರು ಈ ದೂರು ದಾಖಲಿಸಬಹುದಾಗಿದೆ ಎಂದು ಶಶಿಕುಮಾರ್ ತಿಳಿಸಿದ್ದಾರೆ. ಸರ್ಕಾರಕ್ಕೆ ಖಾಸಗಿ ಶಾಲೆಗಳ ಫೀಸ್ ಇಂತಿಷ್ಟೇ ಇರಬೇಕು ಅಂತ ನಿರ್ಧಾರ ಮಾಡುವ ಹಕ್ಕಿಲ್ಲ. ಆದ್ರೆ ಪೋಷಕರು ದೂರು ಕೊಟ್ಟರೇ ಅಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರವಿದೆ. ಆದ್ರೆ ಪೋಷಕರು ಇಷ್ಟು ಪರದಾಟ ಅನುಭವಿಸಿದರೂ ಶಿಕ್ಷಣ ಇಲಾಖೆ ಮಾತ್ರ ಜಾಣ ಕುರುಡುತನ, ಜಾಣ ಕಿವುಡುತನ ತೋರುತ್ತಿರುವುದು ದುರಂತವೇ ಸರಿ. ಇನ್ನು ಮೇಲಾದರೂ ನಿದ್ದೆ ಕಣ್ಣಿಂದ ಆಚೆ ಬಂದು ಇಲಾಖೆ ಪೋಷಕರ ಸಮಸ್ಯೆಗೆ ಕಣ್ಣು ಬಿಟ್ಟು ಕಿವಿ ಕೊಟ್ಟು ಕೆಲಸ ಮಾಡಬೇಕಿದೆ.

No Ads
No Reviews
No Ads

Popular News

No Post Categories
Sidebar Banner
Sidebar Banner